ಕನ್ಯಾ ರಾಶಿಯಲ್ಲಿ ನೀವು ಹುಟ್ಟಿದ್ದೀರಾ ಹಾಗಾದರೆ ಖಂಡಿತ ನೀವು ಈ 22 ವಿಷಯವನ್ನು ತಿಳಿದಿರಲೇಬೇಕು!

Featured-Articles
58 Views

1 )ಕನ್ಯಾ ರಾಶಿಯು ಹೆಣ್ಣಿನ ರಾಶಿಯಾಗಿದೆ.

2 )ಕನ್ಯಾ ರಾಶಿಯ ಅಧಿಪತಿ ಬುಧ.

3 )ಬುಧ ಮಹಾವಿಷ್ಣುವಿನ ಅಂಶ ಎನ್ನಲಾಗುತ್ತದೆ.

4 )ಕನ್ಯಾ ರಾಶಿಯ ನಕ್ಷತ್ರಗಳು ಉತ್ತರಾಷಾಢ 2ನೇ ಪಾದ , 3ನೇ ಪಾದ , 4ನೇ ಪಾದ ,ಹಸ್ತಾ ನಕ್ಷತ್ರದ 4 ಪಾದಗಳು ,ಚಿತ್ತಾ ನಕ್ಷತ್ರದ 1ನೇ ಪಾದ ಮತ್ತು 2ನೇ ಪಾದಒಟ್ಟು 9 ಪಾದಗಳು ಸೇರಿ ಕನ್ಯಾ ರಾಶಿಯಾಗುತ್ತದೆ.

5 )ಕನ್ಯಾ ರಾಶಿಯವರ ಸ್ವಭಾವ ಉತ್ತಮ ಗುಣವುಳ್ಳವರು ,ಶಾಂತ ಸ್ವಭಾವದವರು ,ಸಹನೆ ಉಳ್ಳವರು , ಆಡಂಬರದ ಜೀವನವನ್ನು ಆಸೆ ಪಡುವವರು ,ಪರೋಪಕಾರದ ಬುದ್ದಿ ಜಾಸ್ತಿ ,ಸಹಾಯ ಮಾಡಲು ಮುಂದೆ ಇರುತ್ತಾರೆ ,ನಾಚಿಕೆಯ ಸ್ವಭಾವ ,ಜ್ಞಾಪಕ ಶಕ್ತಿ ಹೆಚ್ಚು ,ಸ್ವಂತ ಪ್ರಯತ್ನದಿಂದ ಇವರು ಕೀರ್ತಿ ಹೆಸರನ್ನು ಗಳಿಸುತ್ತಾರೆ.ಒಳ್ಳೆಯ ಭಾಷಣಕಾರರು ಸ್ಪಷ್ಟವಾಗಿ ಧೈರ್ಯವಾಗಿ ಮಾತನಾಡುವ ರಾಗಿರುತ್ತಾರೆ .ವಿದ್ಯೆಗೆ ಹೆಚ್ಚು ಮಹತ್ವ ನೀಡುತ್ತಾರೆ.ದಾನದ ಪ್ರವೃತ್ತಿ ಇವರದ್ದಾಗಿರುವುದರಿಂದ ದುಂದುವೆಚ್ಚವೂ ಸಹ ಮಾಡುತ್ತಾರೆ.

6 )ಕನ್ಯಾ ರಾಶಿಯವರಿಗೆ ಹೊಟ್ಟೆ ನೋವು , ಕರುಳು ಬಾಧೆ , ವಾಯು ಸಂಬಂಧ ದೋಷಗಳು ಇರುತ್ತವೆ.

7 )ಕನ್ಯಾ ರಾಶಿಯವರ ಅದೃಷ್ಟ ರತ್ನ ಪಚ್ಚೆ.

8 )ಕನ್ಯಾ ರಾಶಿಯವರಿಗೆ ಇಷ್ಟವಾದ ಬಣ್ಣ ಹಸಿರು ಮತ್ತು ಹಳದಿ.

