I am sorry!! ಅಂತ ಜಾಹೀರಾತು ಮಾಡಿದ್ದಕ್ಕಾಗಿ ಅಭಿಮಾನಿಗಳು, ಜನರ ಕ್ಷಮೆಯಾಚಿಸಿದ ಅಕ್ಷಯ್ ಕುಮಾರ್

Entertainment Featured-Articles News

ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಸ್ಟಾರ್ ಗಳು ಎನಿಸಿಕೊಂಡವರು ಹಿರಿಯ ನಟರಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ನಟ ಅಕ್ಷಯ್ ಕುಮಾರ್. ಇವರಿಗೆ ದೇಶ ವಿದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಇನ್ನು ಇತ್ತೀಚಿಗೆ ಈ ಮೂವರು ದಿಗ್ಗಜ ನಟರು ಸಹಾ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದು ಒಂದು ಪಾನ್ ಮಸಾಲಾ ಜಾಹೀರಾತಿನಲ್ಲಿ ಎನ್ನುವುದು ವಿಶೇಷ. ಯಾವಾಗ ಮೂವರು ದಿಗ್ಗಜರು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡರೇ ಅಲ್ಲಿಂದ ಇವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ.

ಅದರಲ್ಲೂ ವಿಶೇಷವಾಗಿ ಅಕ್ಷಯ್ ಕುಮಾರ್ ಅವರು ಸದಾ ಸಾಮಾಜಿಕ ಕಳಕಳಿಯ ಮಾತುಗಳನ್ನು ಹೇಳುವಾಗ, ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ಸಾಕಷ್ಟು ಬೇಸರ ಮೂಡಿಸಿ, ಅವರ ಅಸಮಾಧಾನಕ್ಕೆ ಅದು ಕಾರಣವಾಯಿತು. ವಿಮಲ್ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ , ಅಜಯ್ ದೇವಗನ್ ಹಾಗೂ ಶಾರೂಖ್ ಖಾನ್ ಇರುವ ಸನ್ನಿವೇಶದ ಫೋಟೋ ವನ್ನು ಭರ್ಜರಿ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್ ಆಗಿದೆ‌.

ಅಲ್ಲದೇ ಇದೇ ವೇಳೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ತಂಬಾಕು ಉತ್ಪನ್ನವೊಂದರ ಜಾಹೀರಾತು ತಿರಸ್ಕರಿಸಿದ ವಿಷಯ ಸುದ್ದಿಯಾಗುತ್ತಲೇ ನೆಟ್ಟಿಗರು ದಕ್ಷಿಣದ ಸ್ಟಾರ್ ಗಳನ್ನು ಹೊಗಳುತ್ತಾ ಬಾಲಿವುಡ್ ನ ಸ್ಟಾರ್ ಗಳಿಗೆ ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿ, ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ದೊಡ್ಡ ಮಟ್ಟದಲ್ಲಿ ಅಸಮಾಧಾನಗಳು ಹಾಗೂ ಬೇಸರ ಹೊರ ಬಂದ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ ಪೋಸ್ಟ್ ನಲ್ಲಿ, ನನ್ನನ್ನು ಕ್ಷಮಿಸಿ. ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳ, ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆ ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಮತ್ತು ಅನುಮೋದಿಸುವುದಿಲ್ಲವಾದರೂ, ವಿಮಲ್ ಎಲೈಚಿ ಅವರೊಂದಿಗಿನ ನನ್ನ ಒಡನಾಟದ ಬೆಳಕಿನಲ್ಲಿ ನಿಮ್ಮ ಭಾವನೆಗಳ ಹೊರ ಹರಿವನ್ನು ನಾನು ಗೌರವಿಸುತ್ತೇನೆ. ಆದ್ದರಿಂದಲೇ ಎಲ್ಲಾ ನಮ್ರತೆಯಿಂದ ನಾನು ಹಿಂದೆ ಸರಿಯುತ್ತೇನೆ.

ನಾನು ಸಂಪೂರ್ಣ ಅನುಮೋದನೆ ಶುಲ್ಕವನ್ನು ಯೋಗ್ಯ ಉದ್ದೇಶಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ನನ್ನ ಮೇಲೆ ಬದ್ಧವಾಗಿರುವ ಒಪ್ಪಂದದ ಕಾನೂನು ಅವಧಿಯವರೆಗೆ ಬ್ರ್ಯಾಂಡ್ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು, ಆದರೆ ನನ್ನ ಭವಿಷ್ಯದ ಆಯ್ಕೆಗಳನ್ನು ಮಾಡುವಲ್ಲಿ ನಾನು ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ಕೇಳುವುದನ್ನು ಶಾಶ್ವತವಾಗಿ ಮುಂದುವರಿಸುತ್ತೇನೆ, ಅಕ್ಷಯ್ ಕುಮಾರ್ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.