ಪ್ರೇಕ್ಷಕರಿಗೆ ಮತ್ತೆ ಮತ್ತೆ ನಿರಾಸೆ: ಸೀತಾ ರಾಮ ಸೀರಿಯಲ್ ತಡ ಆಗ್ತಿರೋದಾದ್ರು ಯಾಕೆ?
Sita Rama Serial : ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮನರಂಜನೆಯ ಪ್ರಮುಖ ಮೂಲಗಳಾಗಿವೆ. ವಿವಿಧ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಬಹಳಷ್ಟು ಸೀರಿಯಲ್ ಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡು ಯಶಸ್ಸಿನ ಪಯಣವನ್ನು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಜೀ ಕನ್ನಡದಲ್ಲಿ (zee Kannada) ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ವಿಶೇಷ ಆಚರಣೆಯನ್ನ ಪಡೆದುಕೊಂಡು ಟಾಪ್ ಸೀರಿಯಲ್ ಗಳ ಸ್ಥಾನದಲ್ಲಿ ಮಿಂಚುತ್ತಿದೆ. ವಾಹಿನಿಯು ಹೊಸ ಸೀರಿಯಲ್ ಗಳ ಪ್ರೊಮೋಗಳನ್ನು ಕೂಡಾ ಪ್ರಸಾರ ಮಾಡುತ್ತಾ ಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.
ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಬಿಗ್ ಬಾಸ್ ಶೋ ನಂತರ ಯಾವುದೇ ಹೊಸ ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಲವು ತಿಂಗಳುಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹೊಸ ಸೀರಿಯಲ್ ಗಳ ಪ್ರೊಮೋ ದಲ್ಲಿ ವೈಷ್ಣವಿ ಗೌಡ ನಾಯಕಿಯಾಗಿರುವ ಸೀತಾರಾಮ (Sita Rama) ಸೀರಿಯಲ್ ಪ್ರೋಮೋ ಕೂಡಾ ಸೇರಿತ್ತು.
ಈ ಹೊಸ ಪ್ರೊಮೋ ನೋಡಿ ವೈಷ್ಣವಿ ಗೌಡ ಅವರ ಅಭಿಮಾನಿಗಳು ಸಾಕಷ್ಟು ಖುಷಿ ಪಟ್ಟಿದ್ದರು. ಈ ಧಾರವಾಹಿಯ ಜೊತೆಗೆ ಇನ್ನೊಂದೆರಡು ಹೊಸ ಧಾರಾವಾಹಿಗಳ ಸೂಚನೆಯನ್ನು ಸಹಾ ವಾಹಿನಿಯು ಕೊಟ್ಟಿತ್ತು. ಅವುಗಳಲ್ಲಿ ಭೂಮಿಗೆ ಬಂದ ಭಗವಂತ ಈಗಾಗಲೇ ಪ್ರಸಾರವನ್ನು ಪ್ರಾರಂಭಿಸಿ ಸಾಕಷ್ಟು ಸಮಯ ಕಳೆದಿದ್ದು, ಕಿರುತೆರೆಯ ಪ್ರೇಕ್ಷಕರ ಅಪಾರ ಅಭಿಮಾನವನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಹೊಸ ಧಾರಾವಾಹಿ ಅಮೃತಧಾರೆ ಕೂಡಾ ಪ್ರಸಾರವನ್ನು ಆರಂಭಿಸಿದೆ.
ಆದರೆ ಸೀತಾರಾಮ ಸೀರಿಯಲ್ ನ ಪ್ರಸಾರ ಯಾವಾಗ ಎನ್ನುವುದರ ಯಾವುದೇ ಸುಳಿವು ಕೂಡಾ ಇನ್ನು ಪ್ರೇಕ್ಷಕರಿಗೆ ದೊರೆತಿಲ್ಲ. ಸೀರಿಯಲ್ ಯಾವಾಗ ಬರುತ್ತದೆ ಎಂದು ಕಾಯುತ್ತಿರುವ ಕಿರುತೆರೆಯ ಪ್ರೇಕ್ಷಕರಿಗೆ ಇದೊಂದು ಪ್ರಶ್ನೆಯಾಗಿ ಉಳಿದಿದೆ. ಇತ್ತೀಚೆಗೆ ಸಿರಿಯಲ್ ನ ಪ್ರೊಮೋ ಕೂಡ ಪ್ರಸಾರವಾಗುತ್ತಿಲ್ಲ. ಕೆಲವೊಂದು ಸುದ್ದಿಗಳ ಪ್ರಕಾರ ಸೀತಾರಾಮ ಸೀರಿಯಲ್ ಆರಂಭವಾಗುವ ಸೂಚನೆಗಳು ಸದ್ಯಕ್ಕಂತೂ ಇಲ್ಲ ಎನ್ನಲಾಗುತ್ತಿದೆ.
ಧಾರಾವಾಹಿಯನ್ನು ರೀ ಶೂಟ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯನ್ನು ಪ್ರಮುಖ ಮಾಧ್ಯಮ ಒಂದು ವರದಿ ಮಾಡಿದೆ. ಆದ್ದರಿಂದಲೇ ಧಾರವಾಹಿ ಆರಂಭಕ್ಕೆ ಇನ್ನಷ್ಟು ಸಮಯ ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿರುವ ವೈಷ್ಣವಿ ಗೌಡ ಬಿಗ್ ಬಾಸ್ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಸಾಕಷ್ಟು ಸಮಯದ ನಂತರ ಅವರು ಕಿರುತೆರೆಗೆ ಸೀರಿಯಲ್ ಒಂದರ ಮೂಲಕ ಮರಳಿ ಬರುತ್ತಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಕುತೂಹಲವನ್ನು ಮೂಡಿಸಿದೆ.