IPL ನಲ್ಲಿ ಗಾಯಗೊಂಡ ಆಟಗಾರರು ಅವರ ವೇತನ ಪಡೆಯುವರೇ? ಇಲ್ಲಿದೆ ಈ ಪ್ರಶ್ನೆಗೆ ಸ್ಪಷ್ಟ ಉತ್ತರ

Entertainment Featured-Articles News Sports

2022 ರ ಇಂಡಿಯನ್ ಟಿ20 ಲೀಗ್ ನ 15 ನೇ ಆವೃತ್ತಿಯ ಪಂದ್ಯಗಳು ಪ್ರಸ್ತುತ ಯಶಸ್ಸಿನಿಂದ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಪಂದ್ಯಾವಳಿಗಳು ಕೂಡಾ ಮುಗಿದಿದೆ. ರಾಜಾಸ್ಥಾನದ ವಿ ರು ದ್ಧ ದ ಪಂದ್ಯವನ್ನು ಗೆದ್ದ ನಂತರ ಗುಜರಾತ್ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ಗುಜರಾತ್ ಯಶಸ್ಸನ್ನು ಪಡೆದುಕೊಂಡಿದೆ. ಸದ್ಯ ಕೋಲ್ಕತ್ತಾ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಕೊಲ್ಕತ್ತಾ ತಂಡದ ಪ್ರಸಾದ್ ರಾಸಿಕ್ ಸಲಾಂ ಅವರನ್ನು ಇಂಡಿಯನ್ ಟಿ20, 2022 ನಿಂದ ಹೊರಗಿಡಲಾಗಿದೆ. ಅವರ ಸ್ಥಾನಕ್ಕೆ ಹರ್ಷಿತ್ ರಾಣಾ ಅವರನ್ನು ಕರೆ ತ‌ರಲಾಗಿದೆ. ಚೆನ್ನೈ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಕೆಳಗಿನಿಂದ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಮೆಂಟ್ ನಲ್ಲಿ ದೀಪಕ್ ಚಹರ್ ಅವರ ಸೇವೆಯನ್ನು ತಂಡವು ಬಹಳ ಮಿಸ್ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ದೊಡ್ಡ ಹೊಡೆತ ಎನ್ನುವಂತೆ ದೀಪಕ್ ಚಹರ್ ಅವರನ್ನು ಐಪಿಎಲ್ 2022 ನಿಂದ ಹೊರಗಿಡಲಾಗಿದೆ.

ಹೀಗೆ ಗಾಯಗಳು, ಆರೋಗ್ಯ ಸಮಸ್ಯೆಗಳು ಹಾಗೂ ಇನ್ನಿತರೆ ಕಾರಣಗಳಿಂದ ಹೊರ ನಡೆದ ಆಟಗಾರರಿಗೆ ಫ್ರಾಂಚೈಸಿಗಳು ಈ ಮೊದಲು ಹರಾಜಿನಲ್ಲಿ ಅವರಿಗೆ ನಿಗಧಿ ಮಾಡಿದ ಮೊತ್ತವನ್ನು, ಆಟಗಾರರು ಪಡೆಯುತ್ತಾರೆಯೇ ಅಥವಾ ಆ ಮೊತ್ತವನ್ನು ಹಿಂದಿರುಗಿಸಬೇಕಾಗುವುದೇ? ಇಲ್ಲವೇ ಹಣ ಪಡೆದರೆ ಎಷ್ಟು ಹಣವನ್ನು ಪಡೆಯುತ್ತಾರೆ?? ಎನ್ನುವ ಪ್ರಶ್ನೆಗಳು ಅಭಿಮಾನಿಗಳನ್ನು ಆಗಾಗ ಕಾಡುತ್ತಲೇ ಇದೆ. ಹಾಗಾದರೆ ಬನ್ನಿ, ಅದಕ್ಕೆ ಉತ್ತರ ಏನೆಂದು ತಿಳಿಯೋಣ.

