IPL 2022: ನಡೆಯದ ಧೋನಿ ಮ್ಯಾಜಿಕ್: ಅಂತ್ಯವಾಯ್ತಾ ಚೆನ್ನೈ ಸೂಪರ್ ಕಿಂಗ್ಸ್ ಹಾದಿ??

Written by Soma Shekar

Published on:

---Join Our Channel---

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುನ್ನಡೆಯುವ ಹಾದಿಯು ಬಹುತೇಕ ಕೊನೆಯ ಹಂತಕ್ಕೆ ಬಂದಂತೆ ಕಾಣುತ್ತಿದೆ. ಸೋಮವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಂತಹ ಪಂದ್ಯದಲ್ಲಿ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಶರಣಾಗಿದೆ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವನ್ನು ಕಂಡಿದ್ದು, ಆರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಇನ್ನು ಇದೀಗ ಪ್ಲೇ ಆಫ್ ಸುತ್ತಿಗೆ ಪ್ರವೇಶ ನೀಡಬೇಕು ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿದ ಪಂದ್ಯಗಳನ್ನು ಗೆಲ್ಲುವ ಅವಶ್ಯಕತೆ.

ಚೆನ್ನೈ ಸೂಪರ್ ಕಿಂಗ್ಸ್ ನ‌ ಮುಂದಿನ ಹಾದಿಯು ಬೇರೆ ಬೇರೆ ತಂಡಗಳ ಫಲಿತಾಂಶದ ಮೇಲೆ, ಅವುಗಳ ಹಾದಿಯ ಮೇಲೆ ನಿರ್ಣಾಯಕವಾಗಲಿದೆ. ಕಳೆದ ಪಂದ್ಯದಲ್ಲಿ ಅಂದರೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೆಲ್ಲುವುದಕ್ಕೆ 17 ರನ್ನುಗಳ ಅವಶ್ಯಕತೆಯಿತ್ತು. ಆಗ ಎಂಎಸ್ ಧೋನಿ ಪಂದ್ಯಕ್ಕೆ ಅತ್ಯುತ್ತಮವಾದ ಫಿನಿಶಿಂಗ್ ನೀಡಿದ್ದರು. ಆದರೆ ಈ ಬಾರಿ ಆರು ಎಸೆತಗಳಲ್ಲಿ ಒಟ್ಟು 27 ರನ್ನುಗಳ ಅವಶ್ಯಕತೆಯಿತ್ತು. ಮೊದಲನೇ ಎಸೆತದಲ್ಲಿ ಸಿಕ್ಸ್ ಹೊಡೆದ ಎಂಎಸ್ ಧೋನಿ ಮೂರನೇ ಬಾಲ್ ನಲ್ಲಿ ಔಟಾದರು.

ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಸೋಲು ಎದುರಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡದ ಶಿಖರ್ ಧವನ್ ಅವರ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಧವನ್ ಹಾಗೂ ರಾಜಪಕ್ಷೆಯವರ ಉತ್ತಮವಾದ ಜೋಡಿ ಆಟ ಸಿ ಎಸ್ ಕೆ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿತ್ತು. 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 187 ರನ್ ಗಳನ್ನು ಕಲೆ ಹಾಕಿತ್ತು.

ಇಂತಹದೊಂದು ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಸಿ ಎಸ್ ಕೆ ತಂಡದ ಆರಂಭ ಅಷ್ಟೊಂದು ಉತ್ತಮವಾಗಿರಲಿಲ್ಲ. ಅಲ್ಲದೇ ತಂಡವು 40 ರನ್ ಗಳನ್ನು ಮಾಡುವ ವೇಳೆಗೆ ರಾಬಿನ್ ಉತ್ತಪ್ಪ,‌ ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆಯವರ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತಿಮ ಓವರ್ ನಲ್ಲಿ ಕ 27 ರನ್ ಗಳ ಅವಶ್ಯಕತೆ ಇತ್ತು. ಆದರೆ ಈ ಬಾರಿ ಉತ್ತಮ ಫಿನಿಶರ್ ಎಂ ಎಸ ಧೋನಿಗೆ ಪಂದ್ಯವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಗಲಿಲ್ಲ. ಅಂತಿಮ ವಿಕೆಟ್ ನಷ್ಟಕ್ಕೆ ಸಿ ಎಸ್ ಕೆ ಕೇವಲ 126 ರನ್ ಗಳನ್ನು ಮಾಡಲು ಮಾತ್ರವೇ ಸಾಧ್ಯವಾಗಿತ್ತು.

Leave a Comment