Trending ರೈಲಿನ ಕೊನೇ ಬೋಗಿಯ ಮೇಲೆ ಇಂಗ್ಲೀಷ್ ನ X ಅಕ್ಷರ ಏಕಿರುತ್ತೆ? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಾಹಿತಿ!
Human interest : ನೀವು ಎಂದಾದರೂ, ಒಮ್ಮೆಯಾದರೂ ರೈಲಿನಲ್ಲಿ (Train) ಪ್ರಯಾಣ ಮಾಡಿರಬಹುದು ಅಲ್ಲವೇ? ಅದೇ ವೇಳೆ ರೈಲನ್ನು ಹತ್ತದೇ ಇರುವವರು ಇದ್ದಾರೆ ಎನ್ನುವುದು ಸಹಾ ಸತ್ಯವಾದ ವಿಚಾರ. ಆದರೆ ನಾವೀಗ ನಿಮಗೆ ರೈಲು ಹತ್ತಿದವರ, ರೈಲು ಹತ್ತದೇ ಇರುವವರ ಬಗ್ಗೆ ಹೇಳಲು ಹೊರಟಿಲ್ಲ. ಬದಲಾಗಿ ಇಲ್ಲಿ ವಿಷಯ ಬೇರೊಂದು ಇದೆ. ಇಲ್ಲಿ ಬೇರೊಂದು ಪ್ರಶ್ನೆಯೇ ಇದೆ. ಆ ಪ್ರಶ್ನೆ ಏನೂ ಅಂತಾನೂ ಹೇಳ್ತೀವಿ ನೋಡಿ.
ರೈಲು ಹತ್ತಲು ರೈಲ್ವೆ ನಿಲ್ದಾಣಕ್ಕೆ (Railway Station) ಹೋದಂತಹ ಸಂದರ್ಭದಲ್ಲಿ ರೈಲಿನ ಬೋಗಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ನಿಮಗೆ ರೈಲಿನ ಕೊನೆಯ ಬೋಗಿಯ ಹಿಂಭಾಗವನ್ನು ನೋಡಿದಾಗ ಅಲ್ಲೊಂದು ವಿಶೇಷವಾದ ಚಿಹ್ನೆ ನಿಮ್ಮ ಗಮನವನ್ನು ಸೆಳೆಯುತ್ತದೆ. ಹೌದು, ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ ಇಂಗ್ಲಿಷ್ ಅಕ್ಷರ X ಅನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿರುತ್ತದೆ. ಇದನ್ನೂ ಓದಿ : Air Hostess ನೀವು ಗಗನಸಖಿ ಆಗಬೇಕಾ? ಹಾಗಿದ್ರೆ ಇಲ್ಲಿದೆ ಫುಲ್ ಡೀಟೇಲ್ಸ್! ತಪ್ಪದೇ ಓದಿ
ನೀವು ಅದನ್ನು ಗಮನಿಸಿರಬಹುದು. ಆದರೆ ರೈಲಿನ ಕೊನೆಯ ಬೋಗಿಯ ಮೇಲೆ ಆ ರೀತಿ X ಎಂದು ಏಕೆ ಬರೆಯಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಅಥವಾ ಎಂದಾದರೂ ಅದರ ಕಾರಣವೇನೆಂದು ನೀವು ಆಲೋಚನೆಯನ್ನು ಮಾಡಿರುವಿರೇ. ಇಲ್ಲ ಎನ್ನುವುದಾದರೆ ಆ ಆಸಕ್ತಿಕರ ವಿಚಾರವನ್ನು ನಾವೀಗ ತಿಳಿಯೋಣ.
