3 ವರ್ಷಕ್ಕೆ ಲಾಕ್ ಆದ Jr.NTR: ಬೇರೆ ಯಾವುದೇ ಹೊಸ ಸಿನಿಮಾಕ್ಕೆ ನಟ ಸಿಗೋದಿಲ್ವಂತೆ

Written by Soma Shekar

Published on:

---Join Our Channel---

ಕೆಜಿಎಫ್(KGF) ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರನ್ನು ಪಡೆದಿರುವ ನಿರ್ದೇಶಕ ಪ್ರಶಾಂತ ನೀಲ್(Prashant Neel) ಮತ್ತು ತ್ರಿಬಲ್ ಆರ್(RRR) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಜೂನಿಯರ್ ಎನ್ಟಿಆರ್(Jr. NTR) ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಒಂದು ಬರಲಿದೆ ಎನ್ನುವ ವಿಷಯ ಬಹಳಷ್ಟು ದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಅಲ್ಲದೆ ಆ ಸಿನಿಮಾದ ಪೋಸ್ಟರ್ ಕೂಡಾ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿತ್ತು. ಪ್ರಸ್ತುತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಸಲಾರ್ ಸಿನಿಮಾದ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ.

ನಟ ಜೂನಿಯರ್ ಎನ್ ಟಿ ಆರ್ ತ್ರಿಬಲ್ ಆರ್ ಸಿನಿಮಾದ ನಂತರ ತೆಲುಗಿನ ಪ್ರಖ್ಯಾತ ನಿರ್ದೇಶಕ ಕೊರಟಾಲ ಶಿವ(Koratala Shiva) ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ  ವಿಷಯ ಸುದ್ದಿಯಾಗಿದೆ. ಪ್ರಶಾಂತ್ ನೀಲ್ ಸಲಾರ್ (Salar) ಸಿನಿಮಾದ ನಂತರ ಮತ್ತು ಜೂನಿಯರ್ ಎನ್ ಟಿ ಆರ್ ತಮ್ಮ ಪ್ರಸ್ತುತ ಸಿನಿಮಾ ಮುಗಿಸಿದ ನಂತರ ಈ ಜೋಡಿಯ ಕಾಂಬಿನೇಷನ್ ನ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಆದರೆ ಇದೀಗ ಈ ಕುರಿತಾಗಿ ಒಂದು ಹೊಸ ಅಪ್ಡೇಟ್ ಒಂದು ಹೊರ ಬಂದಿದೆ.

ಈಗ ಹೊರ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ ಟಿ ಆರ್ ಕಾಂಬಿನೇಷನ್(Jr NTR Prashant Neel) ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದು, ಈ ಸಿನಿಮಾಕ್ಕಾಗಿ ಜೂನಿಯರ್ ಎನ್ ಟಿ ಆ ರ್ ತಮ್ಮ ಮೂರು ವರ್ಷಗಳ ಸಮಯವನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನೀಡಿದ್ದಾರೆ ಎನ್ನಲಾಗಿದ್ದು, ಆ ಮೂರು ವರ್ಷಗಳಲ್ಲಿ ಅವರು ಬೇರೆ ಯಾವುದೇ ಹೊಸ ಪ್ರಾಜೆಕ್ಟ್ ಮಾಡುವುದಿಲ್ಲ ಎನ್ನಲಾಗಿದೆ. ಈ ಹೊಸ ಅಪ್ಡೇಟ್ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.‌

Leave a Comment