ಒಂದೇ ಒಂದು ಪಂದ್ಯವನ್ನು ಕೂಡಾ ಆಡದೆಯೇ ಸೀಸನ್ ಆರಂಭದಲ್ಲೇ ಆಟಗಾರನು ಗಾಯಗೊಂಡು, ಆತ ಪಂದ್ಯದಿಂದ ಹೊರಗೆ ನಡೆಯಬೇಕಾಗಿ ಬಂದಂತಹ ಪರಿಸ್ಥಿತಿಯಲ್ಲಿ, ಅಂತಹ ಸಂದರ್ಭದಲ್ಲಿ ಆಟಗಾರರು ಈ ಹಿಂದೆ ನಿಗಧಿ ಮಾಡಿದಂತಹ ಒಪ್ಪಂದದ ಹಣವನ್ನು ಪಡೆಯುವುದಿಲ್ಲ. ಏಕೆಂದರೆ ಹೊರ ನಡೆದ ಆಟಗಾರದ ಸ್ಥಾನಕ್ಕೆ ಸಂಪೂರ್ಣವಾಗಿ ಮತ್ತೊಬ್ಬ ಆಟಗಾರನನ್ನು ಕರೆತರಲಾಗುತ್ತದೆ ಹಾಗೂ ಆತ ಹೊರ ನಡೆದ ಆಟಗಾರನ ಸ್ಥಾನದಲ್ಲಿ ಪಂದ್ಯಗಳನ್ನು ಆಡುವನು.

ಆದರೆ ಈ ನಿಯಮವು ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯ ಗುತ್ತಿಗೆ ಆಟಗಾರರ ವಿಷಯಕ್ಕೆ ಬಂದಾಗ ಸ್ವಲ್ಪ ಭಿನ್ನವಾಗಿದೆ. ಏಕೆಂದರೆ ಭಾರತ ಕ್ರಿಕೆಟ್ ಆಡಳಿತ ಮಂಡಳಿಯ ಅಡಿಯಲ್ಲಿ ಒಪ್ಪಂದ ಮಾಡಿಕೊಂಡ ಆಟಗಾರನೊಬ್ಬ ಗಾಯಗೊಂಡರೆ, ಪಂದ್ಯದಿಂದ ಹೊರಗೆ ನಡೆಯಬೇಕಾಗಿ ಬಂದರೆ, ಆಗ ಆಡಳಿತ ಮಂಡಳಿಯು ಆತನ ವಿಮಾ ಪಾಲಿಸಿಯ ಭಾಗವಾಗಿ ಸಂಪೂರ್ಣ ಒಪ್ಪಂದದ ಹಣವನ್ನು ಪಾವತಿ ಮಾಡುತ್ತದೆ. ಈ ವಿಮಾ ಪಾಲಿಸಿಯು 2011 ರಲ್ಲಿ ಜಾರಿಗೆ ಬಂದಿದೆ.

ಆದರೆ ಐಪಿಎಲ್ ಫ್ರಾಂಚೈಸಿಗಳ ವಿಚಾರಕ್ಕೆ ಬಂದಾಗ ಅವು ಆಟಗಾರನಿಗೆ ಯಾವುದೇ ಹಣವನ್ನು ಪಾವತಿ ಮಾಡುವುದಿಲ್ಲ. ಭಾರತದ ಕ್ರಿಕೆಟ್ ಆಡಳಿತ ಮಂಡಳಿಯೊಂದಿಗೆ ಕೇಂದ್ರೀಯವಾಗಿ ಒಪ್ಪಂದ ಮಾಡಿಕೊಂಡ ವಿದೇಶಿ ಅಥವಾ ಭಾರತೀಯ ಆಟಗಾರನು ಯಾವುದೇ ಒಂದು ಸೀಸನ್ ನಲ್ಲಿ ಗಾಯಗೊಂಡರೆ, ಆಗ ಆತ ಆ ಸೀಸನ್ ನಲ್ಲಿ ತನ್ನ ತಂಡಕ್ಕಾಗಿ ಆಡಿದ ಪಂದ್ಯಗಳ ಸಂಖ್ಯೆಗೆ ಅನುಸಾರವಾಗಿ ಅವರಿಗೆ ಹಣವನ್ನು ಪಾವತಿಸಲಾಗುತ್ತದೆ.

Leave a Reply

Your email address will not be published.