ರೈಲಿನ ಬೋಗಿಯ ಹಿಂದೆ ಎಕ್ಸ್ ಎಂದು ಬರೆದಿದ್ದರೆ ಅದು ಆ ರೈಲಿನ ಕೊನೆಯ ಬೋಗಿ ಎನ್ನುವ ಅರ್ಥವನ್ನು ಕೊಡುತ್ತದೆ. ಅಲ್ಲದೇ X ಅಕ್ಷರದ ಅಡಿಯಲ್ಲಿ ಕೆಂಪು ದೀಪ ಸಹಾ ಇರುತ್ತದೆ ಮತ್ತು ಅದರ ಪಕ್ಕದಲ್ಲಿ LV ಎಂಬ ಬೋರ್ಡ್ ಒಂದನ್ನು ಸಹಾ ಜೋಡಿಸಲಾಗಿದೆ ಎನ್ನುವುದನ್ನು ನೀವು ಗಮನಿಸಬಹುದು.
X ನಂತೆಯೇ ಇವೆಲ್ಲವೂ ಸಹಾ ಬಹಳ ಉಪಯುಕ್ತವಾಗಿವೆ. ಈ ಎಲ್ಲಾ ಚಿನ್ಹೆಗಳು ಸಹಾ ರೈಲಿನ ಆ ಬೋಗಿಯನ್ನು ಕೊನೆಯ ಬೋಗಿ ಎಂದು ಪರಿಗಣಿಸಲು ನೆರವಾಗುತ್ತವೆ. ಹಾಗಾದ್ರೆ ಈ X ಅಕ್ಷರ ಹಗಲಿನ ವೇಳೆ ಮಾತ್ರ ಕಾಣುತ್ತೆ, ರಾತ್ರಿಯಲ್ಲಿ ಕಾಣೋದಿಲ್ಲ, ಆಗ ಹೇಗೆ? ಅನ್ನೋ ಅನುಮಾನ ಈಗ ನಿಮಗೆ ಮೂಡಿರಬಹುದು. ಅದಕ್ಕೂ ವಿವರಣೆ ಇಲ್ಲಿದೆ.
ರೈಲಿನ ಕೊನೆಯ ಬೋಗಿಯನ್ನು ರಾತ್ರಿ ವೇಳೆ ಗುರುತಿಸಲು ಅದರ ಮೇಲೆ ಬರೆಯಲಾಗಿರುವ ಎಕ್ಸ್ ಅಕ್ಷರ ಕಾಣುವುದಿಲ್ಲವಾದ್ದರಿಂದ, ಅದರ ಪಕ್ಕದಲ್ಲಿರುವ ಕೆಂಪು ದೀಪ ರಾತ್ರಿ ವೇಳೆ ಬಹಳ ಉಪಯೋಗಕ್ಕೆ ಬರುತ್ತದೆ. ರಾತ್ರಿ ವೇಳೆ ಉರಿಯುತ್ತಿರುವ ಆ ಕೆಂಪು ದೀಪವನ್ನು ನೋಡಿದಾಗ ರೈಲು ಎಲ್ಲಾ ಬೋಗಿಗಳೊಂದಿಗೆ ಹೋಗುತ್ತಿದೆ ಎನ್ನುವುದು ಅರ್ಥವಾಗುತ್ತದೆ.
ಒಂದು ವೇಳೆ ರೆಡ್ ಲೈಟ್ ಕಾಣದೇ ಹೋದಲ್ಲಿ
ರೈಲಿನ ಕೊನೆಯ ಬೋಗಿ ನಾಪತ್ತೆಯಾಗಿರುವುದು ರೈಲ್ವೆ ಅಧಿಕಾರಿಗಳಿಗೆ ತಿಳಿಯುತ್ತದೆ. ಅಲ್ಲದೇ ರೈಲಿನ ಕೊನೆಯ ಬೋಗಿಯಲ್ಲಿ ಯಾವುದೇ ಅಕ್ಷರಗಳಿಲ್ಲದಿದ್ದರೆ, ಬಹುಶಃ ಆಕಸ್ಮಿಕವಾಗಿ ಕೆಲವು ಬೋಗಿಗಳಿಲ್ಲದೇ ಚಲಿಸುತ್ತಿದೆ ಎಂದೂ ಗಮನಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ.