Bhagyalakshmi: ಆ ಕಡೆ ಭಾಗ್ಯಾಗೆ ಸಿಕ್ಕ ಕೆಲಸ ಹೋಯ್ತು, ಈ ಕಡೆ ಪ್ರೇಕ್ಷಕರು ನಮ್ಮ ತಾಳ್ಮೆ ಮೀರೋಯ್ತು ಅಂತಿರೋದ್ಯಾಕೆ

Written by Soma Shekar

Published on:

---Join Our Channel---

Bhagyalakshmi : ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಭಾಗ್ಯ ಲಕ್ಷ್ಮೀ (Bhagyalakshmi) ಸಹಾ ಸೇರಿದೆ. ಭಾಗ್ಯ ಗಂಡ ತಾಂಡವ್ ಗೆ ಭಾಗ್ಯ ಬೇಕಾಗಿಲ್ಲ, ಅವನಿಗೆ ಶ್ರೇಷ್ಠಾ ಜೊತೆ ಮದುವೆ ಬೇಕಾಗಿದೆ. ಅದಕ್ಕೆ ಹೆಂಡತಿಯಿಂದ ವಿಚ್ಚೇದನ ಪಡೆಯೋದಕ್ಕೆ ಭಾಗ್ಯಾಳನ್ನು ತಪ್ಪು ಅಂತ ತೋರಿಸೋದಕ್ಕೆ, ಅವಳೊಬ್ಬ ದಡ್ಡಿ ಅಂತ ಸಾಬೀತು ಮಾಡೋದಕ್ಕೆ ಒಂದಾದ ಮೇಲೆ ಇನ್ನೊಂದು ಅನ್ನೋತರ ಕುತಂತ್ರಗಳನ್ನ ಮಾಡ್ಕೊಂಡು ಬರ್ತಾನೆ ಇದ್ದಾನೆ, ಶ್ರೇಷ್ಠಾ ಕೂಡಾ ಅವನ ಜೊತೆಗೆ ಕೈ ಜೋಡಿಸಿದ್ದಾಳೆ. ಮನೆಯಲ್ಲೇ ಗೆರೆ ಎಳೆದು ಮನೆಯನ್ನ ಎರಡು ಭಾಗ ಮಾಡ್ಕೊಂಡಿದ್ದಾರೆ.

ತನ್ನ ಭಾಗದಲ್ಲಿ ಇರೋ ಅತ್ತೆ, ಮಾವ, ಮಕ್ಕಳ ಜವಾಬ್ದಾರಿ ಭಾಗ್ಯ ಮೇಲಿದೆ. ‌ಮನೆಯಲ್ಲಿರೋ ಕಷ್ಟಗಳನ್ನು ದೂರ ಮಾಡೋಕೆ ಭಾಗ್ಯ ಕೆಲಸ ಮಾಡಲೇ ಬೇಕಾಗಿದೆ. ಅದಕ್ಕೆ ಭಾಗ್ಯ ತನ್ನ ಕೈ ರುಚಿಯನ್ನೇ ಬಂಡವಾಳ ಮಾಡ್ಕೊಂಡು ಹೊಟೇಲ್ ಒಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಳು. ಅದರ ಮಾಲೀಕರು ಕೂಡಾ ಒಳ್ಳೆವ್ರೇ ಆಗಿದ್ರು. ಭಾಗ್ಯ ಮಾಡೋ ಅಡುಗೆ ರುಚಿ ಕೂಡಾ ಎಲ್ಲರಿಗೂ ಇಷ್ಟವಾಗಿತ್ತು‌.

ಇದೇ ವೇಳೆ ಶ್ರೇಷ್ಠಾ ಭಾಗ್ಯ ತಂಗಿ ಮದುವೆಗೆ ಕೊಟ್ಟಿದ್ದ ಎರಡು ಲಕ್ಷ ವಾಪಸ್ ಕೊಡು ಅಂತ ಕೇಳಿದ್ದಾಳೆ. ಅದೊಂದು ಸಮಸ್ಯೆ ಭಾಗ್ಯಾನ ಹೊಸದಾಗಿ ಕಾಡ ತೊಡಗಿದೆ. ಈ ಗೊಂದಲದಲ್ಲಿ ಹೊಟೇಲ್ ಗೆ ತಡವಾಗಿ ಬಂದ ಭಾಗ್ಯಾಗೆ ಅಲ್ಲಿ ಕೂಡಾ ಸಮಸ್ಯೆ ಶುರುವಾಗಿದೆ. ಹೊಟೇಲ್ ನ ಮಾಲೀಕರು ಬದಲಾಗಿದ್ದು, ಅಲ್ಲೊಬ್ಬ ಗಯ್ಯಾಳಿ ಹೆಂಗಸು ಬಂದಿದ್ದಾಳೆ. ಭಾಗ್ಯ ಮೇಲೆ ಅರಚಾಡಿ, ಕೂಗಾಡಿ ಕೆಲಸಕ್ಕೆ ಬರಲೇಬೇಡ ಅಂತ ಹೇಳಿದ್ದಾಳೆ.

ಭಾಗ್ಯ ಬೇಡಿಕೊಂಡ್ರೂ ಗಯ್ಯಾಳಿ ಹೆಂಗಸು ಭಾಗ್ಯ ಬಗ್ಗೆ ಕನಿಕರ ಕೂಡಾ ತೋರಿಸದೇ ಜನರ ಮುಂದೆಯೇ ಭಾಗ್ಯಳ ಮೇಲೆ ಅರಚಾಡಿ, ಎಳೆದು ಹೊರಗೆ ನೂಕಿದ್ದಾಳೆ. ಇದೆಲ್ಲಾ ನೋಡ್ತಾ ನೋಡ್ತಾ ನೆಟ್ಟಿಗರು ಈಗ ಅಸಮಾಧಾನ ಹೊರಹಾಕಿದ್ದಾರೆ. ಕಥೆನ ಇನ್ನೆಷ್ಟು ರಬ್ಬರ್ ತರ ಎಳೀತೀರಾ? ಭಾಗ್ಯಳ ಕಷ್ಟಕ್ಕೇನೂ ಕೊನೆ ಅನ್ನೋದ ಇಲ್ವಾ, ಬರೀ ಇದನ್ನೇ ನೋಡಿ ನೋಡಿ ಸಾಕಾಗಿದೆ ಎಂದು ಕಾಮೆಂಟ್ ಗಳನ್ನ ಮಾಡಿದ್ದಾರೆ.

ಇನ್ನೂ ಕೆಲವರು ಬರೀ ಇದೇ ನೋಡಿ ಬೇಜಾರಾಗಿ ನಾವು ಸೀರಿಯಲ್ ನ ನೋಡೋದೇ ಬಿಟ್ಟು ಬಿಟ್ಟಿದ್ದೀವಿ ಅಂದಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತೆ ಆದ್ರೆ ಇಲ್ಲಿ ಮತ್ತೆ ಮತ್ತೆ ಅದೇ ರಿಪೀಟ್ ಆಗಿ ಬೋರ್ ಹೊಡೆಸ್ತಾ ಇದೆ ಅಂತ ಕೂಡಾ ಕಾಮೆಂಟ್ ಗಳು ಬಂದಿರೋದನ್ನ ನೋಡಬಹುದಾಗಿದೆ. ಒಂದು ಕಡೆ ಮನರಂಜನೆ ನೀಡುತ್ತಲೇ ಇನ್ನೊಂದು ಕಡೆ ಭಾಗ್ಯಲಕ್ಷ್ಮೀ ಟೀಕೆಗೂ ಗುರಿಯಾಗಿದೆ.

Leave a Comment