ಕೊನೆಗೂ ನೆರವೇರಿದ ಬಹುದಿನದ ನಿರೀಕ್ಷೆ: ವೀಕೆಂಡ್ ಟೆಂಟ್ ಗೆ ಬಂದ್ರು ದಿಗ್ಗಜ ಸಾಹಿತಿ
Weekend with Ramesh: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ ಐದು ಭರ್ಜರಿ ಮನರಂಜನೆಯ ಜೊತೆಗೆ ಸಾಧಕರ ಜೀವನದ ಕಥೆಯ ಮೂಲಕ ಅನೇಕರಿಗೆ ಸ್ಪೂರ್ತಿಯನ್ನು ಸಹಾ ನೀಡ್ತಾ ಇದೆ. ಆದರೆ ಈ ವಾರಾಂತ್ಯದ ಬಗ್ಗೆ ಮಾತ್ರ ಸಾಕಷ್ಟು ಕುತೂಹಲ ಮೂಡಿತ್ತು, ಸಾಕಷ್ಟು ಪ್ರಶ್ನೆಗಳಿಗೆ ಸಹಾ ಅದು ಕಾರಣವಾಗಿತ್ತು. ಯಾಕಂದ್ರೆ ಶುಕ್ರವಾರ ಬಂದರೂ ಸಹಾ ವಾಹಿನಿಯು ಈ ವಾರದ ಸಾಧಕರು ಯಾರು ಅನ್ನೋ ಸುಳಿವನ್ನು ನೀಡರಿಲಿಲ್ಲ. ಪ್ರತಿ ವಾರದ ಹಾಗೆ ಪ್ರೊಮೋ ಸಹಾ ಬಿಡುಗಡೆ ಮಾಡಿರಲಿಲ್ಲ.
ವಾಹಿನಿ ಹೀಗೆ ಪ್ರೊಮೋ(promo) ಬಿಡುಗಡೆ ಮಾಡದೇ ಸುಮ್ಮನೆ ಇದ್ದುದ್ದನ್ನು ನೋಡಿದ ಪ್ರೇಕ್ಷಕರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರ ಆಗುತ್ತಾ, ಇಲ್ವಾ ಎನ್ನುವ ಒಂದು ಗೊಂದಲಕ್ಕೆ ಸಿಲುಕಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಪ್ರಶ್ನೆ ಗಳನ್ನು ಶೇರ್ ಮಾಡಿಕೊಂಡಿದ್ರು. ಆದರೆ ಈಗ ಎಲ್ಲಾ ಗೊಂದಲಗಳು, ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಇದನ್ನೂ ಓದಿ: ಆ ಒಂದು ಸಮಸ್ಯೆಯಿಂದ ಸಲ್ಮಾನ್ ಮದುವೆ ಆಗಿಲ್ಲ: ನಟನ ತಂದೆ ಬಹಿರಂಗಪಡಿಸಿದ ಸತ್ಯ
ಹೌದು, ವಾಹಿನಿ ಕಡೆಗೂ ಈ ವಾರದಲ್ಲಿ ಸಾಧಕರ ಕುರ್ಚಿಯಲ್ಲಿ ಕೂರುವವರು ಯಾರು? ಅನ್ನುವುದರ ಸುಳಿವನ್ನು ನೀಡಿದೆ. ವಾಹಿನಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಸುಕಾಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಈ ವಾರದ ಸಾಧಕ ಯಾರು ಎನ್ನುವುದನ್ನು ಗುರುತಿಸಿ ಹೇಳುವಂತೆ ಪ್ರೇಕ್ಷಕರ ಮುಂದೆ ಪ್ರಶ್ನೆಗಳನ್ನು ಇಟ್ಟಿದ್ದು ಅದಕ್ಕೆ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಉತ್ತರಗಳನ್ನು ನೀಡುತ್ತಿದ್ದಾರೆ.
ವಾಹಿನಿಯು ಶೇರ್ ಮಾಡಿದ ಪೋಸ್ಟ್ ನಲ್ಲಿ, ಫೋಟೋ ದ ಜೊತೆಗೆ ಪದಗಳಲ್ಲೇ ನಗೆಯನ್ನು ಮೀಟಿದ ಸಾಹಿತಿ ಈ ವಾರದ ಅತಿಥಿ, ಯಾರು ಅಂತ ಗೆಸ್ ಮಾಡಿ ಎಂದು ಕೇಳಿದೆ. ವಾಹಿನಿ ಹಂಚಿಕೊಂಡ ಪೋಸ್ಟ್ ಗೆ ಬಹಳಷ್ಟು ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಉತ್ತರವನ್ನು ನೀಡುವುದರ ಜೊತೆಹೆ, ಈ ವಾರದ ಸಾಧಕರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕಾಮೆಂಟ್ ಮಾಡಿದವರೆಲ್ಲಾ ಫೋಟೋ ನೋಡುತ್ತಲೇ ಇವರು ಹಿರಿಯ ಸಾಹಿತಿ ದೊಡ್ಡ ರಂಗೇಗೌಡರು(Dodda Rangegowda) ಎಂದು ಉತ್ತರವನ್ನು ನೀಡಿದ್ದಾರೆ.
ಕಾಮೆಂಟ್ ಮಾಡಿದವರು, ಕೊನೆಗೂ ದೊಡ್ಡ ರಂಗೇಗೌಡರ ನೆನಪು ಆಯಿತಾ ಜೀ ಟಿವಿ ಯವರಿಗೆ ಎಂದಿದ್ದಾರೆ. ಅಲ್ಲದೇ, ಕನ್ನಡ ಸಾಹಿತ್ಯದ ಆಸ್ತಿ,ಕನ್ನಡದ ಕವಿ, ಸಾಹಿತಿ, ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ, ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ದಿಯಾಗಿರುವ ಶ್ರೀಯುತರು ಪ್ರೊ.ಡಾ|| ದೊಡ್ಡರಂಗೇಗೌಡರು ಎಂದು ಕಾಮೆಂಟ್ ಮಾಡಿದ್ದಾರೆ.