IPL ಇತಿಹಾಸದಲ್ಲೇ ಇಂತ ಇನ್ನಿಂಗ್ಸ್ ಕಂಡಿಲ್ಲ: ರಜತ್ ಪಾಟಿದರ್ ಬ್ಯಾಟಿಂಗ್ ಗೆ ವಿರಾಟ್ ಕೊಹ್ಲಿ ಫಿದಾ!!

Entertainment Featured-Articles News Sports

ಲಖನೌ ಸೂಪರ್ ಜಯೆಂಟ್ಸ್ ತಂಡದ ವಿರುದ್ಧ ನಿನ್ನೆ ನಡೆದಂತಹ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದಾರ್ ಶತಕವನ್ನು ಸಿಡಿಸುವ ಮೂಲಕ, 14 ರನ್ನುಗಳ ಅಂತರದಲ್ಲಿ ತಂಡದ ಗೆಲುವಿಗೆ ಒಂದು ಪ್ರಮುಖ ಕಾರಣರಾಗಿದ್ದಾರೆ. ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಅವರು ಮಾಡಿದ ಪ್ರಯತ್ನಕ್ಕೆ ಹಾಗೂ ಅವರು ನೀಡಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಜನಪ್ರಿಯ ಕ್ರಿಕೆಟ್ ಆಟಗಾರ, ಆರ್ ಸಿ ಬಿ ಯ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಮೆಚ್ಚುಗೆಯನ್ನು ಸೂಚಿಸುತ್ತದೆ ರಜತ್ ಪಾಟಿದರ್ ಅವರನ್ನು ಹಾಡಿಹೊಗಳಿದ್ದಾರೆ.

ತಂಡದ ಗೆಲುವಿನ ಬಳಿಕ ರಜತ್ ಪಾಟಿದರ್ ಅವರನ್ನು ಸಂದರ್ಶನ ಬಾಡಿ ಮಾತನಾಡಿದ ವಿರಾಟ್ ಕೊಹ್ಲಿ ಅವರು, ಐಪಿಎಲ್ ಇತಿಹಾಸದಲ್ಲಿಯೇ ಸಾಕಷ್ಟು ಪ್ರಭಾವಶಾಲಿಯಾದ ಇನ್ನಿಂಗ್ಸ್ ಗಳನ್ನು ನೋಡಿದ್ದೇನೆ ಹಾಗೂ ಒತ್ತಡದ ಸನ್ನಿವೇಶಗಳಲ್ಲಿ ಮೂಡಿ ಬಂದಂತಹ ಇನ್ನಿಂಗ್ಸ್ ಗಳ ಕುರಿತಾಗಿ ಸಾಕಷ್ಟು ಅವಲೋಕನವನ್ನು ಮಾಡಿದ್ದೇನೆ. ಆದರೆ ಇಂದು ರಜತ್ ಪಾಟಿದರ್ ಅವರು ಆಡಿದಂತೆ ಹಿಂದೆ ಯಾರೂ ಕೂಡಾ ಆಡಿರುವುದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.

ದೊಡ್ಡ ಪಂದ್ಯ, ಒತ್ತಡದ ಸನ್ನಿವೇಶ ಇದೆಲ್ಲದರ ಹೊರತಾಗಿಯೂ ಶತಕ ಸಿಡಿಸಿದ ಅನ್ ಕ್ಯಾಪ್ಡ್ ಪ್ಲೇಯರ್ ಎಂದು ರಜತ್ ಪಾಟೀಲ ರವರನ್ನು ವಿರಾಟ್ ಕೊಹ್ಲಿ ಹಾಡಿಹೊಗಳಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತಾ, ಆಟದ ಪ್ರಮಾಣವು ಬಹಳ ದೊಡ್ಡದಾಗಿತ್ತು. ನಾನು ಕೂಡಾ ಒತ್ತಡವನ್ನು ಅನುಭವಿಸುತ್ತಿದ್ದೆ. ಏಕೆಂದರೆ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಬೇಕಾದ ಸನ್ನಿವೇಶವೊಂದು ಎದುರಾಗಿತ್ತು ಎನ್ನುವ ಮಾತುಗಳನ್ನು ವಿರಾಟ್ ಕೊಹ್ಲಿ ಅವರು ಹಂಚಿಕೊಂಡಿದ್ದಾರೆ.

ರಜತ್ ಪಾಟಿದರ್ ಪಂದ್ಯದಲ್ಲಿ ಏನು ಮಾಡಿದ್ದಾರೆ ಎನ್ನುವುದು ಬಹಳ ವಿಶೇಷವಾಗಿದೆ. ಐಪಿಎಲ್ ಇತಿಹಾಸದಲ್ಲೇ ಯಾರಾದರೂ ಇಂತಹ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ನೀವು ಇನ್ನಿಂಗ್ಸ್ ನ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಇನ್ನಿಂಗ್ಸ್ ಅನ್ನು ಒಬ್ಬ ಕ್ರಿಕೆಟಿಗನಾಗಿ ಮೆಚ್ಚಿಕೊಳ್ಳಬೇಕು ಎನ್ನುವ ಮಾತನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ.

Leave a Reply

Your email address will not be published.