Deekshit Shetty: ದೀಕ್ಷಿತ್ ಶೆಟ್ಟಿ ಗರ್ಲ್ ಫ್ರೆಂಡ್ ಆದ ರಶ್ಮಿಕಾ; ಥ್ರಿಲ್ ಆದ ಅಭಿಮಾನಿಗಳು

Written by Soma Shekar

Published on:

---Join Our Channel---

Deekshit Shetty: ಅನಿಮಲ್ (Animal Movie) ಸಿನಿಮಾದ ನಂತರ ಬಾಲಿವುಡ್ ನಲ್ಲೂ ಸದ್ದು ಮಾಡುತ್ತಿದ್ದಾರೆ ರಶ್ಮಿಕಾ. ಈ ಹಿಂದೆ ಎರಡು ಸಿನಿಮಾಗಳಲ್ಲಿ ಸಿಗದ ಯಶಸ್ಸು ಈಗ ರಶ್ಮಿಕಾಗೆ ದೊರೆತಿದೆ. ಸದ್ಯಕ್ಕಂತೂ ರಶ್ಮಿಕಾ ಬಾಲಿವುಡ್ ಮತ್ತು ಟಾಲಿವುಡ್ ಎರಡೂ ಕಡೆ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದು, ಅನಿಮಲ್ ಸಿನಿಮಾ ನಂತರ ಈಗ ಹೊಸ ಸಿನಿಮಾಕ್ಕೆ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ‌.

ಈಗ ರಶ್ಮಿಕಾ (Rashmika) ಕನ್ನಡದ ದಿಯಾ ಸಿನಿಮಾ ಖ್ಯಾತಿಯ ನಟ, ಕಿರುತೆರೆ ಪ್ರೇಕ್ಷಕರಿಗೆ ನಾಗಿಣಿ ಸೀರಿಯಲ್ ಮೂಲಕ ಪರಿಚಿತರಾಗಿದ್ದ ನಟ ದೀಕ್ಷಿತ್ ಶೆಟ್ಟಿ (Deekshit Shetty) ನಾಯಕನಾಗಿರುವ ಗರ್ಲ್ ಫ್ರೆಂಡ್ (The Girl Friend) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ದೊಡ್ಡ ಸಕ್ಸಸ್ ಸಿಕ್ಕ ಸಂಭ್ರಮದಲ್ಲೇ ಬೆನ್ನಲ್ಲೇ ಈಗ ಗರ್ಲ್ ಫ್ರೆಂಡ್ ಆಗಿ ಮಿಂಚಲು ನಟಿ ಸಜ್ಜಾಗಿದ್ದಾರೆ.

ಗೀತಾ ಬ್ಯಾನರ್ ಆರ್ಟ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಅಲ್ಲು ಅರವಿಂದ್ (Allu Arvind) ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆ ಎನ್ನುವ ಸುದ್ದಿಗಳಾಗಿದೆ. ರಶ್ಮಿಕಾ ಮತ್ತು ದೀಕ್ಷಿತ್ ಶೆಟ್ಟಿ ಈಗಾಗಲೇ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Leave a Comment