IPL 2022: RCB ಕಪ್ ಗೆಲ್ಲೋವರ್ಗೂ ನಾನು ಮದುವೆ ಆಗಲ್ಲ: RCB ಅಭಿಮಾನಿ ಫೋಟೋ ವೈರಲ್

Entertainment Featured-Articles News Sports

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಿನ್ನೆ ನಡೆದಂತಹ ಐಪಿಎಲ್ ಪಂದ್ಯ ರೋಚಕವಾಗಿತ್ತು. ಆರ್ ಸಿ ಬಿ 23 ರನ್ ಗಳ ಅಂತರದಲ್ಲಿ ಸಿ ಎಸ್ ಕೆ ಎದುರು ಸೋಲನ್ನು ಒಪ್ಪಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿನ್ನೆ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ ನಿನ್ನೆಯ ಪಂದ್ಯದಿಂದ ಮರುಜೀವ ಬಂದಂತಾಗಿದೆ. ರವೀಂದ್ರ ಜಡೇಜಾ ಕ್ಯಾಪ್ಟನ್ ಶಿಪ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಗೆಲುವನ್ನು ಸಾಧಿಸಿದೆ.

ನಿನ್ನೆಯ ಮ್ಯಾಚ್ ಮುಗಿದ ನಂತರ ಸಹಜವಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಆರ್ ಸಿ ಬಿ ಸೋತಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಕೆಲವರು ಟ್ವಿಟರ್ ನಲ್ಲಿ ಈ ಕುರಿತು ಟ್ರೋಲ್ ಮಾಡಿದ್ದಾರೆ. ಆರ್ ಸಿ ಬಿ ಯ ಈ ಸೋಲಿಗೆ ಪ್ರಮುಖ ಕಾರಣ ತಂಡದ ಕ್ಯಾಪ್ಟನ್ ಫಾಫ್ ಡಿ ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಆದರೆ ಇವೆಲ್ಲವುಗಳ ನಡುವೆಯೇ ನಿನ್ನೆ ಮ್ಯಾಚ್ ನೋಡಲು ಬಂದಿದ್ದಂತಹ ಯುವತಿಯೊಬ್ಬಳು ತನ್ನ ಕೈಯಲ್ಲಿ ಹಿಡಿದಿದ್ದ ಪೋಸ್ಟರ್ ಒಂದು ಈಗ ಸಖತ್ ಸದ್ದು ಮಾಡುತ್ತಿದೆ. ಯುವತಿ ಹಿಡಿದಿರುವ ಪೋಸ್ಟರ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಷ್ಟಕ್ಕೂ ಆ ಯುವತಿ ಹಿಡಿದಿದ್ದ ಪೋಸ್ಟರ್ ನಲ್ಲಿ ಏನಿದೆ, ಎನ್ನುವುದಾದರೆ ಅದರಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ತನ್ನ ನೆಚ್ಚಿನ ತಂಡ ಗೆಲ್ಲುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಬರೆಯಲಾಗಿದೆ.

ಯುವತಿ ಇಂತಹದೊಂದು ಪೋಸ್ಟರನ್ನು ಹಿಡಿದುಕೊಳ್ಳುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ತನ್ನ ಅಭಿಮಾನವನ್ನು ಪ್ರದರ್ಶನ ಮಾಡಿದ್ದಾಳೆ. ಇಂಟರ್ನೆಟ್ ನಲ್ಲಿ ಬಹಳಷ್ಟು ಜನರ ಗಮನವನ್ನು ಯುವತಿಯ ಈ ಫೋಟೋ ಸಹಜವಾಗಿಯೇ ಸೆಳೆಯುತ್ತಿದೆ. ಅಲ್ಲದೇ ಆರ್ ಸಿ ಬಿ ಅಭಿಮಾನಿಗಳು ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ, ಯುವತಿಯ ಅಭಿಮಾನಕ್ಕೆ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published.