ತನ್ನ ಮಗುವಿನ ತಂದೆಯನ್ನ ಕೊನೆಗೂ ತೋರಿಸಿದ ಇಲಿಯಾನಾ? ಆದ್ರೆ ಇಲ್ಲೂ ಒಂದು ಟ್ವಿಸ್ಟ್ ಕೊಟ್ರು ನಟಿ

Written by Soma Shekar

Published on:

---Join Our Channel---

Ileana D’cruz : ನಟಿ ಇಲಿಯಾನಾ ಡಿಕ್ರೂಜ್ ತೆಲುಗು ಸಿನಿಮಾ ರಂಗದಲ್ಲಿ (Tollywood) ಸ್ಟಾರ್ ನಟಿಯಾಗಿ ಮಿಂಚಿದವರು. ವರ್ಷಗಳ ಹಿಂದೆ ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡ ನಟಿ ಅನಂತರ ಬಾಲಿವುಡ್ ಗೆ ಹಾರಿದರು. ಅನಂತರ ಅವರ ಮತ್ತೆ ದಕ್ಷಿಣದ ಕಡೆಗೆ ಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲೂ ನಟಿ ಸಕ್ರಿಯವಾಗಿಲ್ಲ. ಆದರೆ ಇದೇ ವೇಳೆ ನಟಿ ತಮ್ಮ ವೈಯಕ್ತಿಕ ಜೀವನದ ವಿಷಯವಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ನಟಿ ಇಲಿಯಾನಾ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು ಅಲ್ಲದೇ ಈ ವಿಷಯ ಒಂದು ಹೊಸ ಚರ್ಚೆಯನ್ನು ಸಹಾ ಹುಟ್ಟು ಹಾಕಿತ್ತು.

ನಟಿ ಗರ್ಭಿಣಿ ಎಂದು ಹೇಳಿದ ವಿಷಯ ಅಭಿಮಾನಿಗಳಿಗೆ ಮತ್ತು ಸಿನಿ ಪ್ರೇಮಿಗಳಿಗೆ ದೊಡ್ಡ ಶಾಕ್ ನೀಡಿತ್ತು. ಇದಕ್ಕೆ ಕಾರಣ ನಟಿ ಇಲಿಯಾನಾ ಅವರಿಗೆ ಇನ್ನೂ ಮದುವೆಯಾಗಿಲ್ಲ ಎನ್ನುವುದೇ ಆಗಿತ್ತು.

ಮದುವೆಗೂ ಮೊದಲೇ ನಟಿ ತಾಯಿ ಆಗುತ್ತಿರುವ ವಿಚಾರವನ್ನು ಕೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು ಮತ್ತು ನಟಿ ಸೀಕ್ರೆಟ್ ಆಗಿ ಮದುವೆ ಏನಾದ್ರು ಆದ್ರಾ? ಎನ್ನುವ ಅನುಮಾನಗಳು ಸಹಾ ಹುಟ್ಟು ಹಾಕಿದವು.

ನಟಿಯ ಹೊಟ್ಟೆಯಲ್ಲಿರುವ ಮಗುವಿನ ತಂದೆ ಯಾರು? ಎನ್ನುವುದು ಎಲ್ಲರಲ್ಲೂ ಮೂಡಿದ್ದ ಸಹಜ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ನಟಿ ಉತ್ತರವನ್ನು ನೀಡದೇ ಇನ್ನಷ್ಟು ಕುತೂಹಲವನ್ನು ಮೂಡಿಸಿತ್ತು.

ಕೆಲವು ದಿನಗಳ ಹಿಂದೆ ಮುಖ ತೋರಿಸದೇ ವ್ಯಕ್ತಿಯೊಬ್ಬರ ಫೋಟೋ ಶೇರ್ ಮಾಡಿದಾಗ ನೆಟ್ಟಿಗರು ಬಹುಶಃ ಅವರೇ ನಟಿಯ ಮಗುವಿನ ತಂದೆ ಇರಬೇಕೆಂದು ಊಹೆ ಮಾಡಿದ್ದರು.

ಈಗ ಇದರ ಬೆನ್ನಲ್ಲೇ ನಟಿ ತಮ್ಮ ಬಾಯ್ ಫ್ರೆಂಡ್ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಮಗುವಿನ ತಂದೆಯ ಮುಖವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಬಾಯ್ ಫ್ರೆಂಡ್ ಮುಖವನ್ನೇನೋ ತೋರಿಸಿದ್ದಾರೆ ಆದರೆ ಇದೇ ವೇಳೆ ನಟಿ ಅವರ ಹೆಸರನ್ನು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ. ಬಹುಶಃ ಮುಂದಿನ ಪೋಸ್ಟ್ ನಲ್ಲಿ ಹೆಸರನ್ನು ರಿವೀಲ್ ಮಾಡಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.

Leave a Comment