Smartphone ಬರ್ತಿದೆ ದೇಶದಲ್ಲೇ ಅತಿ ಕಡಿಮೆ ಬೆಲೆಯ 5G ಫೋನ್: ಕೊಳ್ಳೋದಕ್ಕೆ ಸಜ್ಜಾಗಿ, ದುಬಾರಿ ಫೋನ್ ಗಳ ಆಟಕ್ಕೆ ಬ್ರೇಕ್!

0 191

Smartphone :  5G ಸ್ಮಾರ್ಟ್‌ ಫೋನ್‌ಗಳು ಸಾಕಷ್ಟು ದುಬಾರಿಯಾಗಿದ್ದ ಒಂದು ಸಮಯವಿತ್ತು ಹಾಗೂ ಒಂದರ್ಥದಲ್ಲಿ ನೋಡಿದಾಗ ಕೇವಲ ಪ್ರೀಮಿಯಂ ಫೋನ್ ಗಳು ಮಾತ್ರವೇ ಲಭ್ಯವಿತ್ತು. ಆದರೆ ಈಗ ಸಮಯ ಬದಲಾಗಿದೆ. ಈಗ ನಮ್ಮ ಬಜೆಟ್ ನಲ್ಲೇ ಉತ್ತಮವಾದ 5G ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ಅಂದರೆ ಮಿಡ್ ರೇಂಜ್ ನಲ್ಲಿ ನಮಗೆ ಸ್ಮಾರ್ಟ್ ಫೋನ್ ಗಳು ನಮಗೆ ಲಭ್ಯವಾಗುತ್ತಿವೆ.  ಆದರೂ 10,000 ರೂ. ಗಳ ಶ್ರೇಣಿಯಲ್ಲಿ ಈಗಲೂ ಸಹಾ 5G ಫೋನ್‌ ಗಳ ಹೆಚ್ಚು ಆಯ್ಕೆಗಳು ನಮಗೆ ಲಭ್ಯವಿಲ್ಲ.

ಆದರೆ ಈಗ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್ ಫೋನ್ ಗಾಗಿ ಕಾಯುತ್ತಿದ್ದವರ ನಿರೀಕ್ಷೆಗಳು ನಿಜವಾಗುವ ಸಮಯ ಹತ್ತಿರದಲ್ಲೇ ಇದೆ ಎನ್ನುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಹೌದು, iTel ಭಾರತದಲ್ಲಿ ರೂ. 10,000 ಕ್ಕಿಂತ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ : Expensive EVs : ಭಾರತದ ಅತ್ಯಂತ ದುಬಾರಿ ಟಾಪ್ 5 ಎಲೆಕ್ಟ್ರಿಕ್ ಕಾರುಗಳು! ಇವುಗಳ ಫೀಚರ್ಸ್, ಬೆಲೆ ಎರಡೂ ಅದ್ಭುತ

itel P55 5G : iTel ಭಾರತದಲ್ಲಿ ತನ್ನ ಮೊದಲ  5G ಸ್ಮಾರ್ಟ್‌ ಫೋನ್ ಅನ್ನು ಇದೇ ಸೆಪ್ಟೆಂಬರ್ ನ  ಅಂತ್ಯದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.  ಈ ಫೋನ್ ಅನ್ನು iTel P55 5G ಎನ್ನುವ ಹೆಸರನ್ನು ನೀಡಲಾಗಿದೆ. ಹಬ್ಬದ ಸೀಸನ್ ನಲ್ಲಿ ಫೋನ್ ಕೊಳ್ಳಲು ಬಯಸುವವರಿಗೆ ಈ ಸ್ಮಾರ್ಟ್ ಫೋನ್ ಒಂದು ಉತ್ತಮ ಆಯ್ಕೆಯಾಗಲಿದೆ.  iTel P55 5G  ಸ್ಮಾರ್ಟ್ ಫೋನ್ ನ ಬೆಲೆಯು  10,000 ರೂ. ಗಳಿಗಿಂತ ಕಡಿಮೆ ಇರುತ್ತದೆ ಎನ್ನುವ ನಿರೀಕ್ಷೆಗಳಿದ್ದು, ಇದು ಭಾರತದ ಅತ್ಯಂತ ಅಗ್ಗದ 5G ಸ್ಮಾರ್ಟ್‌ ಫೋನ್ ಆಗಲಿದೆ.

ಕಂಪನಿಯ ಸಿಇಒ 2023 ರ ಆರಂಭದಲ್ಲೇ ಈ  5G ಫೋನ್ ಅನ್ನು ಬಿಡುಗಡೆ ಮಾಡುವ ವಿಚಾರವನ್ನು ತಿಳಿಸಿದ್ದರು. ಐಟೆಲ್ ಎಂಟ್ರಿ ಲೆವೆಲ್ ಸ್ಮಾರ್ಟ್‌ ಫೋನ್‌ಗಳನ್ನು ತರುವಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರ ಬೆಲೆಯು ಸುಮಾರು 8 ಸಾವಿರ ರೂ.ಗಳಾಗಿದೆ.  ಈ ಕಂಪನಿಯ ಟ್ಯಾಬ್ಲೆಟ್ 12 ಸಾವಿರ ರೂ ಗಳಿಗೆ ಲಭ್ಯವಿದೆ. ಈಗ ಕಂಪನಿಯು ಕೈಗೆಟುಕುವ ಬೆಲೆಯ 5G ಸ್ಮಾರ್ಟ್ ಫೋನ್ ಅನ್ನು  ಪರಿಚಯಿಸಲು ಸಜ್ಜಾಗಿದೆ.

ಈ ಫೋನ್ ನ ಚಿತ್ರವೊಂದನ್ನು ಹಂಚಿಕೊಂಡಿದ್ದು, ಇದರ ಹಿಂಬದಿಯಲ್ಲಿವ ಎರಡು ಕ್ಯಾಮೆರಾಗಳು ಇರುವಂತೆ ಕಂಡಿದೆ. ಫೋನ್ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕೀಗಳನ್ನು ಹೊಂದಿದ್ದು, ಇದರ ಲಾಂಚ್‌ಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಮುಂದಿನ ದಿನಗಳಲ್ಲಿ ಈ ಸ್ಮಾರ್ಟ್ ಫೋನ್ ನ ಇನ್ನಷ್ಟು ಆಸಕ್ತಿಕರ ವಿಚಾರಗಳು ಅಥವಾ ಮಾಹಿತಿಗಳು ಹೊರ ಬರುವ ಸಾಧ್ಯತೆಗಳಿವೆ.

Leave A Reply

Your email address will not be published.