Jai Hanuman: ಟಾಲಿವುಡ್ ನಲ್ಲಿ ಹೊಸ ಚರ್ಚೆ, ಅಪ್ಪ ಮಗ ಇಬ್ಬರಲ್ಲಿ ಹನುಮಂತನ ಪಾತ್ರ ಮಾಡೋದ್ಯಾರು?

Written by Soma Shekar

Published on:

---Join Our Channel---

Jai Hanuman: ಈ ವರ್ಷದ ಆರಂಭದಲ್ಲಿ ತೆರೆಗೆ ಬಂದು ವಿಜಯ ಪತಾಕೆಯನ್ನು ಹಾರಿಸಿದ ಸಿನಿಮಾ ಹನುಮಾನ್ (Hanuman). ನಿರ್ದೇಶಕ ಪ್ರಶಾಂತ್ ವರ್ಮಾ (Prashant Varma) ಮತ್ತು ನಟ ತೇಜ ಸಜ್ಜಾ (Teja Sajja) ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಸಿನಿಮಾ ಪ್ರೇಕ್ಷಕರ ಮೇಲೆ ಮೋಡಿ ಮಾಡಿತ್ತು. ಹನುಮಾನ್ ಸಿನಿಮಾದಲ್ಲಿ ಬಹುದೊಡ್ಡ ಸ್ಟಾರ್ ಗಳು, ನೂರಾರು ಕೋಟಿ ಬಂಡವಾಳ ಇಲ್ಲವಾದರೂ ಸಿನಿಮಾ ಜನರ ಮನಸ್ಸನ್ನ ಗೆದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವನ್ನು ಸಾಧಿಸಿದೆ.

ಹನುಮಾನ್ ಸಿನಿಮಾದ ನಂತರ ಈ ಸಿನಿಮಾದ ಸೀಕ್ವೆಲ್ ಕಡೆಗೆ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳ ಗಮನ ನೆಟ್ಟಿದೆ. ಈಗಾಗಲೇ ಹನುಮಾನ್ ಸಿನಿಮಾದ ಸೀಕ್ವೆಲ್ ಜೈ ಹನುಮಾನ್ (Jai Hanuman) ಸಿನಿಮಾದ ಪೋಸ್ಟರ್ ಕೂಡಾ ಬಿಡುಗಡೆ ಆಗಿ ಸಾಕಷ್ಟು ಕುತೂಹಲವನ್ನು ಕೆರಳಿಸಿರುವುದು ಸಹಾ ಸತ್ಯವಾದ ವಿಚಾರವಾಗಿದೆ.

ಹನುಮಾನ್ ಸಿನಿಮಾದ ಸೀಕ್ವೆಲ್ ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಇರುವಾಗಲೇ ಈ ಸಿನಿಮಾದಲ್ಲಿ ಹನುಮಂತನ ಪಾತ್ರವನ್ನು ಯಾರು ಮಾಡ್ತಾರೆ ಅನ್ನೋ ವಿಚಾರವಾಗಿ ಹೊಸದೊಂದು ಸುದ್ದಿ ಹರಿದಾಡಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇತ್ತೀಚಿಗೆ ಈ ಸಿನಿಮಾದ ‌ನಿರ್ಮಾಪಕರಾದ ನಿರಂಜನ್ ರೆಡ್ಡಿ ಅವರ ಪತ್ನಿ ಈ ವಿಚಾರವಾಗಿ ಮಾತನಾಡಿದ್ದಾರೆ.

ಹನುಮಂತನ ಪಾತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅಥವಾ ರಾಮ್ ಚರಣ್ (Ram Charan) ಅವರು ಇದ್ದರೆ ಚೆನ್ನಾಗಿರುತ್ತದೆ ಎಂದು ನನಗನಿಸಿದೆ. ಇಬ್ಬರಲ್ಲಿ ಯಾರು ಆ ಪಾತ್ರ ಮಾಡಿದರೂ ಚೆನ್ನಾಗಿರುತ್ತೆ. ನಾವು ಇದನ್ನು ಸಿನಿಮಾ ಅಂತಲ್ಲ ದೇವರ ಕಥೆಯನ್ನು ಜನರಿಗೆ ಹೇಳಲು ಹೊರಟಿರುವಂತೆ ಭಾವಿಸಿದ್ದೇವೆ, ಅದಕ್ಕೆ ಆ ದೇವರ ಆಯ್ಕೆ ಯಾರು ನೋಡಬೇಕು ಎಂದಿದ್ದಾರೆ ನಿರ್ಮಾಪಕನ ಪತ್ನಿ.

ಈ ವಿಷಯ ಸುದ್ದಿಯಾದ ಮೇಲೆ ಮೆಗಾ ಫ್ಯಾನ್ಸ್ ಬಹಳ ಥ್ರಿಲ್ ಆಗಿದ್ದಾರೆ. ಅನೇಕರು ಚಿರಂಜೀವಿ ಅವರು ಆ ಪಾತ್ರಕ್ಕೆ ಸೂಕ್ತ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಹನುಮಾನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಹನುಮಂತನ ಆಗಮನ ಆಗಿದ್ದು, ಜೈ ಹನುಮಾನ್ ನಲ್ಲಿ ಈ ಪಾತ್ರ ಹೆಚ್ಚು ತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ವಾಸ್ತವವಾಗಿದೆ.

Leave a Comment