tickled : ಕಚಗುಳಿ ಇಟ್ಟಾಗ ನಗು ಬರಲು ಕಾರಣವೇನು ಗೊತ್ತಾ?
ತೋಳುಗಳ ಕೆಳಗೆ, ಗಂಟಲಿನ ಬಳಿ ಮತ್ತು ಪಾದದ ಕೆಳಗೆ ಕಚಗುಳಿ ಇಟ್ಟಾಗ ಕೂಗಿ, ಕುಣಿದು ಕುಪ್ಪಳಿಸುತ್ತೇವೆ. ಇದ್ದಕ್ಕಿದ್ದಂತೆ ಕಚಗುಳಿ ಇಟ್ಟಾಗ, ನಾವು ತುಂಬಾ ನಗುತ್ತೇವೆ!
ಏಕೆಂದರೆ ಮೆದುಳಿನ ಹೈಪೋಥಾಲಮಸ್ ಪ್ರದೇಶವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ. ವಿಕಸನೀಯ ಜೀವಶಾಸ್ತ್ರಜ್ಞರು ಮತ್ತು ನರವಿಜ್ಞಾನಿಗಳು ಹೇಳುವ ಪ್ರಕಾರ, ನಮ್ಮ ಮೆದುಳಿನ ಎರಡು ಭಾಗಗಳೇ ಕಚಗುಳಿ ಇಡುವ ಸಂವೇದನೆಗೆ ಕಾರಣವಾಗಿದೆ.
ಕಚಗುಳಿಯ ಅವಧಿಯಲ್ಲಿ ಬಿಡುಗಡೆಗೊಂಡ ಎಂಡಾರ್ಫ಼ಿನ್ ಅನ್ನು ಕ್ಯಾರೋಲೀನ್ ಎಂದು ಕೂಡ ಕರೆಯಲಾಗುತ್ತದೆ.ಕಚಗುಳಿಯ ಸಂವೇದನೆಯು ನೋವು ಮತ್ತು ಸ್ಪರ್ಶ ಎರಡಕ್ಕೂ ಸಂಬಂಧಿಸಿದ ನರತಂತುಗಳ ಸಂಜ್ಞೆಗಳನ್ನು ಒಳಗೊಳ್ಳುತ್ತದೆ ಎಂದು ತೋರುತ್ತದೆ.
ಮನಃಶಾಸ್ತ್ರಜ್ಞರಾದ ಸ್ಟ್ಯಾನ್ಲಿ ಹಾಲ್ ಮತ್ತು ಆರ್ಥರ್ ಆಲಿನ್ “ಕಚಗುಳಿ”ಯನ್ನು ಎರಡು ಭಿನ್ನ ಪ್ರಕಾರಗಳ ವಿದ್ಯಮಾನಗಳೆಂದು ವಿವರಿಸಿದರು.ಒಂದು ಪ್ರಕಾರವು ಚರ್ಮಕ್ಕೆ ಅಡ್ಡಲಾಗಿ ಬಹಳ ಹಗುರ ಚಲನೆಯಿಂದ ಉಂಟಾಗುತ್ತದೆ. ಈ ಪ್ರಕಾರದ ಕಚಗುಳಿಯನ್ನು ನಿಸ್ಮೆಸಿಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನಗೆಯನ್ನು ಉಂಟುಮಾಡುವುದಿಲ್ಲ ಮತ್ತು ಇದರ ಜೊತೆ ಕೆಲವೊಮ್ಮೆ ನವೆಯ ಸಂವೇದನೆ ಇರುತ್ತದೆ.