ಶ್ರೀರಸ್ತು ಶುಭಮಸ್ತು ನಲ್ಲಿ ದೊಡ್ಡ ಬದಲಾವಣೆ: ಸಮರ್ಥ್ ಪಾತ್ರದಿಂದ ದೀಪಕ್ ಹೊರ ನಡೆದಿದ್ದೇಕೆ?

0 2

SriRastu Shubhamastu : ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ, ಸ್ಯಾಂಡಲ್ವುಡ್ ನ‌ ಹಿರಿಯ ನಟಿ ಸುಧಾರಾಣಿ (Sudharani), ಅಜಿತ್ ಹಂದೆ ಮತ್ತು ಲಾವಣ್ಯ ಭರಧ್ವಾಜ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರು ಶ್ರೀ ರಸ್ತು ಶುಭಮಸ್ತು ಈಗಾಗಲೇ ಜನರ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಸೀರಿಯಲ್ ನಲ್ಲಿ ತಾತನ ಪಾತ್ರದಲ್ಲಿ ನಟಿಸಿ ಇಡೀ ಧಾರಾವಾಹಿಯ ಪ್ರಮುಖ ಆಕರ್ಷಣೆ ಎನ್ನುವಂತೆ ಮಿಂಚ್ತಾ‌ ಇದ್ದಾರೆ ಹಿರಿಯ ನಟ….‌ ಜನ ಮೆಚ್ಚಿದ ಈ ಸೀರಿಯಲ್ ನಲ್ಲಿ ಇದೀಗ ಇದ್ದಕ್ಕಿದ್ದ ಹಾಗೆ ಪ್ರಮುಖ ಪಾತ್ರವೊಂದರ ಪಾತ್ರಧಾರಿ ಬದಲಾಗಿದ್ದು, ಪ್ರೇಕ್ಷಕರಿಗೆ ಶಾಕ್ ನೀಡಿದೆ.

ಸೀರಿಯಲ್ ನ ಪ್ರಮುಖ ಪಾತ್ರಗಳಲ್ಲಿ ಒಂದು ತುಳಸಿ ಅವರ ಮಗ ಸಮರ್ಥ್ ಪಾತ್ರ. ಈ ಪಾತ್ರದಲ್ಲಿ ನಟ ದೀಪಕ್ ಗೌಡ (Deepak Gowda) ಅವರು ನಟಿಸುತ್ತಿದ್ದರು. ಸಮರ್ಥ್ ಪಾತ್ರಕ್ಕೆ ದೀಪಕ್ ಗೌಡ ಅವರು ಜೀವ ತುಂಬಿದ್ದರು. ದೀಪಕ್ ಗೌಡ ಅವರ ಸಮರ್ಥ್ ಪಾತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಆದರೆ ಈಗ ಇದೇ ಪಾತ್ರದಲ್ಲಿ ಬದಲಾವಣೆ ಆಗಿದೆ. ಸಮರ್ಥ್ ಪಾತ್ರಕ್ಕೆ ದೀಪಕ್ ಗೌಡ ಅವರ ಬದಲಾಗಿ ಬೇರೊಬ್ಬ ನಟ ಎಂಟ್ರಿ ನೀಡಿದ್ದು, ಇದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಇದನ್ನೂ ಓದಿ : ಮತ್ತೆ ಮದುವೆಗೆ ಮೊದಲ ಕಂಟಕ: ನರೇಶ್ 3ನೇ ಪತ್ನಿ ಕೊಟ್ಟ ಶಾಕ್! ಸಿನಿಮಾ ಬಿಡುಗಡೆ ಡೌಟ್

ಮಾದ್ಯಮಗಳ ವರದಿಗಳ ಪ್ರಕಾರ ದೀಪಕ್ ಗೌಡ ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್ ನಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈ ಸೀರಿಯಲ್ ನಲ್ಲಿ ಸಮರ್ಥ್ ಹಾಗೂ ಆತನ ಪತ್ನಿ ಯಾಗಿ ನಟಿ ಚಂದನಾ ರಾಘವೇಂದ್ರ (Chandana Raghavendra) ಅವರು ಕಾಣಿಸಿಕೊಂಡಿದ್ದಾರೆ. ಸಮರ್ಥ್ ಮತ್ತು ಸಿರಿಯಾಗಿ ದೀಪಕ್ ಗೌಡ ಮತ್ತು ಚಂದನಾ ಅವರ ಕೆಮಿಸ್ಟ್ರಿ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು ಅನ್ನೋದ್ರಲ್ಲಿ ಖಂಡಿತ ಎರಡು ಮಾತಿಲ್ಲ.

ಆದರೆ ಈಗ ದೀಪಕ್ ಗೌಡ ಸೀರಿಯಲ್ ನಿಂದ ಹೊರ ನಡೆದಿರುವ ಕಾರಣ ಸಮರ್ಥ್ ಪಾತ್ರಕ್ಕೆ ದೊರೆಸಾನಿ ಸೀರಿಯಲ್ ನಲ್ಲಿ ಮತ್ತು ಕಣ್ಸೆಳೆವ ಮಾಯಾವಿ ಹೆಸರಿನ ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ ದರ್ಶಿತ್ ಗೌಡ (Darshith Gowda) ಅವರು ಎಂಟ್ರಿ ನೀಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಇಂತಹ ದಿಢೀರ್ ಬದಲಾವಣೆಯನ್ನು ನೋಡಿ ಪ್ರೇಕ್ಷಕರಿಗೆ ಅಚ್ಚರಿಯ ಜೊತೆಗೆ ಶಾಕ್ ಕೂಡಾ ಎನಿಸಿದೆ.‌

ದರ್ಶಿತ್ ಅವರು ಮುಂದಿನ ದಿನಗಳಲ್ಲಿ ಸಮರ್ಥ್ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇನ್ನು ದೀಪಕ್ ಗೌಡ ಅವರು ಸೀರಿಯಲ್ ನಿಂದ ಹೊರ ನಡೆದಿರುವ ಬಗ್ಗೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ‌. ಆದರೆ ಕೆಲವೊಂದು ವರದಿಗಳ ಪ್ರಕಾರ ದೀಪಕ್ ಅವರು ಸಿನಿಮಾಗಳ ಕಡೆಗೆ ಒಲವು ತೋರಿದ್ದು, ಆದ್ದರಿಂದಲೇ ಸೀರಿಯಲ್ ನಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.