ಮಾನವೀಯತೆ ಇನ್ನೂ ಇದೆ ಅನ್ನೋದಕ್ಕೆ ಇದೇ ಸಾಕ್ಷಿ: ವೈರಲ್ ವೀಡಿಯೋ ನೋಡಿ ಮಿಡಿದ ನೆಟ್ಟಿಗರ ಮನಸ್ಸು

Written by Soma Shekar

Published on:

---Join Our Channel---

Humanity viral video : ನಮ್ಮ ಸಮಾಜದಲ್ಲಿ (society) ಮಾನವೀಯತೆ ಎನ್ನುವುದು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ ಎಂದು ಅನೇಕರು ಹೇಳುವುದನ್ನು ನೋಡಿದ್ದೇವೆ. ಅಲ್ಲದೇ ಇದೇ ವೇಳೆ ನಡೆಯುವ ಕೆಲವೊಂದು ಘಟನೆಗಳ ವಿವರಗಳು ಮತ್ತು ವಿಡಿಯೋ ಗಳು ನಮ್ಮ ಕಣ್ಮುಂದೆ ಬಂದಾಗಲೂ ನಮಗೆ ಇದು ಸತ್ಯ ಎನಿಸುತ್ತದೆ. ಆಧುನಿಕತೆಯ ಸೋಗಿನಲ್ಲಿ, ಒತ್ತಡದ ಬದುಕಿನ ಕಾರಣವನ್ನು ಒಡ್ಡುತ್ತಾ ಜನರು ತಮ್ಮ ಜೊತೆಗೆ ಬದುಕುತ್ತಿರುವವರ ಬಗ್ಗೆ ಕಿಂಚಿತ್ತೂ ಗಮನ ನೀಡದೇ ತಾವಾಯಿತು, ತಮ್ಮ ಪಾಡಾಯಿತು ಎಂದು ಬದುಕುವುದು ತೀರಾ ಸಾಮಾನ್ಯವಾದ ವಿಚಾರ ಎನಿಸಿದೆ.

ಆದರೆ ಇಂತಹ ಪರಿಸ್ಥಿತಿಯ ನಡುವೆಯೂ ಆಗೊಮ್ಮೆ, ಈಗೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ ಆಗುವ ಕೆಲವು ಘಟನೆಗಳ ವೀಡಿಯೋಗಳನ್ನು ನೋಡಿದಾಗ ಮಾನವೀಯತೆ ಎನ್ನುವುದು ಇನ್ನೂ ಅಲ್ಪ ಸ್ವಲ್ಪ ನಮ್ಮ ಸಮಾಜದಲ್ಲಿ ಉಳಿದಿದೆ ಎನ್ನುವ ಸಮಾಧಾನ ನಮಗೆ ಸಿಗುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ಅಪರೂಪದ ಹಾಗೂ ಅನೇಕರಿಗೆ ಮಾನವೀಯತೆಯ (Humanity) ಪಾಠವನ್ನು ಹೇಳುವಂತಹ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋಗೆ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ. ಇದನ್ನೂ ಓದಿ : ಯಶ್ ಸಿನಿಮಾ ನಿರ್ಮಾಣ ಮಾಡಲಿರುವ ದಕ್ಷಿಣದ ಸ್ಟಾರ್ ನಿರ್ಮಾಪಕ: ಸಿಕ್ಕಾಪಟ್ಟೆ ಥ್ರಿಲ್ಲಾದ ಅಭಿಮಾನಿಗಳು

ವೈರಲ್ ವೀಡಿಯೋದಲ್ಲಿನ (Viral Video) ದೃಶ್ಯವನ್ನು ಗಮನಿಸಿದಾಗ, ಇದರಲ್ಲಿ ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ಗಾಲಿ ಚಕ್ರಗಳ ಸಣ್ಣ ಗಾಡಿಯ ಮೇಲೆ ನೀರಿನ ಬಾಟಲಿಗಳಂತಹ ದೊಡ್ಡ ಸಂಖ್ಯೆಯ ಸರಕನ್ನು ಎಳೆದುಕೊಂಡು ಹೋಗುತ್ತಿದ್ದು, ಆತ ಹೋಗುತ್ತಿದ್ದ ದಿಕ್ಕಿನಲ್ಲಿ ರಸ್ತೆ ಮೇಲ್ಮುಖವಾಗಿ ಇದ್ದ ಕಾರಣ ಬಹಳ ಶ್ರಮ ಪಟ್ಟು ಎಳೆದುಕೊಂಡು ಹೋಗುತ್ತಿರುತ್ತಾರೆ. ಅದೇ ವೇಳೆ ಫುಟ್ ಪಾತ್ ನಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಬರುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿನ ವ್ಯಕ್ತಿಯ ಕಷ್ಟವನ್ನು ನೋಡಿದ್ದಾರೆ, ಅರ್ಥ ಮಾಡಿಕೊಂಡಿದ್ದಾರೆ.

