Type 2 Diabetes; ಸಕ್ಕರೆ ಅಲ್ಲ ಉಪ್ಪು ಸೇವಿಸಿದರೆ ಬರುತ್ತೆ Type 2 Diabetes; ಸಕ್ಕರೆ ಕಾಯಿಲೆ ಮೇಲೆ ಮತ್ತೊಂದು ಸಂಶೋಧನೆ!

Written by Sanjay A

Published on:

---Join Our Channel---

Type 2 Diabetes: ಸದ್ಯ ಜನರ ಆಹಾರ ಪದ್ಧತಿಗಳು ಬದಲಾಗುತ್ತಿರುವುದರಿಂದ ಅವರ ಆರೋಗ್ಯದಲ್ಲಿ ಸಹ ಸಾಕಷ್ಟು ಏರುಪೇರು ಕಂಡು ಬರುತ್ತಿದೆ. ಇನ್ನು ಇದೀಗ ನಮ್ಮ ಭಾರತ ದೇಶದಲ್ಲಿ ಹೆಚ್ಚಿನ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಯಸ್ಸಾದವರ ಜೊತೆಗೆ ವಯಸ್ಕರರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಕಷ್ಟು ಜನರು ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ ಎಂದುಕೊಂಡಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ.

ಇಂದು ನಾವು ತಿಳಿಸುವ ಈ ಪದಾರ್ಥದಿಂದ ಸಹ ಸಕ್ಕರೆ ಕಾಯಿಲೆ ಬರುತ್ತದೆ ಎಂದರೆ ನೀವು ನಂಬುತ್ತೀರಾ. ಹೌದು, ಕೇವಲ ಸಕ್ಕರೆ ಸೇವಿಸುವುದರಿಂದ ಡಯಾಬಿಟಿಸ್ ಬರುತ್ತದೆ ಎನ್ನುವುದು ಸುಳ್ಳು. ಕೇವಲ ಸಕ್ಕರೆ ಮಾತ್ರವಲ್ಲದೆ ಅತಿಯಾಗಿ ಉಪ್ಪನ್ನು ಸೇವಿಸಿದರೂ ಸಹ Type 2 diabetes ಹೆಚ್ಚಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಟುಲೇನ್ ವಿಶ್ವವಿದ್ಯಾನಿಲಯವು ನಡೆಸಿದ ಒಂದು ಅಧ್ಯಯನದಲ್ಲಿ ಸುಮಾರು 4 ಲಕ್ಷ ವಯಸ್ಕರರ ಮೇಲೆ ಅವರ ಉಪ್ಪು ಸೇವನೆಯ ಅಭ್ಯಾಸವನ್ನು ಕೇಂದ್ರೀಕರಿಸುವ ಸಮೀಕ್ಷೆ ನಡೆಸಲಾಗಿತ್ತು. ಇನ್ನು ಈ ಸಮೀಕ್ಷೆಯಲ್ಲಿ ಸುಮಾರು 13 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ಈ Type 2 diabetes ಸೇರಿದೆ ಎಂದು ಗುರುತಿಸಲಾಗಿದೆ.

ಜನರು ತಮ್ಮ ಊಟದಲ್ಲಿ ಉಪ್ಪಿನ ಅಂಶ ಕಡಿಮೆ ಇದ್ದಾಗ, ಅದಕ್ಕೆ ಕೆಲವೊಮ್ಮೆ ಉಪ್ಪು ಸೇರಿಸಿ ಸೇವಿಸುತ್ತಾರೆ. ಕೆಲವರು ಯಾವಾಗಲೂ ಇಂತಹ ಅಭ್ಯಾಸವನ್ನು ಹೊಂದಿರುತ್ತಾರೆ. ಇನ್ನು ಜ್ಞಾಹ ಜನರು 13%, 20%, 39% ರಷ್ಟು Type 2 diabetes ಅನ್ನು ಅಭಿವೃದ್ದಿ ಪಡಿಸುವ ಸಂಭಾವನೆಯನ್ನು ಹೊಂದಿದ್ದಾರೆ ಎಂದು ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಟುಲೇನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಪ್ರತಿಷ್ಠಿತ ಅಧ್ಯಕ್ಷ ಹಾಗೂ ಸಂಶೋಧನೆಯ ಪ್ರಮುಖ ಲೇಖಕ Dr Lu Qi ಅವರು, ಉಪ್ಪು ಸೇವನೆಯನ್ನು ಕಡಿಮೆ ಮಾಡುವುದರಿಂದ ರಕ್ತದ ಒತ್ತಡ ಹಾಗೂ ಹೃದಯರಕ್ತನಾಳದ ಕಾಯಿಲೆ ಅಂತಹವುಗಳನ್ನು ಕಡಿಮೆ ಮಾಡಬಹುದು ಎಂಬುದು ಮೊದಲೇ ತಿಳಿದಿತ್ತು. ಆದರೆ ಇದೀಗ ಉಪ್ಪು ಸೇವನೆ ಕಡಿಮೆ ಮಾಡಿದರೆ Type 2 diabetes ಅನ್ನು ಸಹ ತದೆಗೆಟ್ಟಬಹುದು ಎನ್ನುವುದು ಇದೀಗ ತಿಳಿದುಬಂದಿದೆ.

ಇನ್ನು ಜನರು ತಮ್ಮ ಆಹಾರಗಳಿಗೆ ರುಚಿಯನ್ನು ನೀಡಲು ಹೆಚ್ಚಾಗಿ ಉಪ್ಪು ಬಳಸುವುದು ಸಹಜ, ಇನ್ನು ಅದಕ್ಕೆ ಪರ್ಯಾಯವಾಗಿ ಕಡಿಮೆ ಸೋಡಿಯಂ ಅಂಶಗಳನ್ನು ಹುಡುಕಬೇಕು ಎಂದು Dr Lu Qi ಅವರು ಶಿಫಾರಸ್ಸು ಮಾಡುತ್ತಾರೆ.

Leave a Comment