9 )ಕನ್ಯಾ ರಾಶಿಯವರಿಗೆ ಬುಧವಾರ ಮತ್ತು ಶುಕ್ರವಾರ ದಿನಗಳು ಒಳ್ಳೆಯದಾಗಿದೆ.

10)ಕನ್ಯಾ ರಾಶಿಯವರ ಅದೃಷ್ಟದ ದಿನಾಂಕಗಳು 5 , 14 ಮತ್ತು 23 .

11 )ಕನ್ಯಾ ರಾಶಿಯವರ ಮಿತ್ರ ರಾಶಿಗಳು ಮೇಷ ರಾಶಿ , ಮಿಥುನ ರಾಶಿ ಮತ್ತು ಸಿಂಹ ರಾಶಿ.

12 )ಕನ್ಯಾ ರಾಶಿಯವರ ಶತ್ರು ರಾಶಿ ಕರ್ಕಾಟಕ ರಾಶಿ.

13 )ಕನ್ಯಾ ರಾಶಿಯವರ ವಿಶೇಷವಾದ ಗುಣ ಚುರುಕಾಗಿ ಕೆಲಸ ಮಾಡುತ್ತಾರೆ.ಯಾವುದೇ ಕಷ್ಟದ ಕೆಲಸಗಳನ್ನು ಕೊಟ್ಟರೂ ಸುಲಭವಾಗಿ ಮಾಡಿ ಮುಗಿಸಿಬಿಡುತ್ತಾರೆ.

14 )ಕನ್ಯಾ ರಾಶಿಯವರಿಗೆ ಉತ್ತರ ದಿಕ್ಕು ಆಗಿಬರುತ್ತದೆ.

15 )ಕನ್ಯಾ ರಾಶಿಯವರು ಭೂತತ್ತ್ವದವರಾಗಿರುತ್ತಾರೆ

16 )ಕನ್ಯಾ ರಾಶಿಯವರಿಗೆ ಮಂಗಳವಾರ ಅಶುಭವೆಂದು ಪರಿಗಣಿಸಲಾಗಿದೆ.

17 )ಕನ್ಯಾ ರಾಶಿಯವರು ಆಕರ್ಷಣೆ ಉಳ್ಳ ಮುಖವನ್ನು ಹೊಂದಿರುತ್ತಾರೆ.

18 )ಕನ್ಯಾ ರಾಶಿಯವರು ಚಂಚಲ ಮನಸ್ಸಿನವರಾಗಿರುತ್ತಾರೆ..

19 )ಕನ್ಯಾ ರಾಶಿಯವರಿಗೆ ಇಷ್ಟವಾದ ಉದ್ಯೋಗ ವ್ಯವಸಾಯ ,ಭೂ ವ್ಯವಹಾರ ,ಭೂ ವ್ಯಾಪಾರ ,ಇಂಜಿನಿಯರಿಂಗ್ ,ಭೂಮಿಗೆ ಸಂಬಂಧಪಟ್ಟ ಯಾವುದೇ ಕೆಲಸವಾದರೂ ಇವರಿಗೆ ಆಗಿ ಬರುತ್ತದೆ.

20 )ವಿವಾಹದ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ

21 )ಕನ್ಯಾ ರಾಶಿಯವರಿಗೆ ತಲೆಗಳಿಗೆ ಸಂಬಂಧಪಟ್ಟ ರೋಗಗಳು ಬರಬಹುದು.

22 )ಸಂಗೀತ,ಕಲೆ ,ಸಾಹಿತ್ಯ ,ನಟನೆ ,ಜ್ಯೋತಿಷ್ಯ ಶಾಸ್ತ್ರ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ,ಕಂಪ್ಯೂಟರ್ ಇತ್ಯಾದಿ ವಿಷಯಗಳಲ್ಲಿ ಇವರಿಗೆ ಹೆಚ್ಚಾಗಿ ಆಸಕ್ತಿ ಇರುತ್ತದೆ.

Leave a Reply

Your email address will not be published. Required fields are marked *