Koffee with Karan 8: ಅವಳು ನನ್ನ ಸ್ಪರ್ಧಿಯೇ ಅಲ್ಲ; ದೀಪಿಕಾ ಬಗ್ಗೆ ಕರೀನಾ ಕಪೂರ್ ಖಾನ್ ಅಹಂಕಾರದ ಮಾತಿಗೆ ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

Koffee with Karan 8 : ವೃತ್ತಿಯಲ್ಲಿ ಅಸೂಯೆ ಅನ್ನೋದು ಎಲ್ಲಾ ಕಡೆ ಸಾಮಾನ್ಯವಾಗಿ ಇದ್ದೇ ಇರುತ್ತೆ. ಆದರೆ ಸಿನಿಮಾ ರಂಗದ (cinema) ವಿಚಾರ ಬಂದಾಗ ಈ ಅಸೂಯೆ ಅನ್ನೋದು ಸ್ವಲ್ಪ ಹೆಚ್ಚಾಗೇ ಇರುತ್ತೆ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಸಿನಿಮಾ ನಟಿಯರನ್ನು ಬೇರೆ ನಟಿಯರ ಬಗ್ಗೆ ಕೇಳಿದಾಗ ಅಥವಾ ಅವರಿಗೆ ಹೋಲಿಕೆ ಮಾಡಿ ಪ್ರಶ್ನೆ ಮಾಡಿದಾಗ ಸೊಕ್ಕಿನ ಉತ್ತರವನ್ನು ನೀಡೋದು ಆಗಾಗ ಕಂಡು ಬರುತ್ತದೆ. ಅನಂತರ ಈ ವಿಚಾರಗಳು ದೊಡ್ಡ ಸುದ್ದಿ ಆಗುತ್ತವೆ.

ಈಗ ಬಾಲಿವುಡ್ ನ ಸ್ಟಾರ್ ನಟಿ ಎನಿಸಿಕೊಂಡಿರುವ ಕರೀನಾ ಕಪೂರ್ ಖಾನ್ (Karina Kapoor Khan) ದೀಪಿಕಾ ಪಡುಕೋಣೆ ಬಗ್ಗೆ ಅಂತಹುದೇ ಒಂದು ಜಂಬದ ಮಾತನ್ನು ಆಡಿದ್ದು, ನೆಟ್ಟಿಗರು ನಟಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದ ಎಂಟನೇ ಸೀಸನ್ (Koffee With Karan) ಪ್ರಸಾರವಾಗುತ್ತಿದ್ದು, ಈ ಶೋ ಗೆ ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಅತಿಥಿಗಳಾಗಿ ಆಗಮಿಸಿದ್ದರು.

ರ್ಯಾಪಿಡ್ ಫೈಯರ್ ಸುತ್ತಿನಲ್ಲಿ ಕರಣ್ ಜೋಹರ್ ಕರೀನಾ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ (Deepika Padukone) ನಿಮಗೆ ಸ್ಪರ್ದಿಯೇ ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಕರೀನಾ ಯಾವುದೇ ಉತ್ತರ ಕೊಡಲಿಲ್ಲ. ಅದನ್ನ ಗಮನಿಸಿದ ಕರೆಂಟ್ ಜೋಹರ್ ಮತ್ತೊಮ್ಮೆ ಪ್ರಶ್ನೆಯನ್ನು ಪುನರಾವರ್ತನೆ ಮಾಡಿದ್ದಾರೆ. ಇದಕ್ಕೆ ಕರೀನಾ ಕಪೂರ್ ಬಹಳ ಸೊಕ್ಕಿನಿಂದ ಉತ್ತರವನ್ನು ನೀಡಿದ್ದಾರೆ.

ಕರೀನಾ ಕಪೂರ್ ಉತ್ತರ ನೀಡುತ್ತಾ, ಈ ಪ್ರಶ್ನೆಯನ್ನು ನನಗೆ ಯಾಕೆ ಕೇಳುತ್ತೀರಾ, ಅವಳು ನನಗ್ಯಾಕೆ ಸ್ಪರ್ಧಿ ಆಗ್ತಾಳೆ. ಅವಳೇನಿದ್ರು ಆಲಿಯಾ ಭಟ್ (Alia Bhat) ಸ್ಪರ್ಧಿಯಾಗಲು (ಹೊಸ ನಟಿಯರಿಗೆ) ಅಷ್ಟೇ ಸಾಧ್ಯ ಎಂದಿದ್ದಾರೆ. ಕೂಡಲೇ ಆಲಿಯಾ, ದೀಪಿಕಾ ನನ್ನ ಸೀನಿಯರ್, ಅವರು ನನಗೆ ಹೇಗೆ ಸ್ಪರ್ಧಿಯಾಗುತ್ತಾರೆ, ಈ ಪ್ರಶ್ನೆ ನನಗೂ ಅಲ್ಲ ಅಂತ ಹೇಳಿದ್ದಾರೆ.

ಕರೀನಾ ಕಪೂರ್ ಆಡಿದಂತಹ ಮಾತಿಗೆ ಸಹಜವಾಗಿಯೇ ದೀಪಿಕಾ ಪಡುಕೋಣೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಕರೀನಾ ಕಪೂರ್ ಗೆ ಅಹಂಕಾರ ಹೆಚ್ಚು, ಅವರೊಬ್ಬ ಅಹಂಕಾರಿ ಎನ್ನುವ ಮಾತುಗಳನ್ನು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Leave a Comment