IPL 2022: ತಂದೆ ಕೊಲ್ಲ ಬಯಸಿದ, ತಾಯಿ ಹೋರಾಡಿದಳು: IPL ಸ್ಟಾರ್ ಆಟಗಾರನ ಹೋರಾಟದ ಕಥೆ!!

0 0

ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ರೋವ್ಮನ್ ಪಾವೆಲ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತನ್ನ ಬ್ಯಾಟಿಂಗ್ ಅಬ್ಬರವನ್ನು ಮೆರೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನ ಪರವಾಗಿ ಆಡುತ್ತಿರುವ ಪಾವೆಲ್ ಗುರುವಾರ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ 21 ಓಟಗಳಿಂದ ಅದ್ಭುತವಾದ ವಿಜಯವನ್ನು ತಂದುಕೊಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ
ಸ್ಟಾರ್ ಪ್ಲೇಯರ್ ಆಗಿ ರೋವ್ಮನ್ ಪಾವೆಲ್ ತನ್ನ ಸಾಮರ್ಥ್ಯವನ್ನು ಪ್ರದರ್ಶನವನ್ನು ಮಾಡಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

35 ಬಾಲ್ ಗಳಲ್ಲಿ 67 ರನ್ನುಗಳ ಮೂಲಕ ತೂಫಾನ್ ಸೃಷ್ಟಿಸುವಂತಹ ಇನ್ನಿಂಗ್ಸ್ ಆಡಿದ್ದಾರೆ. ಈ ಸಮಯದಲ್ಲಿ ಅವರು ಆರು ಲಾಂಗ್ ಸಿಕ್ಸ್ ಗಳನ್ನು ಹೊಡೆದರು. ಉಮ್ರಾನ್ ಮಲಿಕ್, ಸೀನ್ ಅಬೋಟಲ್ ಅನ್ನು ಒಂದು ಆಟವನ್ನಾಡಿಸಿದರು. ಈ ಸಮಯದಲ್ಲಿ ರೋವ್ಮನ್ ಪಾವೆಲ್ ಅವರ ಸ್ಟ್ರೈಕ್ ರೇಟ್ 191.43 ರಲ್ಲಿ ಇತ್ತು. 28 ವರ್ಷ ವಯಸ್ಸಿನ ಪಾವೆಲ್ ಅವರನ್ನು ಮೆಗಾ ಆ್ಯಕ್ಷನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2.80 ಕೋಟಿ ರೂ.ಗಳನ್ನು ನೀಡಿ ಖರೀದಿ ಮಾಡಿತ್ತು.

ವೆಸ್ಟ್ ಇಂಡೀಸ್ ನ ಜಮೈಕಾ ದಲ್ಲಿ ಜನಿಸಿದ ಈ ಸ್ಟಾರ್ ಆಟಗಾರ ಪ್ರಸ್ತುತ ಬಹಳ ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದಾರೆ. ಇಂದು ಸಂತೋಷವಾಗಿರುವ ಈ ಆಟಗಾರನ ಬಾಲ್ಯ ಮಾತ್ರ ಖಂಡಿತ ಇಂದಿನ ಹಾಗೆ ಇರಲಿಲ್ಲ. ಬದಲಾಗಿ ಬಾಲ್ಯವೆಲ್ಲಾ ಒಂದು ಹೋರಾಟದ ಬದುಕಾಗಿತ್ತು. ಆತನ ಜೀವನದ ಆ ಹೋರಾಟದ ಕಥೆಯನ್ನು ಕೇಳಿದರೆ ಖಂಡಿತ ಆಶ್ಚರ್ಯ ಆಗುವುದು ಮಾತ್ರವೇ ಅಲ್ಲದೇ ಆತನ ಸಾಧನೆ ಬಗ್ಗೆ ಮೆಚ್ಚುಗೆ ನೀಡಲೇಬೇಕು ಎನಿಸುತ್ತದೆ.

ವಾಸ್ತವದಲ್ಲಿ ರೋವ್ಮನ್ ಪಾವೆಲ್ ಅವರು ತಮ್ಮ ತಾಯಿಯ ಗರ್ಭದಲ್ಲಿ ಇರುವಾಗಲೇ ಆತನ ತಂದೆ ತನ್ನ ಪತ್ನಿಯ ಹೊಟ್ಟೆಯಲ್ಲಿದ್ದ ಮಗುವನ್ನು ಅಬಾರ್ಷನ್ ಮಾಡಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಅದಕ್ಕೆ ಅಂದು ಆ ತಾಯಿ ಒಪ್ಪಿಕೊಂಡಿರಲಿಲ್ಲ. ಅಂದು ಆ ತಾಯಿಯ ದೃಢ ನಿರ್ಧಾರದ ಫಲವಾಗಿ ಇಂದು ಅದೇ ಮಗು ದೊಡ್ಡವನಾಗಿ ತನ್ನ ತಾಯಿಗೆ ಮಾತ್ರವೇ ಅಲ್ಲದೇ ತನ್ನ ದೇಶಕ್ಕೂ ಕೂಡಾ ಹೆಮ್ಮೆಯನ್ನು ತರುವಂತಹ ಆಟವನ್ನು ಆಡುತ್ತಿದ್ದಾರೆ.

ರೋವ್ಮಾನ್ ಹಾಗೂ ಆತನ ಸಹೋದರಿಯನ್ನು ಓದಿಸುವ ಸಲುವಾಗಿ ಅವರ ತಾಯಿ ಕೆಲವು ಮನೆಗಳಲ್ಲಿ ಬಟ್ಟೆಗಳನ್ನು ಒಗೆಯುವ ಕೆಲಸವನ್ನು ಸಹಾ ಮಾಡುತ್ತಿದ್ದರು. ಇಂದು ರೋವ್ಮಾನ್ ತನ್ನ ತಾಯಿಯ ಕಷ್ಟವನ್ನು ದೂರ ಮಾಡಿದ್ದಾರೆ. 2019 ರಲ್ಲಿ ಅವರು ತಮ್ಮ ಪ್ರೀತಿಯ ತಾಯಿಗೆ ಒಂದು ಕಾರನ್ನು ಸಹಾ ಉಡುಗೊರೆಯಾಗಿ ನೀಡಿ ತನ್ನ ಪ್ರೀತಿಯನ್ನು ತೋರಿಸಿದ್ದಾರೆ. ರೋವ್ಮಾನ್ ಅವರ ಜೀವನ ನಿಜಕ್ಕೂ ಒಂದು ಸ್ಪೂರ್ತಿಯೇ ಸರಿ.

Leave A Reply

Your email address will not be published.