IPL 2022 : ಸಮೀಕ್ಷೆ ಪ್ರಕಾರ ಐಪಿಎಲ್ ನಲ್ಲಿ ಸಿ ಎಸ್ ಕೆ ಮಾಡಿದ ಸಾಧನೆ ಐಪಿಎಲ್ ಇತಿಹಾಸದಲ್ಲೇ ಗ್ರೇಟ್ ಅಂತೆ

Entertainment Featured-Articles News Sports

ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ನ ಹೊಸ ಆವೃತ್ತಿಗಳು ಬಂದಾಗಲೆಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕಾಗಿ ಸದೃಢ ಆಟಗಾರರನ್ನು ಭಾರೀ ಹಣ ನೀಡಿ ಖರೀದಿ ಮಾಡುತ್ತವೆ. ಪಂದ್ಯಾವಳಿಗಳು ಆರಂಭವಾದ ಮೇಲಂತೂ ಫ್ರಾಂಚೈಸಿಗಳು ಅವುಗಳ ತಂಡಗಳ ಹೆಸರುಗಳು ಸಖತ್ ಸದ್ದು ಮಾಡುತ್ತವೆ. ಪ್ರತಿಯೊಂದು ತಂಡವೂ ಸಹಾ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಪಡೆದಿವೆ. ಅಲ್ಲದೇ ಸಾಕಷ್ಟು ಜನಪ್ರಿಯತೆ ಸಹಾ ಪಡೆದಿವೆ. ಆದರೆ ಈಗ ಒಂದು ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ‌ ಫ್ರಾಂಚೈಸಿ ಯಾವುದು ಎನ್ನುವ ವಿಷಯವೊಂದು ಸುದ್ದಿಯಾಗಿದೆ.

ಓರ್ ಮ್ಯಾಕ್ಸ್ ಮೀಡಿಯಾ ಎನ್ನುವ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ‌ ಸಿ ಎಸ್ ಕೆ ತಂಡವು ಒಟ್ಟು 4.9 ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದೆ. ಇದರಲ್ಲಿ 2.25 ಕೋಟಿ ಅಭಿಮಾನಿಗಳು ಸಿ ಎಸ್ ಕೆ ತಂಡದ ಅಪ್ಪಟ ಅಭಿಮಾನಿಗಳು ಎನ್ನಲಾಗಿದ್ದು, ಈ ಸಂಖ್ಯೆಯು ಭಾರತದಲ್ಲಿ ಇರುವ ಫುಟ್ಬಾಲ್ ಅಭಿಮಾನಿಗಳು ಅಥವಾ ಪ್ರೇಮಿಗಳ ಸಂಖ್ಯೆಗೆ ಸಮ ಎನ್ನಲಾಗಿದೆ. ಐಪಿಎಸ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿ ಎಸ್ ಕೆ ತಂಡವು ಯಶಸ್ವಿ ತಂಡಗಳಲ್ಲಿ ಒಂದು ಎನ್ನುವ ಸ್ಥಾನವನ್ನು ಪಡೆದುಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿ ಎಸ್ ಕೆ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎನ್ನಲಾಗಿದೆ. ಇದು ಮಾತ್ರವೇ ಅಲ್ಲದೇ ಐಪಿಎಲ್ ನಲ್ಲಿ 10 ಕ್ಕಿಂತ ಹೆಚ್ಚು ಬಾರಿ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಯನ್ನು ಸಹಾ ಚೆನ್ನೈ ಸೂಪರ್ ಕಿಂಗ್ಸ್ ಪಡೆದುಕೊಂಡಿದೆ ಎನ್ನುವುದು ಮತ್ತೊಂದು ವಿಶೇಷ ಎಂದು ಸಮೀಕ್ಷೆ ವರದಿ ಮಾಡಿದೆ.

Leave a Reply

Your email address will not be published.