Health Tips : ಡ್ರ್ಯಾಗನ್ ಫ್ರೂಟ್ ನ ಸೂಪರ್ ಫುಡ್ ಅನ್ನೋದ್ಯಾಕೆ? ಕಾರಣ ತಿಳಿದ್ರೆ ಕೂಡಲೇ ಕೊಂಡು ತರ್ತೀರಾ!

0 2,086

Health Tips : ಡ್ರ್ಯಾಗನ್ ಫ್ರೂಟ್ (Dragon Fruit) ನೋಡೋದಕ್ಕೆ ಬಹಳ ವಿಚಿತ್ರವಾಗಿ ಕಂಡುಬಂದರೂ, ಇದರಿಂದ ವಿವಿಧ ರೀತಿಯ ಪ್ರಯೋಜನಗಳು ಇವೆ ಎನ್ನಲಾಗಿದೆ. ಡ್ರ್ಯಾಗನ್ ಫ್ರೂಟ್ ಜೀರ್ಣ ಸಮಸ್ಯೆಗಳು (Digestion Problems) ಅಥವಾ ಬಲಹೀನತೆಯಿಂದ (weakness) ಬಳಲುತ್ತಿರುವವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಬಹಳ ಉಪಯೋಗವಾಗುತ್ತದೆ. ಅದನ್ನು ಪ್ರಮುಖವಾಗಿ ಡಯಾಬಿಟಿಸ್ ರೋಗಿಗಳು ಸೇರಿದಂತೆ ಬಹಳಷ್ಟು ಜನ ತಿನ್ನುವುದಕ್ಕೆ ಇಷ್ಟಪಡುತ್ತಾರೆ.

ಯುಎಸ್ಎ (USA) ನಲ್ಲಿನ ಕೆಲವು ನಿಪುಣರು, ಈ ಹಣ್ಣು ತಿಂದ ಮೇಲೆ ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಗುರುತಿಸಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಡ್ರ್ಯಾಗನ್ ಫ್ರೂಟ್ ನಲ್ಲೆ ಏನೆಲ್ಲಾ ಇದೆ ಎನ್ನುವುದರ ಸಂಪೂರ್ಣ ವಿವರಗಳನ್ನು ನಾವೀಗ ತಿಳಿದುಕೊಳ್ಳೋಣ.

ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಸಿ (Vitamin C) ನಂತಹ ಆ್ಯಂಟಿ ಆಕ್ಸಿಡೆಂಟ್ ಗಳು ಪುಷ್ಕಳವಾಗಿ ಲಭ್ಯವಿದೆ. ಆದ್ದರಿಂದಲೇ ಇದು ಸಂಪೂರ್ಣ ಆರೋಗ್ಯವನ್ನು ಸುಧಾರಿಸಲು ಬಹಳ ನೆರವನ್ನು ನೀಡುತ್ತದೆ.

ಡ್ರ್ಯಾಗನ್ ಫ್ರೂಟ್ ನಲ್ಲಿ ಫೈಬರ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇದ್ದು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಸಹಕಾರವನ್ನು ನೀಡುತ್ತದೆ.

ಈ ಹಣ್ಣಿನಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿದ್ದು ಹೈಡ್ರೇಟ್ ಆಗಿರಲು ನೆರವನ್ನು ನೀಡುತ್ತದೆ ಹಾಗೂ ಪೊಟಾಸಿಯಂ ನಂತಹವು ಅಗತ್ಯವಿರುವ ಎಲೆಕ್ಟ್ರೋಲೈಟ್ ಗಳನ್ನು ಇದು ನೀಡುತ್ತದೆ.

ಕ್ಯಾಲರಿ ಕಡಿಮೆ ಬಯಸುವವರು ಇವುಗಳನ್ನು ಸೇವಿಸುವುದು ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ಕ್ಯಾಲರಿಗಳು ಬಹಳ ಕಡಿಮೆ ಇರುತ್ತದೆ. ಅತ್ಯಧಿಕ ಕ್ಯಾಲರಿಗಳನ್ನು ತೆಗೆದುಕೊಳ್ಳುವುದಕ್ಕೆ ಇಷ್ಟಪಡದೇ ಇರುವವರು ಇದನ್ನು ಸೇವಿಸುವುದು ಉತ್ತಮವಾಗಿರುತ್ತದೆ.

ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಇರುವುದರಿಂದ ದೇಹದ ಚರ್ಮಕ್ಕೆ ಬಹಳ ಸಹಾಯಕವಾಗಿದ್ದು, ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಾಕಷ್ಟು ಪರಿಣಾಮಕಾರಿಯಾಗಿದೆ.

ಡ್ರ್ಯಾಗನ್ ಫ್ರೂಟ್ ಫೈಬರ್ ಮತ್ತು ಶರೀರಕ್ಕೆ ಅವಶ್ಯಕವಾಗಿರುವ ಫ್ಯಾಟ್ ಪದಾರ್ಥಗಳನ್ನು ನೀಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಬಹಳಷ್ಟು ವಿಧಾನದಲ್ಲಿ ನೆರವನ್ನ ನೀಡುತ್ತದೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಾಳದುವವರು ಈ ಹಣ್ಣನ್ನು ತಿನ್ನುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಕೊನೆಯದಾಗಿ ಹಸಿವು ಇದ್ದಾಗ ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕ ಆಹಾರ ದೊರೆತಂತಾಗುತ್ತದೆ. ಆದ್ದರಿಂದಲೇ ಇದನ್ನು ಸೂಪರ್ ಫುಡ್ ಎನ್ನಲಾಗುತ್ತದೆ.

Leave A Reply

Your email address will not be published.