ಕೂಡಲೇ ಅವರು ತನ್ನ ಕೈಯ್ಯಲ್ಲಿದ್ದ ಪ್ಯಾಕೆಟ್ ಗಳನ್ನು ಮಕ್ಕಳ ಕೈಗೆ ನೀಡಿ, ತಾನು ರಸ್ತೆಗಿಳಿದ ಆ ವ್ಯಕ್ತಿಯ ಗಾಡಿಯನ್ನು ಹಿಂದಿನಿಂದ ನೂಕುತ್ತಾ, ಸರಾಗವಾಗಿ ಅದನ್ನು ಎಳೆದುಕೊಂಡು ಹೋಗಲು ಸಹಾಯವನ್ನು ಮಾಡಿದ್ದಾರೆ. ಆ ರಸ್ತೆಯಲ್ಲಿ ಬಹಳಷ್ಟು ಜನರು ನಡೆದು ಹೋಗುತ್ತಿರುವುದು ನಾವು ನೋಡಬಹುದು. ಆದರೆ ಯಾರಿಗೂ ಕೂಡಾ ರಸ್ತೆಯಲ್ಲಿನ ವ್ಯಕ್ತಿಯ ಕಷ್ಟ ಕಂಡಿರಲಿಲ್ಲ. ಆದರೆ ಒಬ್ಬ ವ್ಯಕ್ತಿ ಮಾತ್ರ ಮುಂದೆ ಬಂದು ನೆರವನ್ನು ನೀಡಿದ್ದು ಮಾನವೀಯತೆಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ.

ವೈರಲ್ ಆದ ಈ ವೀಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಏಳು ಸಾವಿರ ಜನ ಇದನ್ನು ರೀಟ್ವೀಟ್ ಮಾಡಿದ್ದು, 72 ಸಾವಿರಕ್ಕಿಂತಲೂ ಅಧಿಕ ಮಂದಿ ಲೈಕ್ ನೀಡಿದ್ದಾರೆ. ಕಾಮೆಂಟ್ ಮಾಡಿರುವವರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ನೆಟ್ಟಿಗರೊಬ್ಬರು ತಮ್ಮ ಕಾಮೆಂಟ್ ನಲ್ಲಿ, ಒಬ್ಬ ತಂದೆ ತನ್ನ ಹೆಣ್ಣು ಮಕ್ಕಳ ಮುಂದೆ ತೋರಿದ ದಯೆ, ಆ ಮಕ್ಕಳಿಗೆ ಉತ್ತಮ ಜೀವನ ಪಾಠವಾಗಲಿದೆ ಎಂದಿದ್ದಾರೆ.

https://twitter.com/cctvidiots/status/1643956190358159361?t=X1TexfRKmSQa36rEdtHURA&s=08

ಮತ್ತೊಬ್ಬರು ತಮ್ಮ ಕಾಮೆಂಟ್ ನಲ್ಲಿ, ಮಾನವೀಯತೆ ಇನ್ನೂ ಉಳಿದಿದೆ, ಈ ದೃಶ್ಯದಲ್ಲಿ ಅತ್ಯುತ್ತಮ ವಿಷಯ ಏನೆಂದರೆ ಆ ವ್ಯಕ್ತಿ ತನ್ನ ಮಕ್ಕಳಿಗೆ ಒಂದು ಉತ್ತಮ ಮೌಲ್ಯವನ್ನು ತಿಳಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಒಟ್ಟಾರೆ ಕಾಮೆಂಟ್ ಮಾಡಿದವರೆಲ್ಲರೂ ಸಹಾ ಮಾನವೀಯತೆ ಮೆರೆದ ವ್ಯಕ್ತಿಯ ಗುಣವನ್ನು ಹಾಡಿ ಹೊಗಳಿದ್ದಾರೆ. ನಮ್ಮ ಸಮಾಜದಲ್ಲಿ ನಾವು ಎಲ್ಲರಿಗೂ ಸಹಾಯ ಮಾಡಲು ಆಗದೇ ಇದ್ದರೂ, ಅವಕಾಶ ಮತ್ತು ಸಾಮರ್ಥ್ಯ ಇದ್ದಾಗ ಹೀಗೊಂದು ಮಾನವೀಯತೆ ಮೆರೆದರೆ ಇದು ಅನೇಕರಿಗೆ ಸ್ಪೂರ್ತಿಯಾಗುತ್ತದೆ.

Leave a Comment