SIIMA 2023 ಕಾಂತಾರ ಗೆದ್ದ 10 ಪ್ರಶಸ್ತಿಗಳನ್ನ ಅಪ್ಪು ಸರ್ ಮತ್ತು ಕನ್ನಡಿಗರಿಗೆ ಸಮರ್ಪಿಸಿ ರಿಷಬ್ ಶೆಟ್ಟಿ ಹೇಳಿದ್ದೇನು?

0 47

Rishab Shetty : ಕಾಂತಾರ (Kantara) ರಿಷಬ್ ಶೆಟ್ಟಿ ಅವರ ಇಲ್ಲಿಯವರೆಗಿನ ವೃತ್ತಿ ಜೀವನದಲ್ಲೊಂದು ಮೈಲಿಗಲ್ಲಾದ ಸಿನಿಮಾ. ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಕಾಂತಾರ ಸಿನಿಮಾದಿಂದ ಸಿಕ್ಕ ಜನಪ್ರಿಯತೆ ಕೂಡಾ ಬಹಳ ದೊಡ್ಡದು. ಈಗ ಕಾಂತಾರ ಸೈಮಾ 2023 (SIIMA 2023) ರಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ಗೆದ್ದು ಹೊಸ ಇತಿಹಾಸವನ್ನು ರಚನೆ ಮಾಡಿದೆ.

ತಮ್ಮ‌ಕಾಂತಾರ ಸಿನಿಮಾಕ್ಕೆ ಪ್ರಶಸ್ತಿಗಳು ಸಿಕ್ಕ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಅವರು ಈ ಸಂಭ್ರಮವನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಕೆಲವು ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡಿದ್ದು, ಪೋಸ್ಟ್ ನೋಡಿದ ಜನರು ಶುಭ ಹಾರೈಸಿದ್ದಾರೆ. ರಿಷಬ್ ಶೆಟ್ಟಿ ಅವರು ತಮ್ಮ ಪೋಸ್ಟ್ ನಲ್ಲಿ, ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣ.

ಸೈಮಾ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ, ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮನ ತುಂಬಿ ಬಂದಿದೆ. ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆಯೇ ಇರಲಿ. ದೈವ ನರ್ತಕರು, ಅಪ್ಪು ಸರ್ (Appu Sir) ಹಾಗೂ ಕನ್ನಡಿಗರಿಗೆ ಈ ಎಲ್ಲಾ ಯಶಸ್ಸು ಸಮರ್ಪಣೆ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.