ಆ ತರ ಸಿನಿಮಾ ನಿರ್ಮಾಣ ವಿಚಾರದಲ್ಲಿ ಜೈಲಿಗೆ ಹೋಗಿದ್ದ ನಟಿ ಇಸ್ಲಾಂ ಗೆ ಮತಾಂತರ: ಈಗ ಮದುವೆ

Written by Soma Shekar

Published on:

---Join Our Channel---

Gehana Vasishth : ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಅವರ ಪತಿ ರಾಜ್ ಕುಂದ್ರಾ (Raj Kundra) ಅ ಶ್ಲೀ ಲ ಸಿನಿಮಾ ನಿರ್ಮಾಣ ಪ್ರಕರಣ ವಿಚಾರವು ಇಡೀ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿದ್ದ ಸುದ್ದಿಯಾಗಿತ್ತು. ಈ ವೇಳೆ ಒಂದಷ್ಟು ಜನ ನಟಿಯರ ಹೆಸರುಗಳು ಸಹಾ ಹರಿದಾಡಿ ಸುದ್ದಿಯಾಗಿತ್ತು. ಒಂದಷ್ಟು ದಿನ ಮಾದ್ಯಮಗಳಲ್ಲಿ ಇದೇ ವಿಚಾರವು ದೊಡ್ಡ ಸುದ್ದಿಯಾಗಿತ್ತು ಮತ್ತು ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಸಹಾ ನಡೆದಿತ್ತು. ಈಗ ಈ ಪ್ರಕರಣದಲ್ಲಿ ಸದ್ದು ಮಾಡಿದ ನಟಿಯೊಬ್ಬರು ಈಗ ಮತ್ತೊಮ್ಮೆ ಮಾದ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಗೆಹನಾ ವಸಿಷ್ಟ ಅಂತಹ ಚಿತ್ರಗಳ ನಿರ್ಮಾಣದ ವಿಚಾರದಲ್ಲಿ ಬಂಧಿತರಾಗಿದ್ದರು. ಅನಂತರ ನಟಿಗೆ ಜಾಮೀನು ದೊರೆತು ಬಿಡುಗಡೆ ಆಗಿದ್ದರು. ಈಗ ನಟಿ ತಮ್ಮ ಪ್ರಿಯಕರನ ಜೊತೆ ಮದುವೆಯಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ನಟಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಗೆಹನಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು ಹಾಗೂ ಈ ನಟಿಯು ಕಿರುತೆರೆಯಲ್ಲಿ ಸಹಾ ಜನಪ್ರಿಯತೆ ಪಡೆದುಕೊಂಡಿದ್ದರು. ಇದನ್ನೂ ಓದಿ: ನಟ ಪ್ರಭುದೇವ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ: ಸಂಭ್ರಮದಲ್ಲಿ ಕುಟುಂಬ

ಈಗ ನಟಿ ತಮ್ಮ ಪ್ರಿಯಕರ ಫೈಜಾನ್ ಅನ್ಸಾರಿ (Faijan Ansari) ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಫೈಜಾನ್ ಅಮೆಜಾನ್ ಮಿನಿಯಲ್ಲಿ ಒಂದು ಶೋ ನಲ್ಲಿ ಸಹಾ ಕಾಣಿಸಿಕೊಂಡಿದ್ದರು. ನಟಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅನಂತರ ಆಪ್ತರ ಮುಂದೆ ನಿಕಾಹ್ ಮಾಡಿಕೊಂಡಿದ್ದಾರೆ. ಮದುವೆಯ ಫೋಟೋಗಳು ವೈರಲ್ ಆಗಿದೆ.

2021 ರಲ್ಲಿ ಮಾಲ್ವಾನಿ ಪೋಲಿಸರು ಬಂಗಲೆಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿ ಫಿಲ್ಮ್ಸ್‌ ಪ್ರೂಡಕ್ಷನ್‌ ವೊಂದರ ಬ್ಯಾನರ್‌ ಅಡಿಯಲ್ಲಿ ಒಂದಷ್ಟು ಜನರು ಅ ಶ್ಲೀ ಲ ಸಿನಿಮಾ ನಿರ್ಮಾಣ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಆಗ ಗೆಹನಾ ವಸಿಷ್ಠ ಅಲ್ಲಿ ಇರಲಿಲ್ಲವಾದರೂ, ಈ ನಟಿಯು ಅಂತಹ ಕಂಟೆಂಟ್‌ ಗಳನ್ನು ವಿವಿಧ ಪ್ರೂಡಕ್ಷನ್‌ ಸಂಸ್ಥೆ ಹಾಗೂ ಕೆಲವು ಓಟಿಟಿ ಫ್ಲಾಟ್‌ ಫಾರ್ಮ್‌ ಗಳಿಗೆ ಮಾರಾಟ ಮಾಡಿದ್ದಾರೆನ್ನುವ ಆ ರೋಪದಲ್ಲಿ ಬಂಧಿಸಲಾಗಿತ್ತು.

Leave a Comment