Big Boss: ತನ್ನ ಕ್ವಾರಂಟೈನ್ ಕಹಾನಿ ಹೇಳಿದ ಪ್ರತಾಪ್ ಗೆ ಎದುರಾಯ್ತು ಸಂಕಷ್ಟ; ಡ್ರೋನ್ ವಿರುದ್ಧ ಅಧಿಕಾರಿ ಗರಂ

Written by Soma Shekar

Published on:

---Join Our Channel---

Drone Prathap : ಬಿಗ್ ಬಾಸ್ ಸ್ಪರ್ಧಿ (Big Boss Kannada 10) ಡ್ರೋನ್ ಪ್ರತಾಪ್ ಗೆ ಎದುರಾಗಿದೆ ಸಂಕಷ್ಟ. ಕಳೆದ ವಾರದ ಒಂದು ಎಪಿಸೋಡ್ ನಲ್ಲಿ ತನ್ನ ಕ್ವಾರಂಟೈನ್ ಕಥೆಯನ್ನು ಹೇಳಿಕೊಂಡಿದ್ದ ಡ್ರೋನ್ ಪ್ರತಾಪ್ (Drone Prathap) ಬಿಬಿಎಂಪಿ ನೋಡಲ್ ಅಧಿಕಾರಿಯೊಬ್ಬರ ಮೇಲೆ ಪರೋಕ್ಷವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಅನ್ನೋ ವಿಚಾರಗಳನ್ನು ಪ್ರತಾಪ್ ಹಂಚಿಕೊಂಡಿದ್ರು.

ಮೆಂಟಲಿ ಅನ್ ಸ್ಟೇಬಲ್ ಅಂತ ಸಹಿ ಮಾಡಿ ಕೊಡುವಂತೆ ನನ್ನ ತಲೆತಲೆಗೆ ಹೊಡೆದು ಕಿರುಕುಳವನ್ನು ಕೊಟ್ರು. ಹೋಟೆಲ್ ನಿಂದ ಕೆಳಗೆ ಬಂದ ಮೇಲೆ ಕೂಡಾ ಏನೇನು ಮಾಡಿದ್ರು ಅಂತೆಲ್ಲಾ ಹೇಳಿದ ಪ್ರತಾಪ್, ಇವನು ಸುಳ್ಳ , ಕಳ್ಳ ಇವರು ಹೇಳೋದೆಲ್ಲ ಸುಳ್ಳು ನಂಬಬೇಡಿ ಅಂತ ಮಾಧ್ಯಮಗಳಿಗೆ ಹೇಳಿ ಕಳ್ಸಿದ್ರು. ಕ್ವಾರಂಟೈನ್ ನಲ್ಲಿ ತನಗೆ ಮಾನಸಿಕವಾಗಿ ನೋವನ್ನ ಕೊಟ್ರು, ಹುಚ್ಚ ಅಂತ ಪೇಪರ್ ಗೆ ಸಹಿ ಹಾಕು ಅಂತ ಹೇಳಿದ್ರು ಎಂದೆಲ್ಲಾ ಪ್ರತಾಪ್ ಆರೋಪಗಳನ್ನ ಮಾಡಿದ್ರು.

ಈ ವಿಚಾರ ದೊಡ್ಡ ಸುದ್ದಿಯಾದ ಮೇಲೆ ಬಿಬಿಎಂಪಿಯ ಅಧಿಕಾರಿ (BBMP official) ಡಾ. ಪ್ರಯಾಗ್ ರಾಜ್ ಅವರು ಮಾಧ್ಯಮ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ಕೇಸ್ ದಾಖಲಿಸಿದ್ದು ನಾನೇ, ನಾನು ಕಾನೂನು ಪ್ರಕಾರವಾಗಿ ಕಾರ್ಯವನ್ನ ನಿರ್ವಹಿಸಿದ್ದೆ, ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಇದನ್ನೂ ಓದಿ : BBK 10: ತಮಾಷೆ ಅಮಾಸೆ ಆಗುತ್ತಾ? ಸಂಗೀತಾ ತುಕಾಲಿ ಮಧ್ಯೆ ಮತ್ತೊಂದು ಕದನಕ್ಕೆ ವೇದಿಕೆ ಸಜ್ಜಾಗ್ತಿದ್ಯಾ

ಆದರೆ ಈಗ ಆತ ಬಿಗ್ ಬಾಸ್ ಮನೆಯಲ್ಲಿ ಹೇಳಿರುವ ವಿಚಾರಗಳು ಖಂಡಿತ ನಿಜ ಅಲ್ಲ. ಆತನಿಗೆ ಯಾವುದೇ ಮಾನಸಿಕ ಹಿಂಸೆಯನ್ನು ಕೊಟ್ಟಿಲ್ಲ, ಆತನ ತಲೆಗೆ ಹೊಡೆದಿಲ್ಲ ಪ್ರತಾಪ್ ಮಹಾನ್ ಸುಳ್ಳುಗಾರ. ಈತ ಹೇಳೋ ಮಾತಿಗೆ ಒಂದೇ ಒಂದು ಸಾಕ್ಷಿ ನೀಡಲಿ. ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗ್ತೇನೆ ಅಂತ ಬಿಬಿಎಂಪಿ ಅಧಿಕಾರಿ ಹೇಳಿದ್ದಾರೆ.

ಅಲ್ಲದೇ ಆತನ ತಂಗಿ ಮದುವೆ, ತಾಯಿ ವಿಚಾರ ಯಾವುದನ್ನು ನಾನು ಮಾತನಾಡಿಲ್ಲ. ಪ್ರತಾಪ್ ತಂದೆ ಬಹಳ ಒಳ್ಳೆಯವರು, ಬೇಕಾದ್ರೆ ಅವರನ್ನೇ ಕೇಳಿ. ಇದುವರೆಗೆ ಆತನಿಗೆ ಹಿಂಸೆ ಆಗಿದ್ದರೆ ನನ್ನ ವಿರುದ್ಧ ಯಾಕೆ ದೂರು ಕೊಡಲಿಲ್ಲ. ಪ್ರತಾಪ್ ಮನೆಯ ವಾಚ್ ಮ್ಯಾನ್ ಇದ್ದ, ಅಪಾರ್ಟ್ಮೆಂಟ್ ಬೀಗ ಹೊಡೆದಿಲ್ಲ. ಪ್ರತಾಪ್ ಸುಳ್ಳು ಹೇಳಿಕೊಂಡು ಟೋಪಿ ಹಾಕೋನು, ಆತನನ್ನ ಒಳ್ಳೆ ಹೋಟೆಲ್ ನಲ್ಲಿ ಇರಿಸಿ ಊಟ ಕೊಟ್ಟಿದ್ವಿ.

ಪ್ರತಾಪ್ ಇನ್ನು ಎರಡು ದಿನದಲ್ಲಿ ಕ್ಷಮೆಯಾಚನೆ ಮಾಡದೇ ಇದ್ರೆ ಕಾನೂನಿನ ಮೂಲಕ ಹೋರಾಟ ಮಾಡ್ತೀನಿ. ಬಿಗ್ ಬಾಸ್ (Big Boss Kannada 10 ) ವೇದಿಕೆಯಲ್ಲೇ ಆತ ಕ್ಷಮೆ ಯಾಚನೆ ಮಾಡದೇ ಇದ್ರೆ ಆತನ ವಿರುದ್ಧ ಮಾನ ನಷ್ಟ ಮೊಕದ್ದಮೆಯನ್ನು ಹಾಕ್ತೀನಿ ಅಂತ ಬಿಬಿಎಂಪಿ ಅಧಿಕಾರಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

Leave a Comment