IPL 2022: ಸತತ ಸೋಲಿನಿಂದ ಕಂಗೆಟ್ಟ KKR: ಗರಂ ಆದ ಶ್ರೇಯಸ್ ಅಯ್ಯರ್ ಹೇಳಿದ್ದೇನು?

Entertainment Featured-Articles News Sports

ಐಪಿಎಲ್ 2022 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸೋಲಿನ ಸರಣಿಯು ಮುಂದುವರೆದಿದೆ. ತಂಡವು ಈಗಾಗಲೇ ಒಂಬತ್ತು ಪಂದ್ಯಗಳನ್ನು ಆಡಿದೆ. ಆದರೆ ಈ ಒಂಬತ್ತು ತಿಂಗಳ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿರುವುದು ಮೂರು ಪಂದ್ಯಗಳಲ್ಲಿ ಮಾತ್ರ. ಆರು ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿರುವ ತಂಡವು ಪಾಯಿಂಟ್ ಟೇಬಲ್ ನಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಗುರುವಾರ ವಾಂಖಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆಕೆಆರ್ ಅನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಲು ಸಫಲವಾಗಿದ್ದು, ಜಯಭೇರಿಯನ್ನು ಬಾರಿಸಿದೆ.

ಡೆಲ್ಲಿ ತಂಡವು 19 ಓವರ್ ಗಳಲ್ಲಿ 15೦ ರನ್ ಗಳನ್ನು ಪೇರಿಸಿ ಜಯವನ್ನು ತನ್ನದಾಗಿಸಿಕೊಂಡರೆ, ಕೆಕೆಆರ್ ತಂಡವು ಒಂಬತ್ತು ವಿಕೆಟ್ ಗಳ ನಷ್ಟಕ್ಕೆ 146 ರನ್ ಗಳನ್ನು ಮಾತ್ರವೇ ಮಾಡಿ, ಸೋಲಿನ ಹಾದಿ ಹಿಡಿಯಬೇಕಾಯಿತು. ಈ ಸೋಲಿನಿಂದಾಗಿ ಶ್ರೇಯಸ್ ಅಯ್ಯರ್ ಅವರ ತಂಡದ ಮುಂದಿನ ಹಾದಿಯು ಕಠಿಣವಾಗಿದೆ. ಪಂದ್ಯ ಮುಗಿದ ನಂತರ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಮಾತನಾಡಿದ್ದಾರೆ. ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಅವರು ಮಾತನಾಡುತ್ತಾ, ನಮ್ಮ ಆರಂಭ ತುಂಬಾ ನಿಧಾನವಾಗಿತ್ತು. ಅಲ್ಲದೇ ಜೊತೆಗೆ ವಿಕೆಟ್ ಗಳನ್ನು ಸಹಾ ಕಳೆದುಕೊಂಡ ಕಾರಣದಿಂದ ದೊಡ್ಡ ಮೊತ್ತವನ್ನು ಕಲೆ ಹಾಕುವುದು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆಯಿಲ್ಲ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಹುಡುಕಿ ಅದನ್ನು ಸರಿ ಮಾಡಿಕೊಳ್ಳಬೇಕಿದೆ. ಇಂಜುರಿ ಸಮಸ್ಯೆಯು ದೊಡ್ಡ ಮಟ್ಟದಲ್ಲಿ ತಂಡಕ್ಕೆ ಸಮಸ್ಯೆಯಾಗಿದ್ದು, ಇದರಿಂದಾಗಿಯೇ ತಂಡದ ಟಾಪ್ ಆರ್ಡರ್ ನಲ್ಲಿ ಬದಲಾವಣೆಗಳು ಆಗುತ್ತಿವೆ.

ಇದರಿಂದಾಗಿಯೇ ಆಟಗಾರರು ಸೆಟ್ ಆಗುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾವೆಲ್ಲಾ ಒಂದು ನಿರ್ಧಾರಕ್ಕೆ ಬದ್ಧರಾಗಿ, ಭಯ ಬಿಟ್ಟು ಆಡಬೇಕಾಗಿದೆ. ಇನ್ನೂ ಐದು ಪಂದ್ಯಗಳು ಉಳಿದಿದ್ದು, ಅದರಲ್ಲಿ ಚೆನ್ನಾಗಿ ಆಗಬೇಕು. ಮ್ಯಾನೇಜ್ಮೆಂಟ್ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎನ್ನುವ ಮಾತನ್ನು ಶ್ರೇಯಸ್ ಅಯ್ಯರ್ ಅವರು ಹೇಳಿದ್ದು, ಮುಂದಿನ ಪಂದ್ಯಗಳ ಕಡೆಗೆ ಭರವಸೆಯಿಂದ ಅಡಿಯಿಡಬೇಕಾಗಿದೆ ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಈ ಸೋಲಿನ ಬಗ್ಗೆ ನಾವು ಕುಳಿತು ಆಲೋಚನೆ ಮಾಡಬೇಕಾಗಿದೆ. ನಾವು ಎಡವಿದ್ದು ಎಲ್ಲಿ? ಅರಿಯಬೇಕಾಗಿದೆ. ಇದು ಅತಿಯಾದ ಆತ್ಮವಿಶ್ವಾಸ ಖಂಡಿತ ಅಲ್ಲ. ನಾವು ನಮ್ಮ ಅತ್ಯುತ್ತವನ್ನು ನೀಡಬೇಕಾಗಿದೆ. ಉಮೇಶ್ ಯಾದವ್ ಮೊದಲ ಬಾಲ್ ನಲ್ಲೇ ವಿಕೆಟ್ ಕಿತ್ತರೂ ಸಹಾ, ಅದೇ ಓವರ್ ನಲ್ಲಿ ಹನ್ನೊಂದು ರನ್ ಕೊಟ್ಟರು. ಅಲ್ಲಿಂದ ಆಟದ ದಿಕ್ಕು ಬದಲಾಯಿತು. ಉಮೇಶ್ ಯಾದವ್ ಈ ಹಿಂದೆ ನಮ್ಮ‌ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ ಶ್ರೇಯಸ್ ಅಯ್ಯರ್.

Leave a Reply

Your email address will not be published. Required fields are marked *