Shrama Shakti Scheme: ರೈತರು ಭೂತಾಯಿಯ ಮಕ್ಕಳು, ರೈತರು ಕಷ್ಟ ಪಟ್ಟು ಹೊಲದಲ್ಲಿ ಕೃಷಿ ಮಾಡಿದರೆ ಮಾತ್ರ ನಾವು ಇಲ್ಲಿ ಸುಖವಾದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ರೈತರು ಎಷ್ಟೇ ಕಷ್ಟ ಪಟ್ಟರೂ ಸಹ ಕೆಲವೊಮ್ಮೆ ಅವರ ಪರಿಶ್ರಮಕ್ಕೆ ತಕ್ಕ ಬೆಳೆಗಳು ಬಾರದೆ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಇನ್ನು ರೈತರ ಈ ಕಷ್ಟಗಳನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯುವ ಮೂಲಕ ರೈತರು ಮುಖದಲ್ಲಿ ಇದೀಗ ನೆಮ್ಮದಿಯನ್ನು ಕಾಣಬಹುದಾಗಿದೆ.
ಇನ್ನು ಇದೀಗ ಸರ್ಕಾರದ ಕಡೆಯಿಂದ ರೈತರಿಗಾಗಿ ಮತ್ತೊಂದು ಹೊಸ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗಾಗಿ 5 ಲಕ್ಷದ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. ಈ ಹಿಂದೆ ರೈತರಿಗಾಗಿ ಸರ್ಕಾರದ ಕಡೆಯಿಂದ 3 ಲಕ್ಷ ರೂಗಳ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿತ್ತು. ಇದೀಗ 3 ಲಕ್ಷದ ಬದಲಿಗೆ, 2023-24 ರಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಮೂಲಕ ಸರ್ಕಾರ ರೈತರಿಗೆ ಕೃಷಿ ಮಾಡಲು ಮತ್ತಷ್ಟು ಅವಕಾಶ ಮಾಡಿ ಕೊಟ್ಟಿದೆ.
ರೈತರ ಆರ್ಥಿಕ ಪರಿಸ್ಥಿತಿ ಸ್ಥಿರ ಗೊಳಿಸಲು ಕೇಂದ್ರ ಸರ್ಕಾರದಿಂದ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಸುಮಾರು 25000 ಕೋಟಿ ರೂಗಳನ್ನು ಕೇವಲ ರೈತರಿಗಾಗಿ ಮೀಸಲಿಡಲಾಗಿದೆ. ಇನ್ನು ಈಗಾಗಲೆ ಈ ಯೋಜನೆಯ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಇನ್ನು ಈ ಕಾಲದಲ್ಲಿ ಮಹಿಳೆಯರು ಸಹ ಪುರುಷರಿಗೆ ತಕ್ಕ ಹಾಗೆ ದುಡಿಮೆ ಮಾಡುತ್ತಿದ್ದಾರೆ. ಇನ್ನು ಮಹಿಳಾ ರೈತರಿಗಾಗಿ ಶ್ರಮ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಮಹಿಳಾ ರೈತರಿಗೆ ಸುಮಾರು 5 ಲಕ್ಷದ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರವು ಕೃಷಿಯನ್ನು ಬೆಂಬಲಿಸಲು ರೈತರಿಗಾಗಿ ಇದೆ ರೀತಿಯ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ.