IIT ಪರೀಕ್ಷೆಯಲ್ಲಿ 54ನೇ ರ‍್ಯಾಂಕ್ ಪಡೆದ ಕೊ ಲೆ ಆರೋಪಿ: ಜೈಲು ಸೇರಿದವನ ಸಾಧನೆ ಅಚ್ಚರಿ ಮೂಡಿಸಿದೆ

Entertainment Featured-Articles News

ಇರುವ ಸ್ಥಳ ಯಾವುದಾದರೇನು?? ಪರಿಸ್ಥಿತಿ ಎಷ್ಟು ಕಠಿಣವಾಗಿದ್ದರೇನು?? ಗುರಿಯ ಕಡೆಗೆ ಸಾಗುವ ದೃಢ ಸಂಕಲ್ಪವಿದ್ದಾಗ ಸ್ಥಳ, ಪರಿಸ್ಥಿತಿ ಅಥವಾ ಸಂಕಷ್ಟಗಳು ಸಾಧನೆಗೆ ಅಡ್ಡಗೋಡೆಯನ್ನು ಹಾಕುವುದು ಸಾಧ್ಯವೇ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹೌದು ಕೊ ಲೆ ಆ ರೋ ಪದಲ್ಲಿ ಜೈಲು ಪಾಲಾಗಿರುವ ಬಿಹಾರದ ಯುವಕನೊಬ್ಬನು ಈಗ ಜೈಲಿನಲ್ಲಿ ಇದ್ದುಕೊಂಡೇ ಮಾಡಿರುವ ಸಾಧನೆಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು, ಅನೇಕರು ಈ ಯುವಕನ ಸಾಧನೆಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಬಿಹಾರದ ನವಾಡ ಜೈಲಿನಲ್ಲಿ ಇರುವ 22 ವರ್ಷ ವಯಸ್ಸಿನ ವಿಚಾರಣಾಧೀನ ಖೈ ದಿ ಕೌಶಲೇಂದ್ರ ಕುಮಾರ್ ಅಲಿಯಾಸ್ ಸೂರಜ್ ಎನ್ನುವ ಹೆಸರಿನ ಯುವಕನೇ ಈಗ ಇಡೀ ದೇಶ ತಿರುಗಿ ನೋಡುವಂತಹ ಸಾಧನೆಯನ್ನು ಮಾಡಿದ್ದಾನೆ. ಈ ವರ್ಷ ಫೆಬ್ರವರಿ 13 ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ ಯು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯನ್ನು ಉತ್ತೀರ್ಣಗೊಳಿಸುವಲ್ಲಿ ಸೂರಜ್ ಯಶಸ್ಸನ್ನು ಪಡೆದುಕೊಂಡಿದ್ದಾನೆ.

ಸೂರಜ್ ಅಖಿಲ ಭಾರತ ಮಟ್ಟದಲ್ಲಿ ನಡೆದಂತಹ ಈ ಪ್ರವೇಶ ಪರೀಕ್ಷೆಯಲ್ಲಿ 54 ರ‍್ಯಾಂಕ್ ಪಡೆಯುವ ಮೂಲಕ ಎಲ್ಲರು ಹುಬ್ಬೇರಿಸುವಂತಹ ಸಾಧನೆಯನ್ನು ಮೆರೆದಿದ್ದಾನೆ. ಬಿಹಾರದ ವರ್ಸಾಲಿಗಂಜ್ ಪಟ್ಟಣದ ಮೋಸ್ಮಾ ನಿವಾಸಿಯಾಗಿರುವ ಕೌಶಲೇಂದ್ರ ಕುಮಾರ್ ಜೈ ಲಿ ನ ಕಂ ಬಿಗಳ ಹಿಂದೆಯೇ ಕುಳಿತು ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಿದ್ದು, ಪರೀಕ್ಷೆಯನ್ನು ಎ ದು ರಿಸಿ ಈಗ ಸಾಧನೆಯನ್ನು ಮೆರೆಯುವ ಮೂಲಕ ಅನೇಕರಿಗೆ ಅಚ್ಚರಿ ಯನ್ನು ಮೂಡಿಸುವಂತಹ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.

ಕಳೆದ ಹನ್ನೊಂದು ತಿಂಗಳಿನಿಂದಲೂ ಕೌಶಲೇಂದ್ರ ಕುಮಾರ್ ಅವರು ಕೊ ಲೆ ಆ ರೋ ಪದಲ್ಲಿ ಜೈ ಲಿ ನಲ್ಲಿ ಇದ್ದಾರೆ. ಕೊ ಲೆ ಪ್ರಕರಣದಲ್ಲಿ ಜೈಲು ಸೇರಿದಾಗ ಅನೇಕರ ಮನಸ್ಸಿನ ಸ್ಥಿತಿ ಬೇರೆಯೇ ಆಗಿರುತ್ತದೆ. ಅಲ್ಲದೇ ಇದು ಜೀವನದಲ್ಲಿ ಒಂದು ಮಹತ್ವದ ಬದಲಾವಣೆಗೆ ಸಹಾ ಕಾರಣವಾಗಬಹುದು. ಪಶ್ಚಾತ್ತಾಪ ಪಡುವ ಕಾಲವೂ ಆಗಬಹುದು. ಆದರೆ ಕೌಶಲೇಂದ್ರ ಕುಮಾರ್ ಅವರ ಗುರಿ ಶಿಕ್ಷಣದ ಕಡೆಗೆ ಹೊರಳಿದ್ದು, ಜೈಲಿನ ಕಿರಿಕಿರಿಯ ನಡುವೆಯೇ ಬಹಳ ಶ್ರಮವಹಿಸಿ ಕೌಶಲೇಂದ್ರ ತನ್ನ ಅಧ್ಯಯನ ನಡೆಸಿದ್ದಾರೆ.

ಅಲ್ಲದೇ ಮಾಜಿ ಜೈಲು ಅಧೀಕ್ಷಕರಾಗಿದ್ದ ಅಭಿಷೇಕ್ ಪಾಂಡೆಯವರು ಸಹಾ ಕೌಶಲೇಂದ್ರ ಗೆ ಪ್ರೋತ್ಸಾಹವನ್ನು ನೀಡಿದ್ದರು ಎನ್ನಲಾಗಿದೆ. ಕೌಶಲೇಂದ್ರ ಮಾತನಾಡುತ್ತಾ ಅಭಿಷೇಕ್ ಪಾಂಡೆ ಅವರು ತನ್ನ ಅಧ್ಯಯನಕ್ಕೆ ಅಗತ್ಯ ಇರುವ ಎಲ್ಲಾ ಪುಸ್ತಕಗಳನ್ನು ಸಹಾ ನೀಡಿ ಸಹಕರಿಸಿದ್ದು ಮಾತ್ರವೇ ಅಲ್ಲದೇ, ವಿಶೇಷ ಆಹಾರ ವ್ಯವಸ್ಥೆಯನ್ನು ಸಹಾ ನೀಡಿದ್ದರು. ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿ ನನ್ನ ಸಾಧನೆಗೆ ನೆರವಾಗಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

Leave a Reply

Your email address will not be published.