ಗರ್ಭಿಣಿ ಉಪಾಸನಾಗೆ ಬಹಳ ವಿಶೇಷ ಗಿಫ್ಟ್ ಕೊಟ್ಟ Jr. NTR ಪತ್ನಿ ಲಕ್ಷ್ಮಿ ಪ್ರಣತಿ: ಏನದು ವಿಶೇಷ ಗಿಫ್ಟ್ ??

Written by Soma Shekar

Published on:

---Join Our Channel---

Lakshmi Pranati : ಮೆಗಾಸ್ಟಾರ್ ಚಿರಂಜೀವಿ (Chiranjeevi) ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಗರ್ಭಿಣಿಯಾಗಿದ್ದು, ಇಡೀ ಕುಟುಂಬ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದೆ. ಮದುವೆಯ ಹತ್ತು ವರ್ಷಗಳ ನಂತರ ಇದೀಗ ರಾಮ್ ಚರಣ್ (Ram Charan) ಮತ್ತು ಉಪಾಸನಾ ತಂದೆ ತಾಯಿಯಾಗುತ್ತಿರುವುದು ಅವರ ಇಡೀ ಕುಟುಂಬಕ್ಕೆ ಸಂಭ್ರಮವನ್ನು ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಉಪಾಸನಾ ಮಗುವಿನಗೆ ಜನ್ಮ ನೀಡಲಿದ್ದು, ಅವರಿಗೆ ಸಾಕಷ್ಟು ಜನರಿಂದ ಶುಭ ಹಾರೈಕೆ ಗಳು ಹರಿದು ಬರುತ್ತಿದೆ. ಈಗ ಇವೆಲ್ಲವುಗಳ ನಡುವೆ ಜೂನಿಯರ್ ಎನ್ ಟಿ ಆರ್ ಪತ್ನಿ ಲಕ್ಷ್ಮಿ ಪ್ರಣತಿ ಉಪಾಸನಾಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ತುಂಬಿದೆ. ಕೆಲವೇ ದಿನಗಳ ಹಿಂದೆ ಅದ್ದೂರಿಯಾಗಿ ಬೇಬಿ ಶವರ್ ಪಾರ್ಟಿ ಸಹಾ ನಡೆದಿದೆ.

ಬೇಬಿ ಶವರ್ (baby shower) ಪಾರ್ಟಿಯಲ್ಲಿ ಉಪಾಸನಾ ಅವರ ಕುಟುಂಬದವರು ಮತ್ತು ಮೆಗಾ ಫ್ಯಾಮಿಲಿ ಸದಸ್ಯರು ಹಾಗೂ ಅವರ ಆಪ್ತರು ಪಾಲ್ಗೊಂಡು, ಉಪಾಸನಾ ಅವರಿಗೆ ಶುಭ ಹಾರೈಸಿದ್ದರು.

ಕಾರ್ಯಕ್ರಮಕ್ಕೆ ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ಜೂ. ಎನ್ ಟಿ ಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranati) ಸಹಾ ಆಗಮಿಸಿದ್ದರು. ಉಪಾಸನ ಮತ್ತು ಲಕ್ಷ್ಮೀ ಪ್ರಣತಿ ಉತ್ತಮ ಸ್ನೇಹಿತೆಯರಾಗಿದ್ದಾರೆ ಎನ್ನುವುದು ನಿಜ.

ಲಕ್ಷ್ಮಿ ಪ್ರಣತಿ ತಮ್ಮ‌ ಆತ್ಮೀಯ ಗೆಳತಿ ಉಪಾಸನಾ ಅವರಿಗೆ ತಾನೇ ಸಿದ್ಧಪಡಿಸಿದ ಉಡುಗೊರೆ ಯನ್ನು ನೀಡಿದ್ದಾರೆ. ದುಬಾರಿ ಉಡುಗೊರೆ ಅಲ್ಲದೇ ಹೋದರೂ ಬಹಳ ಪ್ರೀತಿಯಿಂದ ಸಿದ್ಧಪಡಿಸಿದ ಉಡುಗೊರೆಯನ್ನು ಅವರು ನೀಡಿದ್ದಾರೆ.‌

ಉಪಾಸನಾ ಅವರಿಗೆ ಇಷ್ಟವಾದಂತಹ ಸಿಹಿ ತಿನಿಸುಗಳನ್ನು ಲಕ್ಷ್ಮಿ ಪ್ರಣತಿ ಸಿದ್ಧಪಡಿಸಿಕೊಂಡು ಬಂದು, ಅದರ ಜೊತೆಗೆ ಕೆಲವು ಡ್ರೈ ಫ್ರೂಟ್ಸ್ ಉಡುಗೊರೆ ನೀಡಿದ್ದು, ಉಪಾಸನ ಅದನ್ನು ನೋಡಿ ಖುಷಿಯಾಗಿದ್ದಾರೆ. ‌

ಉಪಾಸನಾ ಅವರ ಬೇಬಿ ಶವರ್ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜುಲೈ ತಿಂಗಳಲ್ಲಿ ಅವರು ಮಗುವಿಗೆ ಜನ್ಮ‌ ನೀಡಲಿದ್ದಾರೆ‌ ಎನ್ನಲಾಗಿದೆ.

ನಟ ರಾಮ್ ಚರಣ್ ಪತ್ನಿ ತುಂಬು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ನಡುವೆಯೂ ಹೆಚ್ಚು ಸಮಯವನ್ನು ಪತ್ನಿಯೊಂದಿಗೆ ಕಳೆಯುತ್ತಿದ್ದಾರೆ.

ಪ್ರಸ್ತುತ ರಾಮ್ ಚರಣ್ ಶಂಕರ್ ನಿರ್ದೇಶನ ಗೇಮ್ ಚೇಂಜರ್ (Game Changer) ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಇದರಲ್ಲಿ ಬಾಲಿವುಡ್ ಬೆಡಗಿ ಕಿಯಾರ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Leave a Comment