IPL 2022: RCB ಇಂತದೊಂದು ದಾಖಲೆ ಬರೆಯುತ್ತೆ ಅಂತ ನಿರೀಕ್ಷೆ ಕೂಡಾ ಮಾಡಿರಲಿಲ್ಲ, ಅಭಿಮಾನಿಗಳು ಶಾಕ್

Entertainment Featured-Articles News Sports

ಐಪಿಎಲ್ 36 ನೇ ಪಂದ್ಯದಲ್ಲಿ ಆರ್ ಸಿ ಬಿ v/s ಎಸ್ ಆರ್ ಹೆಚ್ ಪಂದ್ಯದಲ್ಲಿ ಆರ್ ಸಿ ಬಿ ಒಂದು ಕೆಟ್ಟ ದಾಖಲೆಯನ್ನು ಬರೆಯುವ ಮೂಲಕ ಸುದ್ದಿಯಾಗಿದೆ. ಈ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡವು ಟಾಸ್ ಗೆದ್ದು, ಎಸ್ ಆರ್ ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಆರ್ ಸಿ ಬಿ ಫಾಫ್ ಡು ಫ್ಲೆಸಿಸ್ ಕೇವಲ ನಾಲ್ಕು ರನ್ ಗಳನ್ನು ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಹಾಗೂ ಅನೂಜ್ ರಾವತ್ ಶೂನ್ಯಕ್ಕೆ ಔಟ್ ಆಗಿ ಹೋಗುವ ಮೂಲಕ ಅಭಿಮಾನಿಗಳಿಗೆ ತೀವ್ರವಾದ ನಿರಾಸೆಯನ್ನು ಉಂಟು ಮಾಡಿದ್ದಾರೆ.

ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಸುಯೇಶ್ ಪ್ರಭು ದೇಸಾಯಿ ಕೇವಲ ಎರಡಂಕಿ ಗಳಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ನಂತರ ಒಂದರ ಹಿಂದೆ ಮತ್ತೊಂದು ಎನ್ನುವಂತೆ ವಿಕೆಟ್ ಕಳೆದುಕೊಂಡು ಆರ್ ಸಿ ಬಿ ಕೇವಲ 68 ರನ್ ಗಳನ್ನು ಗಳಿಸಿ ಆಲ್ ಔಟ್ ಆಗಿದ್ದು ಅಭಿಮಾನಿಗಳಿಗಂತೂ ಬೇಸರ, ಅಸಮಾಧಾನವನ್ನು ಮೂಡಿಸಿದೆ. ಇದರೊಂದಿಗೆ ಐಪಿಎಲ್ ನಲ್ಲಿ 70 ರನ್ ಅಥವಾ ಅದಕ್ಕಿಂತ ಕಡಿಮೆ ರನ್ ಗಳ ಒಳಗೆ ಅತಿ ಹೆಚ್ಚು ಬಾರಿ ಆಲೌಟ್ ಆದ ತಂಡ ಎನ್ನುವ ಒಂದು ಕೆಟ್ಟ ದಾಖಲೆಗೆ ಆರ್ ಸಿ ಬಿ ಭಾಜನವಾಗಿದೆ.

ಐಪಿಎಲ್ ನಲ್ಲಿ ಎಂಟು ಬಾರಿ ಮಾತ್ರ ತಂಡಗಳು 70 ಅಥವಾ ಅದಕ್ಕಿಂತ ಕಡಿಮೆಗೆ ಆಲೌಟ್ ಆಗಿದೆ. ಈ ಪಟ್ಟಿಯಲ್ಲಿ ಆರ್ ಸಿ ಬಿ , ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ,ಕೆಕೆಆರ್ ತಂಡಗಳು ಮಾತ್ರವೇ ಇರುವುದು ವಿಶೇಷ ಎನಿಸಿದೆ. ಅಂದರೆ ಅತಿ ಕಡಿಮೆ ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಈ ನಾಲ್ಕು ತಂಡಗಳು ಇವೆ. ಅದರಲ್ಲೂ ಆರ್ ಸಿ ಬಿ ನಾಲ್ಕು ಬಾರಿ 70 ಕ್ಕಿಂತ ಕಡಿಮೆಗೆ ಅತಿ ಹೆಚ್ಚು ಆಲೌಟ್ ಆಗಿರುವ ಅಪಖ್ಯಾತಿಯನ್ನು ಪಡೆದುಕೊಂಡಿದೆ.

ಆರ್ ಸಿ ಬಿ ಕೆಕೆಆರ್ ವಿ ರು ದ್ಧ 49 ರನ್ ಗಳಿಗೆ, ಎಸ್ ಆರ್ ಹೆಚ್ ವಿ ರು ದ್ಧ 68 ರನ್ ಗಳಿಗೆ, ಸಿ ಎಸ್ ಕೆ ವಿ ರು ದ್ಧ 70 ರನ್ ಗಳಿಗೆ, ರಾಜಸ್ಥಾನ್ ರಾಯಲ್ಸ್ ವಿ ರು ದ್ಧ ಸಹಾ 70 ರನ್ ಗಳಿಗೆ ಆಲ್ ಔಟ್ ಆಗಿದೆ. ಇದಲ್ಲದೇ ಐಪಿಎಲ್ ನಲ್ಲಿ ನೂರು ರನ್ ಗಳಿಗಿಂತ ಕಡಿಮೆಗೆ ಆಲ್ ಔಟ್ ಆದಂತಹ ತಂಡಗಳ ಪಟ್ಟಿಯಲ್ಲಿ ಆರ್ ಸಿ ಬಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ‌. ಆರ್ ಸಿ ಬಿ ಎಂಟು ಬಾರಿ ಐಪಿಎಲ್ ನಲ್ಲಿ 100 ರನ್ ಗಳಿಗಿಂತ ಕಡಿಮೆಗೆ ಆಲ್ ಔಟ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದರಲ್ಲಿ ಮೊದಲ ಸ್ಥಾನ ಪಡೆದಿದೆ.

Leave a Reply

Your email address will not be published.