Atal Pension Scheme: ಬುದ್ದಿವಂತರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಿ, ಭವಿಷ್ಯದಲ್ಲಿ ತಾವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕ ಬಾರದು ಎನ್ನುವ ಕಾರಣಕ್ಕೆ ಕೆಲವು ಹೂಡಿಕೆ ಆಯ್ಕೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಇನ್ನು ಉತ್ತಮವಾದ ಯೋಜನೆಯ ಆಯ್ಕೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚಿನ ಆದಾಯ ಪಡೆಯಬಹುದು. ತಮ್ಮ ವೃದ್ಧಾಪ್ಯದಲ್ಲಿ ಯಾರೊಬ್ಬರ ಮೇಲೆ ಅವಲಂಬಿತರಾಗಬಾರದು ಎನ್ನುವುದು ಅನೇಕರ ಅಭಿಪ್ರಾಯ.
ಇನ್ನು ಅದಕ್ಕಾಗಿ ಕೆಲವರು ಕೆಲವು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇನ್ನು ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ನೀವು ಕೇಳಿರಬೇಕು. ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನಿಮ್ಮ ವಯಸ್ಸಾದ ಕಾಲದಲ್ಲಿ ನೀವು ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯಬಹುದು. ಇನ್ನು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದು.
ನೀವು ಈ ಯೋಜನೆಯ ಅಡಿಯಲ್ಲಿ ಕೇವಲ ಪ್ರತಿ ತಿಂಗಳು 42 ರೂಗಳನ್ನು ಪಾವತಿಸುವ ಮೂಲಕ ನಿಮ್ಮ. 60 ರ ವಯಸ್ಸಿನಲ್ಲಿ ನೀವು ಪ್ರತಿ ತಿಂಗಳು ಸುಮಾರು 1000 ದಿಂದ ಸುಮಾರು 5000ವರೆಗೂ ಪಿಂಚಣಿಯ ರೂಪದಲ್ಲಿ ಹಣವನ್ನು ಪಡೆಯುತ್ತೀರಿ. 18 ವರ್ಷ ಮೇಲ್ಪಟ್ಟ ಯಾರಾದರೂ ಸಹ ಈ ಯೋಜನೆಯ ಅಡಿಯಲ್ಲಿ ಹೂಡಿಕೆಯನ್ನು ಶುರು ಮಾಡಬಹುದು. ನೀವು ಈ ಯೋಜನೆಯ ಅಡಿಯಲ್ಲಿ ಕನಿಷ್ಠ 42 ರೂಗಳಿಂದ ಗರಿಷ್ಠ 1454 ರೂಗಳ ವರೆಗೂ ಪ್ರತಿ ತಿಂಗಳು ಹೂಡಿಕೆ ಮಾಡಬಹುದು.
ಈ ಯೋಜನೆಯ ಅವಧಿ ಸುಮಾರು 22 ವರ್ಷಗಳಾಗಿದ್ದು, 18 ರಿಂದ 42 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಖಾತೆ ತೆರೆದು ಹೂಡಿಕೆ ಮಾಡುವುದನ್ನು ಪ್ರಾರಂಭಿಸಬಹುದು. ನೀವು ಈ ಯೋಜನೆಯಲ್ಲಿ ನೊಂದಾಯಿಸಿಕೊಂಡು, ನಿಮ್ಮ ಖಾತೆಯನ್ನು ಲಿಂಕ್ ಮಾಡಿದರೆ, ನೀವು ಲಿಂಕ್ ಮಾಡಲಾದ ಖಾತೆಯಿಂದ ಪ್ರತಿ ತಿಂಗಳು ಈ ಯೋಜನೆಗೆ ಹಣ ಸ್ವಯಂ ಡೆಬಿಟ್ ಆಗುತ್ತದೆ.
ನೀವು ಚಿಕ್ಕ ವಯಸ್ಸಿನಲ್ಲೇ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದು, ಪ್ರತಿ ತಿಂಗಳು ಈ ಯೋಜನೆಯ ಅಡಿಯಲ್ಲಿ ಸುಮಾರು 22 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಸಂಪೂರ್ಣ ಮೊತ್ತ ಸುಮಾರು 8.5 ಲಕ್ಷ ಆಗುತ್ತದೆ. ಆಗ ನೀವು ನಿಮ್ಮ 60 ವರ್ಷ ವಯಸ್ಸಿನಲ್ಲಿ ಪ್ರತಿ ತಿಂಗಳು ಸುಮಾರು 5000 ರೂಗಳನ್ನು ಪಿಂಚಣಿಯ ರೂಪದಲ್ಲಿ ಪಡೆಯಬಹುದು.