Costliest Nail Polish : ಕೆಲವೊಂದು ವಸ್ತುಗಳು ನಮಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೂ ಸಿಗುತ್ತವೆ ಅಲ್ಲದೇ ಇದೇ ವಸ್ತುಗಳು ನಮ್ಮ ಊಹೆಗೂ ಮೀರಿದಂತಹ ದುಬಾರಿ ಬೆಲೆಗೂ ಸಹಾ ಸಿಗುತ್ತದೆ ಎಂದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ದುಬಾರಿ ಬೆಲೆಯ ವಸ್ತುಗಳು ಅಂದಾಗ ನಮ್ಮ ಆಲೋಚನೆಯಲ್ಲಿ ವಜ್ರ, ಬೆಲೆ ಬಾಳುವ ಆಭರಣಗಳು, ಐಶಾರಾಮೀ ಕಾರು ಇಂತಹ ವಸ್ತುಗಳು ಕಾಣಿಸಿಕೊಳ್ಳುತ್ತವೆ.
ಆದರೆ ಮೂರು ಮರ್ಸಿಡೀಸ್ ಗಿಂತಲೂ ಅಧಿಕ ಬೆಲೆಯ ನೈಲ್ ಪಾಲೀಶ್ ಇದೆ ಎಂದರೆ ನಿಮಗೆ ಖಂಡಿತ ಅಚ್ಚರಿಯಾಗಬಹುದು. ಹೌದು, ಅಜಚುರ್ (Azature) ಹೆಸರಿನ ನೈಲ್ ಪಾಲಿಶ್ ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ನೈಲ್ ಪಾಲಿಶ್ (Costliest Nail Polish) ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ದೂರದಿಂದ ನೋಡಿದಾಗ ಈ ನೈಲ್ ಪಾಲಿಶ್ ನಲ್ಲಿ ಖಂಡಿತ ಏನೂ ವಿಶೇಷ ಕಾಣಿಸೋದಿಲ್ಲ. ಆದರೆ ಹತ್ತಿರದಿಂದ ನೋಡಿದಾಗ ಇದರಲ್ಲಿ ಅಡಗಿರುವಂತಹ 267 ಕ್ಯಾರೆಟ್ ನ ಬ್ಲಾಕ್ ಡೈಮಂಡ್ (Black Diamond) ನಿಮಗೆ ಕಾಣಿಸುತ್ತದೆ. ಇದು 14.7 ಮಿಲಿಲೀಟರ್ ರಿಟ್ಜ್ ವಿನ್ಯಾಸದಲ್ಲಿದೆ.
ಇನ್ನು ಇದರ ಬೆಲೆಯ ವಿಚಾರಕ್ಕೆ ಬಂದರೆ, ಅದು ಬರೋಬ್ಬರಿ 1,59,83,750 ರೂಪಾಯಿಗಳಾಗಿದೆ. ಅಂದರೆ ಈ ಬೆಲೆಯಲ್ಲಿ ಬರೋಬ್ಬರಿ ಮೂರು ಮರ್ಸಿಡಿಸ್ ಬೆನ್ಜ್ ಜಿಎಲ್ಎ ಕಾರುಗಳನ್ನು ಖರೀದಿ ಮಾಡಬಹುದಾಗಿದೆ. ಇದು ಒಟ್ಟು 1,118 ವಜ್ರಗಳನ್ನು ಹೊಂದಿರುವ ಡೈಮಂಡ್ ಕೋಟೆಡ್ ಕ್ಯಾಪ್ ನೊಂದಿಗೆ ಬಾಟಲಿಯಲ್ಲಿ ಬರುತ್ತದೆ.