Dhruva Sarja ಹಬ್ಬದ ದಿನವೇ ಹೊಸ ಅತಿಥಿಯ ಆಗಮನ, ಎರಡನೇ ಮಗುವಿನ ತಂದೆಯಾದ ಧೃವ ಸರ್ಜಾ
Dhruva Sarja : ಕನ್ನಡದ ಜನಪ್ರಿಯ ನಟ ಧೃವ ಸರ್ಜಾ ಅವರ ಮನೆಗೆ ಗೌರಿ ಗಣೇಶ ಹಬ್ಬದ ಶುಭ ದಿನದಂದೇ ಹೊಸ ಅತಿಥಿಯ ಆಗಮನವಾಗಿದ್ದು, ಹಬ್ಬದ ಸಂಭ್ರಮ ಈಗ ದುಪ್ಪಟ್ಟಾಗಿದೆ. ಧೃವ ಸರ್ಜಾ (Dhruva Sarja) ಅವರ ಪತ್ನಿ ಪ್ರೇರಣಾ ಅವರು ಹಬ್ಬದ ದಿನವೇ ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಮಗುವಿನ ಜನನವಾಗಿದ್ದು ಮಗು ಮತ್ತು ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದ್ದರು. ಈಗ ಸೀಮಂತ ನಡೆದ ಕೆಲವೇ ದಿನಗಳ ಅಂತರದಲ್ಲಿ ಧೃವ ಅವರು ಎರಡನೇ ಮಗುವಿನ ತಂದೆಯಾಗಿದ್ದಾರೆ. ಹಬ್ಬದ ದಿನವೇ ಮನೆಗೆ ಹೊಸ ಅತಿಥಿಯ ಆಗಮನವು ಇಡೀ ಕುಟುಂಬಕ್ಕೆ ಖುಷಿಯನ್ನು ನೀಡಿದೆ.
ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ. ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು ಈಗ ಎರಡನೆಯದಾಗಿ ಗಂಡು ಮಗುವಿನ ಆಗಮನವಾಗಿದ್ದು, ಇಬ್ಬರ ಮನೆಯಲ್ಲೂ ಸಂತೋಷ ಮತ್ತು ಸಂಭ್ರಮವನ್ನು ತಂದಿದೆ.