ಅಂತೂ ತನ್ನ ಮಗುವಿನ ತಂದೆ ಯಾರೆಂದು ಬಾಯ್ಬಿಟ್ಟ ಇಲಿಯಾನಾ: ಫೋಟೋ ನೋಡಿ ಶಾಕ್ ನಲ್ಲಿ ಫ್ಯಾನ್ಸ್ ಮತ್ತು ನೆಟ್ಟಿಗರು

Written by Soma Shekar

Published on:

---Join Our Channel---

Ileana D’cruze : ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ, ಅನಂತರ ಬಾಲಿವುಡ್ ಗೆ ಹಾರಿದ ಗೋವಾ ಬೆಡಗಿ ನಟಿ ಇಲಿಯಾನಾ ಡಿಕ್ರೂಸ್ (Ileana D’cruze) ಅವರಿಗೆ ಬಾಲಿವುಡ್‌ ನಲ್ಲಿ (Bollywood) ಹೇಳಿ ಕೊಳ್ಳುವಂತ ಸಕ್ಸಸ್ ಸಿಗಲಿಲ್ಲವಾದರೂ, ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್ ಗೆ ಹೋದ ಮೇಲೆ ನಟಿ ಸೌತ್ ಸಿನಿಮಾಗಳ ಕಡೆಗೆ ಮುಖ ಮಾಡಿಲ್ಲವಾದರೂ ಆಗಾಗ ಸುದ್ದಿಗಳಾಗುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಟಿ ಒಂದು ವಿಶೇಷ ಸುದ್ದಿಯಿಂದಾಗಿ ಬಿ ಟೌನ್ ಮಾತ್ರವೇ ಅಲ್ಲದೇ ದಕ್ಷಿಣದ ಸುದ್ದಿಗಳಲ್ಲಿ ಸಹಾ ಹಾಟ್ ಟಾಪಿಕ್ ಆಗಿ ಬದಲಾಗಿದ್ದಾರೆ.

ಹೌದು, ನಟಿ ಇಲಿಯಾನ (Ileana) ಸಾಕಷ್ಟು ಸುದ್ದಿಯಾಗಿರುವುದು ಯಾವ ಕಾರಣಕ್ಕಾಗಿ ಅನ್ನುವುದಾದರೆ, ನಟಿಯು ಮದುವೆಯಾಗದೇ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ನಟಿ ತಾನು ಗರ್ಭಿಣಿ ಎಂದು ಹೇಳಿದ ದಿನದಿಂದಲೂ ಎಲ್ಲರ ಪ್ರಶ್ನೆ ಆ ಮಗುವಿನ ತಂದೆ ಯಾರು ಎನ್ನುವುದೇ ಆಗಿದೆ. ಬಹಳಷ್ಟು ಜನರಿಗೆ ಮಗುವಿನ ತಂದೆ ಯಾರೆಂದು ತಿಳಿಯುವ ಕುತೂಹಲ ಕಾಡಿತ್ತು.

ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ಬಾಯ್‌ಫ್ರೆಂಡ್ ಫೋಟೋವನ್ನು ಶೇರ್ ಮಾಡಿದ್ದು, ಕೊನೆಗೂ ಹಲವು ದಿನಗಳಿಂದ ಅವರ ಅಭಿಮಾನಿಗಳನ್ನು ಮಾತ್ರವೇ ಅಲ್ಲದೇ ಎಲ್ಲರಿಗೂ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ನೀಡಿದ್ದು, ತನ್ನ ಮಗುವಿನ ತಂದೆ ಯಾರು ಎನ್ನುವುದನ್ನು ಇಲಿಯಾನಾ ರಿವೀಲ್ ಮಾಡಿದ್ದಾರೆ. ತಾನು ತಾಯಿಯಾಗಲು ಕಾರಣವಾದ ವ್ಯಕ್ತಿಯ ಬಗ್ಗೆ ಇಷ್ಟು ದಿನ ನಟಿಯು ಯಾವುದೇ ಸುಳಿವು ನೀಡಿರಲಿಲ್ಲ.

ಈಗಲೂ ಸಹಾ ಆ ಮಿಸ್ಟರಿ ವ್ಯಕ್ತಿ ಯಾರು ಎನ್ನುವುದನ್ನು ಸ್ಪಷ್ಟವಾಗಿ ಯಾರು ತಿಳಿಯದ ಹಾಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಫೋಟೋ ಏನೋ ಶೇರ್ ಮಾಡಿದ್ದಾರೆ. ಆದರೆ ಅದರಲ್ಲಿ ಆತನ ಮುಖ ಮಾತ್ರ ಕಾಣಿಸಿಲ್ಲ. ಮುಖ ಕಾಣದಂತಹ ಭಂಗಿಯಲ್ಲಿ ತೆಗೆದಿರುವ ಫೋಟೋ ಶೇರ್ ಮಾಡಿ ಮತ್ತೆ ಕುತೂಹಲ ಮೂಡಿಸಿದ್ದಾರೆ.

Leave a Comment