Ola ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಬಂಪರ್ ರಿಯಾಯತಿ! ದೀಪಾವಳಿ ಹಬ್ಬಕ್ಕೆ ಸುಮಾರು 26500 ರೂಗಳ ದೊಡ್ಡ ರಿಯಾಯತಿ!

Written by Sanjay A

Published on:

---Join Our Channel---

Ola Electric scooter: ಭಾರತದಲ್ಲಿ ಇಂಧನದ ಬೆಲೆ ಹೆಚ್ಚಾಗುತ್ತಿರುವ ವೇಳೆ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇನ್ನು ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಆವೃತ್ತಿಗಳನ್ನು ಅನೇಕ ವಿನ್ಯಾಸಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಪೈಪೋಟಿ ಸೃಷ್ಟಿಸಿದೆ. ಇನ್ನು Ola ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ವಾಹನಗಳ ಪಟ್ಟಿಯಲ್ಲಿ ಒಂದಾಗಿದೆ. ಇನ್ನು ಇದೀಗ ದೀಪಾವಳಿ ಹಬ್ಬದ ಈ ಶುಭ ಸಮಯದಲ್ಲಿ Ola ಕಂಪನಿಯು ತಮ್ಮ ಗ್ರಾಹಕರಿಗಾಗಿ ವಿಶೇಷ ಕೊಡುಗೆ ತಂದಿದೆ.

ಹೌದು, ನೀವು ಇದೀಗ ದೀಪಾವಳಿ ಹಬ್ಬದ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಲಿದೆ. ಇದೀಗ Ola ಕಂಪನಿಯು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಈ ಎಲ್ಲಾ ರಿಯಾಯತಿಯ ಜೊತೆಗೆ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ನೀವು Ola ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಿದರೆ ನೀವು ಸುಮಾರು 26,500 ರೂಗಳ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ Ola S1 Pro Gen 2, ಮೇಲೆ 7000 ಮೌಲ್ಯದ ಉಚಿತ ಎಕ್ಸ್ಟೆಂಡೆಡ್ ವ್ಯಾರೆಂಟಿ ಅನ್ನು ಸಹ ಪಡೆಯಬಹುದು. ಅಲ್ಲದೆ ಬ್ಯಾಟರಿಯ ಮೇಲೆ ನೀವು ಸುಮಾರು 50% ರಿಯಾಯತಿಯನ್ನು ಸಹ ಪಡೆಯಬಹುದು. Ola S1 Pro Gen 2 ಸ್ಕೂಟರ್ ಅನ್ನು ಖರೀದಿಸಿದರೆ, ನೀವು 10000 ವರೆಗೂ ರಿಯಾಯತಿ ಪಡೆಯುತ್ತೀರಿ. S1 Air and S1X Plus ವಾಹನಗಳ ಮೇಲೆ ನೀವು 5000 ವರೆಗೂ ರಿಯಾಯತಿ ಪಡೆದುಕೊಳ್ಳಬಹುದು.

ಅಲ್ಲದೆ ನೀವು Ola ಸ್ಕೂಟರ್ ಗಳ ಮೇಲೆ ಹೆಚ್ಚುವರಿ ರಿಯಾಯತಿಯನ್ನು ಸಹ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಗಳ ಮೇಲೆ ಸುಮಾರು 7,500 ರೂಗಳ ರಿಯಾಯತಿಯನ್ನು ಪಡೆಯಬಹುದು. ಹಾಗೂ ಝೀರೋ ಡೌನ್ ಪೇಮೆಂಟ್, ನೋ-ಕಾಸ್ಟ್ EMI, ಹಾಗೂ ಬಡ್ಡಿ ದರಗಳನ್ನು ಸಹ ಶೇಕಡಾ 5.99% ದರಕ್ಕೆ ಇರಿಸಲಾಗಿದೆ. ಈ ಎಲ್ಲಾ ರಿಯಾಯತಿಗಳ ಜೊತೆಗೆ Ola ಸ್ಕೂಟರ್ ಅನ್ನು ಬಹಳ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದು.

Leave a Comment