Hyundai Exter : ಅತ್ಯುತ್ತಮ ಮೈಲೇಜ್ ಕಾರು 7 ಲಕ್ಷಕ್ಕಿಂತ ಕಡಿಮೆ ಬೆಲೆ, ಮಾರುಕಟ್ಟೆಯಲ್ಲಿ ಬಲೆನೊ ಮತ್ತು ಸ್ವಿಫ್ಟ್‌ ಗಳಿಗೆ ಪೈಪೋಟಿ!

0 1,512

Hyundai Exter : ಭಾರತದ ಆಟೋ ಮಾರುಕಟ್ಟೆಯಲ್ಲಿ SUV ವಾಹಕಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಜನರ ಆಯ್ಕೆಯಲ್ಲಿ ಹ್ಯಾಚ್‌ ಬ್ಯಾಕ್ ವಾಹನಗಳ ಬದಲಿಗೆ SUV ಕಾರುಗಳು ಮೊದಲ ಆದ್ಯತೆಯನ್ನು ಪಡೆದುಕೊಳ್ಳುತ್ತಿವೆ. ಕೆಲವೊಂದು ವರದಿಗಳನ್ನು ನೋಡಿದಾಗ ಪ್ರಸ್ತುತ ದೇಶದಲ್ಲಿ 7-12 ಲಕ್ಷಗಳ ವರೆಗಿನ ಬೆಲೆಯ ವಾಹನಗಳ ಬೇಡಿಕೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಕಾರಣದಿಂದಾಗಿಯೇ ಈಗ ದೇಶದಾದ್ಯಂತ ಬ್ರೆಜ್ಜಾ, ಬಲೆನೊ ಮತ್ತು ಸ್ವಿಫ್ಟ್ ವಾಹನಗಳ ಮಾರಾಟವು ಬಹಳ ವೇಗವಾಗಿ ನಡೆಯುತ್ತಿದೆ.

ಬಲೆನೊ ಮತ್ತು ಸ್ವಿಫ್ಟ್‌ ನಂತಹ ವಾಹನಗಳು ಜನರ ಮೊದಲ ಆಯ್ಕೆಯಾಗಿದೆ ಎನ್ನುವುದು ಸತ್ಯವಾಗಿದೆ. ಆದರೆ ಈಗ ಇವು ಸಹಾ ಈ ಬಜೆಟ್ ನಿಂದ ಹೊರಗೆ ಹೋಗುತ್ತಿರುವುದು ಸಹಾ ನಿಜವಾದ ಮಾತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ 7 ಲಕ್ಷ ರೂ.ಗಳಿಗಿಂತ ಕಡಿಮೆ SUV ವಾಹನಗಳ ಆಯ್ಕೆಗಳು ಬಹಳ ಕಡಿಮೆ ಇದೆ. ಒಂದು ವೇಳೆ ನೀವು ಕಡಿಮೆ ಬಜೆಟ್ ನಲ್ಲಿ SUV ಖರೀದಿ ಮಾಡುವ ಆಲೋಚನೆಯನ್ನು ಮಾಡುತ್ತಿದ್ದಲ್ಲಿ, ಹ್ಯುಂಡೈನ ಒಂದು ಅದ್ಭುತ ಕಾರಿನ ಬಗ್ಗೆ ನೀವು ತಿಳಿಯಲೇ ಬೇಕು.

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಈ ಕಾರಿನಲ್ಲಿ ಸಾಕಷ್ಟು ಫೀಚರ್ ಗಳನ್ನು ನೀಡಲಾಗಿದೆ. ಇದರಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿರುವ ಕಂಪನಿಯು, ಇದರೊಂದಿಗೆ ಹಲವು ಫೀಚರ್ ಗಳನ್ನು ಕೂಡಾ ನಿಮಗೆ ನೀಡುತ್ತಿದೆ. ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪ್ರವೇಶ ನೀಡಿರುವ ಹ್ಯುಂಡೈ ಎಕ್ಸ್‌ ಟರ್‌ ನ (Hyundai Exter) ಎಕ್ಸ್ ಶೋ ರೂಂ ಬೆಲೆ 6 ಲಕ್ಷ ರೂ.ಗಳಾಗಿದೆ. ಇದರ ಟಾಪ್ ಮಾಡೆಲ್ ನ‌ ಬೆಲೆಯ ವಿಚಾರಕ್ಕೆ ಬಂದರ ಅದು ಸುಮಾರು 10 ಲಕ್ಷ ರೂ.ಗಳಾಗಿದೆ. ಇದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ಅತ್ಯುತ್ತಮವಾದ ಆಯ್ಕೆಯಾಗಿದೆ.

ಹುಂಡೈ ಎಕ್ಸ್ಟರ್ ಅನ್ನು EX, EX(O), S, S(O), SX, SX(O) ಮತ್ತು SX(O) ರೂಪಾಂತರಗಳಲ್ಲಿ ಪರಿಚಯಿಲಾಗಿದ್ದು, ಇಲ್ಲಿ 3 ವರ್ಷಗಳ ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ನೀಡಲಾಗುತ್ತದೆ. ಅಲ್ಲದೇ 7 ವರ್ಷಗಳ ವಿಸ್ತೃತ ವಾರಂಟಿಯ ಆಯ್ಕೆಯೂ ಇದರಲ್ಲಿದೆ. ಈ SUV ಯಲ್ಲಿ ಕಂಪನಿಯು ನಿಮಗೆ 6 ಮೊನೊಟೋನ್ ಮತ್ತು 3 ಡ್ಯುಯಲ್ ಟೋನ್ ನ ಬಾಹ್ಯ ಬಣ್ಣಗಳ ಆಯ್ಕೆಯನ್ನು ಸಹಾ ಒದಗಿಸಿದೆ.

ವೈಶಿಷ್ಟ್ಯಗಳು (Features) :
ಇದರಲ್ಲಿ ನಿಮಗೆ ಅಡ್ವಾನ್ಸ್ಡ್ ಫೀಚರ್ ಗಳು ದೊರೆಯಲಿದೆ. ಇದರಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ 4.2 ಇಂಚಿನ ಡ್ರೈವರ್ ಡಿಸ್ ಪ್ಲೇಯನ್ನು ದೊರೆಯುತ್ತದೆ. ಇದು ಧ್ವನಿ ಸಕ್ರಿಯಗೊಳಿಸಿದ (Voice enabled) ಎಲೆಕ್ಟ್ರಿಕ್ ಸನ್‌ ರೂಫ್ ಇದೆ. ಡ್ಯುಯಲ್ ಕ್ಯಾಮೆರಾ ಡ್ಯಾಶ್‌ ಕ್ಯಾಮ್, 6 ಏರ್‌ ಬ್ಯಾಗ್‌ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಇದೆ.

ಇನ್ನು ಇದರಲ್ಲಿ ವೈರ್‌ಲೆಸ್ ಚಾರ್ಜರ್, TPMS, ಮೂರು ಪಾಯಿಂಟ್ ಸೀಟ್‌ ಬೆಲ್ಟ್‌ನಂತಹ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಕೂಡಾ ಎಲ್ಲಾ ರೂಪಾಂತರಗಳಲ್ಲಿಯೂ ನೀಡಲಾಗಿದೆ.

Leave A Reply

Your email address will not be published.