Ramachari : ಕಿಟ್ಟಿಗೆ ವಾರ್ನಿಂಗ್ ಕೊಟ್ಟ ವೈಶಾಖ, ಮನಸ್ಸಲ್ಲೇ ಹಿಗ್ಗಿದ ಕಿಟ್ಟಿ: ರಾಮಾಚಾರಿಯಲ್ಲಿ ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Ramachari : ಕಲರ್ಸ್ ಕನ್ನಡ ವಾಹಿನಿಯ ಪ್ರಸಾರವಾಗುತ್ತಾ ಕಿರುತೆರೆಯ ಟಾಪ್ ಐದು ಧಾರಾವಾಹಿಗಳಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿರುವ ರಾಮಾಚಾರಿ (Ramachari) ಧಾರಾವಾಹಿಯು ಜನಪ್ರಿಯ ಸೀರಿಯಲ್ ಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ರಾಮಾಚಾರಿ ಮತ್ತು ಕಿಟ್ಟಿ ಅವಳಿ ಸಹೋದರರಾಗಿದ್ದು, ಅದರಲ್ಲಿ ಕಿಟ್ಟಿ ಕುಟುಂಬದಿಂದ ದೂರಾಗಿ ವರ್ಷಗಳ ಕಾಲ ತನ್ನ ತಂದೆ ತಾಯಿ ಯಾರೆಂದು ತಿಳಿಯದೇ ರೌಡಿಯಾಗಿದ್ದವನು, ವಿಲನ್ ಗಳ ಕುಮ್ಮಕ್ಕಿನಿಂದ ರಾಮಾಚಾರಿಯಂತೆ ತನ್ನದೇ ಮನೆ ಸೇರಿದ್ದ. ಅವನಿಗೆ ಸತ್ಯ ದರ್ಶನವಾದ ಮೇಲೆ ಬದಲಾಗಿದ್ದಾನೆ.

ರಾಮಾಚಾರಿ ಮನೆಯಲ್ಲೇ ಇರುವ ಅವನ ಅತ್ತಿಗೆ ವೈಶಾಖ ಕೂಡಾ ಹಳೆಯ ದ್ವೇಷದಿಂದ ಆ ಕುಟುಂಬಕ್ಕೆ ಕೆಡುಕನ್ನೇ ಮಾಡುತ್ತಾ, ಕಿಟ್ಟಿಯ ಜೊತೆ ಕೈ ಜೋಡಿಸಿದ್ದಳು. ಆದರೆ ಈಗ ಅವಳಲ್ಲಿ ಬದಲಾವಣೆ ಕಂಡಿದೆ. ತನ್ನ ತಪ್ಪಿನ ಅರಿವಾಗಿದೆ. ಆದರೆ ಇದನ್ನ ನಂಬದ ಕಿಟ್ಟಿ ಅವಳನ್ನು ಪರೀಕ್ಷೆ ಮಾಡೋದಕ್ಕೆ ವೈಶಾಖಾಗೇ ತಾನು ಬದಲಾಗಿರೋ ವಿಷಯದ ಸುಳಿವನ್ನ ನೀಡಿದೆ ಕೆಟ್ಟವನ ಹಾಗೆಯೇ ಮಾತನಾಡಿದ್ದು, ವೈಶಾಖ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ.

ವೈಶಾಖ ನಾನು ಬದಲಾಗಿದ್ದೇನೆ, ನನ್ನ ತಂದೆಯನ್ನು ಕೊಂದವರು ಇವರು ಅಂತ ತಪ್ಪು ತಿಳ್ಕೊಂಡಿದ್ದೆ. ಆದರೆ ನನ್ನ ತಂದೆ ಅವರು ಮಾಡಿದ ತಪ್ಪಿನಿಂದ ಸತ್ತರು. ಮಾವಯ್ಯ ನಮ್ಮ ಜೀವನವನ್ನ ನೋಡಿಕೊಳ್ತಾ ಬಂದಿದ್ದು, ಅವರ ಸಂಪಾದನೆಯಲ್ಲಿ ಒಂದಷ್ಟು ಹಣ ನಮಗೆ ಕಳಿಸ್ತಾ ಇದ್ರು. ಆದರೆ ಅದು ನನಗೆ ಗೊತ್ತಿರಲಿಲ್ಲ. ಈಗ ಅದೆಲ್ಲಾ ತಿಳಿದ ಮೇಲೆ ನನಗೆ ಬೇಸರ ಆಗ್ತಿದೆ. ನಾನು ತಪ್ಪು ಮಾಡಿಬಿಟ್ಟೆ ಎಂದೆಲ್ಲಾ ಹೇಳಿದ್ದಾಳೆ.

ಅಲ್ಲದೇ ಕಿಟ್ಟಿಗೆ ನೀನು ಈ ಮನೆಯ ರಕ್ತ ಹಂಚಿಕೊಂಡು ಹುಟ್ಟಿರೋನು, ನೀನು ಹೀಗೆ ಅಂದ್ರೆ ಹೇಗೆ? ಮೊದಲು ನೀನು ಬದಲಾಗಬೇಕು. ಒಳ್ಳೆ ರೀತಿಯಲ್ಲಿ ಮನೆಯ ಮಗನಾಗಿ ಇರ್ತೀಯಾ ಅಂದ್ರೆ ಇರು, ಇಲ್ಲಾ ಅಂದ್ರೆ ನಾನೇ ನಿನ್ನನ್ನ ಪೋಲಿಸರಿಗೆ ಹಿಡಿಡುಕೊಡ್ತೀನಿ ಅಂತ ಎಚ್ಚರಿಕೆ ಕೊಟ್ಟಿದ್ದಾಳೆ. ವೈಶಾಖ ಬದಲಾಗಿರೋದನ್ನು ನೋಡಿ ಕಿಟ್ಟಿ ಮನಸ್ಸಿನಲ್ಲೇ ಸಮಾಧಾನ ಪಟ್ಟಿದ್ದಾ‌ನೆ.

Leave a Comment