Kisan Credit Card: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ದೇಶದ ರೈತರಿಗಾಗಿ ಆಗಾಗ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತಾರೆ. ರೈತರು ನಮ್ಮ ದೇಶದ ಬೆನ್ನೆಲುಬು, ಹಾಗೆ ಕೃಷಿ ಅಭ್ಯಾಸವೂ ಎಂದಿಗೂ ನಮ್ಮ ದೇಶದಲ್ಲಿ ನಿಲ್ಲಬಾರದು, ಅದು ತಲೆ ಮಾತುಗಳಿಗೆ ಮುಂದುವರೆಯಬೇಕು ಎನ್ನುವ ಕಾರಣಕ್ಕೆ ಸರ್ಕಾರ ಸಹ ರೈತರಿಗಾಗಿ ಆರ್ಥಿಕವಾಗಿ ಸಹಾಯಕ್ಕೆ ನಿಂತಿದೆ.
ಇನ್ನು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಮೊದಲು ಅವರು ರೈತರಿಗಾಗಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಚಿಸುತ್ತಾರೆ. ಇನ್ನು ಅನೇಕ ಬಾರಿ ನೀವು ಮಾಧ್ಯಮಗಳಲ್ಲಿ ನೋಡಿರುತ್ತೀರಿ, ಬೆಳೆ ಹಾಳಾಗಿ ಅನೇಕ ರೈತರು ಪ್ರಾಣ ತ್ಯಾಗ ಮಾಡುತ್ತಿದ್ದು, ಇಂತಹವುಗಳನ್ನು ನಿಲ್ಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ವಿಶೇಷವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಅವಾಮಾನದ ಕಾರಣದಿಂದಾಗಿ ರೈತರ ಸಂಪೂರ್ಣ ಬೆಳೆಗಳು ನಾಶವಾದಾಗ ರೈತರು ಬ್ಯಾಂಗ್ ಗಳಿಂದ ಪಡೆದ ಸಾಲವನ್ನು ಸರ್ಕಾರ ಮನ್ನ ಮಾಡಿತ್ತು. ಇನ್ನು ಇದೀಗ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರ ಕೃಷಿ ಮತ್ತು ಇನ್ನಿತರ ಅಗತ್ಯಗಳನ್ನು ಪೂರೈಸಲು ಇದೀಗ ಕೆಲವು ಬ್ಯಾಂಕ್ ಗಳು ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ.
ಬಿಹಾರದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಇದೀಗ ಕೆಲವು ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ವಿತರಿಸುತ್ತಿದ್ದು, ರೈತರಿಗಾಗಿ ಅಲ್ಪಾವಧಿಯ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಪಡೆದಿರುವ ರೈತರು ಬ್ಯಾಂಕ್ ಗಳಿಂದ ಬಡ್ಡಿ ರಹಿತ ಸಾಲವನ್ನು ಪಡೆಯಬಹುದು ಎಂದು ಇದೀಗ ಬಿಹಾರ ಸರ್ಕಾರದ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.
ಇದೀಗ ರೈತರು ಬ್ಯಾಂಕ್ ಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಬಳಸಿಕೊಂಡು ಸುಲಭವಾಗಿ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬಹುದು. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ. ಇನ್ನು ನಮ್ಮ ರಾಜ್ಯದಲ್ಲಿ ಇಂತಹ ಒಂದು ಯೋಜನೆ ಜಾರಿಗೆ ತಂದರೆ, ರೈತರಿಗೆ ಸಾಕಷ್ಟು ಸಹಾಯವಾಗಲಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..