Emergency: ಇಲ್ಲಿ ಕಾಣ್ತಿರೋದು ಇಂದಿರಾ ಗಾಂಧಿಯಲ್ಲ, ನಟಿ ಕಂಗನಾ ಫಸ್ಟ್ ಲುಕ್ ಗೆ ನೆಟ್ಟಿಗರು ಸ್ಟನ್ !!

Written by Soma Shekar

Published on:

---Join Our Channel---

ಬಾಲಿವುಡ್‌ ನ ಸ್ಟಾರ್ ನಟಿ ಕಂಗನಾ ರಣಾವತ್ ಅಭಿನಯದ, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಬಹು ನಿರೀಕ್ಷಿತ ಸಿನಿಮಾ ಎಮರ್ಜೆನ್ಸಿ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಹೊರಬಂದಿದೆ. ಈ ಹೊಸ ಅಪ್ಡೇಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಿನಿಪ್ರೇಮಿಗಳು ಹಾಗೂ ನಟಿಯ ಅಭಿಮಾನಿ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ. ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಮೂಡಿಸುವಂತೆ ಈಗ ಒಂದು ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿದೆ.

ಟೀಸರ್ ಸಣ್ಣದೇ ಆದರೂ ಸಹಾ ಅದು ಸಂಚಲನವನ್ನು ಸೃಷ್ಟಿಸುವಂತೆ ವೈರಲ್ ಆಗುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ ನಟಿ ಕಂಗನಾ ರಣಾವತ್ ಈ ಸಿನಿಮಾದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫಸ್ಟ್ ಲುಕ್ ಟೀಸರ್ ನೋಡಿ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಅಚ್ಚರಿಗೊಂಡಿದ್ದಾರೆ. ಎಲ್ಲರ ಈ ಅಚ್ಚರಿಗೆ ಕಾರಣವಾಗಿರುವುದು ಫಸ್ಟ್ ಲುಕ್ ನಲ್ಲಿ ಕಂಗನಾ ರಣಾವತ್ ಥೇಟ್ ಇಂದಿರಾಗಾಂಧಿಯ ರೀತಿಯಲ್ಲಿ ಕಾಣುತ್ತಿದ್ದಾರೆ.

ಅಷ್ಟು ಮಾತ್ರವೇ ಸಾಲದು ಎನ್ನುವಂತೆ ನಟಿಯ ದನಿಯ ಏರಿಳಿತಗಳು, ಹಾವ ಭಾವಗಳು ಸಹಾ ಇಂದಿರಾಗಾಂಧಿ ಅವರಂತೆಯೇ ಕಾಣುತ್ತಿದ್ದು ಎಲ್ಲರನ್ನೂ ಮೋಡಿ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಮರ್ಜೆನ್ಸಿ ಸಿನಿಮಾದ ಫಸ್ಟ್ ಲುಕ್ ಸಖತ್ ವೈರಲ್ ಆಗುವ ಮೂಲಕ ಸದ್ದನ್ನು ಮಾಡುತ್ತಿದೆ. ಸಿನಿಮಾ ರಂಗದಲ್ಲಿ ಕೆಲವು ನಟಿಯರು ಈಗಾಗಲೇ ಇಂದಿರಾಗಾಂಧಿ ಅವರ ಪಾತ್ರವನ್ನು ಪೋಷಿಸಿದ್ದಾರೆ. ಆದರೆ ನಟಿ ಕಂಗನಾ ರಣಾವತ್ ಮಾತ್ರ ಭಿನ್ನವಾಗಿ ಇಂದಿರಾಗಾಂಧಿಯ ಅವರ ಹಾಗೆಯೇ ಕಾಣುತ್ತಿರುವುದು ವಿಶೇಷವಾಗಿದೆ.

https://www.instagram.com/p/Cf-rnETBRiz/?igshid=YmMyMTA2M2Y=

ನಟಿ ಕಂಗನಾ ರಣಾವತ್ ಗೆ ಈ ಸಿನಿಮಾ ಬಹಳ ವಿಶೇಷವಾಗಿದೆ. ಏಕೆಂದರೆ ನಟಿ ಕಂಗನಾ ಈ ಸಿನಿಮಾದಲ್ಲಿ ನಟಿಸುವ ಜೊತೆಗೆ ಸ್ವತಃ ನಿರ್ದೇಶನ ಸಹಾ ಮಾಡುತ್ತಿದ್ದಾರೆ. ಪ್ರಸ್ತುತ ನಟಿ ಕಂಗನಾಗೆ ನಿರೀಕ್ಷಿತ ಮಟ್ಟದ ಗೆಲುವುಗಳು ಸಿಕ್ಕಿಲ್ಲ. ಅವರ ಅಭಿನಯದ ಪಂಗಾ, ತಲೈವಿಯಂತಹ ಸಿನಿಮಾಗಳು ನಿರೀಕ್ಷಿತ ಮಟ್ಟದ ಗೆಲುವನ್ನು ಸಾಧಿಸಿಲ್ಲ. ಇತ್ತೀಚಿಗೆ ಬಿಡುಗಡೆಯಾದ ಧಾಕಡ್ ಸಿನಿಮಾ‌ ಮಕಾಡೆ ಮಲಗಿ, ದೊಡ್ಡ ಸೋಲನ್ನು ಕಂಡಿದೆ. ಈಗ ಎಮರ್ಜೆನ್ಸಿ ನಟಿಯನ್ನು ಮತ್ತೆ ಗೆಲುವಿನ ಹಾದಿಗೆ ಕರೆ ತರಬಹುದು ಎನ್ನುವ ನಿರೀಕ್ಷೆ ಇದೆ.

Leave a Comment