UPI ಪೇಮೆಂಟ್ ಮಾಡ್ತೀರಾ? ಎಚ್ಚರ! ಏಪ್ರಿಲ್ 1 ರಿಂದ ಜೇಬಿಗೆ ಬೀಳುತ್ತೆ ಕತ್ತರಿ! ಇದನ್ನು ಸ್ವಲ್ಪ ಓದಿ

Entertainment Featured-Articles Movies News
33 Views

Charges on UPI payment: ಇತ್ತೀಚಿನ ದಿನಗಳಲ್ಲಿ ನಗದು ವ್ಯವಹಾರ ಹಿಂದಿನಂತೆ ಇಲ್ಲ. ನಗರ, ಪಟ್ಟಣಗಳಲ್ಲಿ ಕ್ಯಾಶ್ ಬದಲಾಗಿ ಕಾರ್ಡ್ ಅಥವಾ ಆನ್ಲೈನ್ ಪೇಮೆಂಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ನಗದು ಜೇಬಿನಲ್ಲೇ ಇರಲೇಬೇಕೆಂಬ ತಾಪತ್ರಯ ಇಲ್ಲ ಎನ್ನುವುದು ನಮಗೆಲ್ಲಾ ತಿಳಿದಿದೆ. ಅನೇಕರಿಗೆ ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ತಿರುಗುವ ಕೆಲಸಕ್ಕೆ ಒಂದು ಸರಳ ಉತ್ತರವಾಗಿತ್ತು ಆನ್ಲೈನ್ ಪಾವತಿಗಳು. ಇಂತಹ ಪಾವತಿಗಾಗಿ ನಾವು ಹೆಚ್ಚಾಗಿ ಬಳಸುವುದು ಗೂಗಲ್ ಪೇ(Google pay), ಫೋನ್ ಪೇ(Phone pe), ಪೇಟಿಎಂ(Paytm) ಗಳನ್ನು. ಇಲ್ಲಿ ನಮ್ಮ‌ ಯುಪಿಐ ಬಳಸಿ ಸುಲಭವಾಗಿ ಹಣ ಪಾವತಿ ಮಾಡಿ ಬಿಡುತ್ತಿದ್ದೆವು.

ಆದರೆ ಈಗ ಇಂತಹ ಪಾವತಿಗಳನ್ನು ಮಾಡುತ್ತಿರುವವರಿಗೆ ಶಾ ಕ್ ನೀಡುವ ಸುದ್ದಿಯೊಂದು ಹೊರಗೆ ಬಂದಿದೆ. ಹೌದು, ಯುಪಿಐ(UPI) ಮೂಲಕ ಹಣವನ್ನು ಪಾವತಿ ಮಾಡುತ್ತಿದ್ದವರ ಜೇಬಿಗೆ ಕತ್ತರಿ ಹಾಕುವಂತಹ ಹೊಸ ಅಪ್ಡೇಟ್ ಒಂದು ಈಗ ದೊಡ್ಡ ಸುದ್ದಿಯಾಗಿದೆ. ಏಪ್ರಿಲ್ 1, 2023 ರಿಂದ ಯುಪಿಐ ವಹಿವಾಟು ಜನರಿಗೆ ದುಬಾರಿಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೆಸ್ ಪಾವತಿಗೆ ಸಂಬಂಧಿಸಿದಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸದೊಂದು ಸುತ್ತೋಲೆಯನ್ನು ಹೊರಡಿಸಿದೆ. ಇದರ ಪ್ರಕಾರ ಏಪ್ರಿಲ್ 1 ರಿಂದ ಯುಪಿಐ ಮೂಲಕ ನಡೆಸುವ ವಹಿವಾಟುಗಳ ಮೇಲೆ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕವನ್ನು ವಿಧಿಸಲು ಶಿಫಾರಸು ಮಾಡಲಾಗಿದೆ.

ಇಂತಹದೊಂದು ಹೊಸ ಬದಲಾವಣೆ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತದೆ. 1.1 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಸೂಚಿಸಲಾಗಿದ್ದು, ಎನ್‌ಪಿಸಿಐ ಹೊರಡಿಸಿರುವ ಸುತ್ತೊಲೆಯಲ್ಲಿ ಬರುವ ಏಪ್ರಿಲ್ ಒಂದರಿಂದ 2000 ರೂ.ಗಳಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ 1.1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ವ್ಯಾಪಾರ ವಹಿವಾಟಿಗೆ ಅಂದರೆ ಸ್ಪಷ್ಟವಾಗಿ ಹೇಳುವುದಾದರೆ ವ್ಯಾಪಾರಿಗಳಿಗೆ ಹಣವನ್ನು ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಈ ಶುಲ್ಕವನ್ನು ವಿಧಿಸಲಾಗುತ್ತದೆ. ವ್ಯಾಲೆಟ್ ಅಥವಾ ಕಾರ್ಡ್ ಮೂಲಕ ಮಾಡಿದ ವಹಿವಾಟು ಪಿಪಿಐ (PPI) ನಲ್ಲಿ ಬರುತ್ತದೆ

ಎನ್‌ಪಿಸಿಐ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಏಪ್ರಿಲ್ 1 ರಿಂದ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಗಳಂತಹ ಡಿಜಿಟಲ್ ಮೋಡ್ ಗಳ ಮೂಲಕ ಮಾಡಿದಂತಹ ಪಾವತಿಗಳು ದುಬಾರಿಯಾಗಲಿದ್ದು, ನೀವು 2000 ಕ್ಕಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಿದರೆ ಅದರ ಬದಲಿಗೆ 1.1 ರಷ್ಟು ಹೆಚ್ಚು ಶುಲ್ಕವನ್ನು ವಿಧಿಸಲಾಗುತ್ತದೆ. ದೇಶದಲ್ಲಿ ಸುಮಾರು 70% ಯುಪಿಐ ವಹಿವಾಟುಗಳು 2000 ರೂ ಗಳಿಗಿಂತ ಹೆಚ್ಚೆಂದು ವರದಿಯೊಂದು ಮಾಹಿತಿಯನ್ನು ನೀಡಿದೆ. ಇದನ್ನೂ ಓದಿ: ಲಾಂಚ್ ಗೂ ಮೊದಲೇ ಗ್ರಾಹಕರನ್ನು ತಲುಪಿದ ಮಾರುತಿ ಜಿಮ್ನಿ: ಈ 9 ನಗರಗಳಲ್ಲಿ ಹೊಸ SUV ಯ ಅಬ್ಬರ

ಈಗ ಏಪ್ರಿಲ್ ಒಂದರಿಂದ ಹೊಸ ನಿಯಮ ಜಾರಿಗೆ ಬರಲಿದ್ದು ಸೆಪ್ಟೆಂಬರ್ 30, 2023ರಲ್ಲಿ ಇದರ ಮೊದಲ ಪರಿಶೀಲನೆ ನಡೆಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಜನರು ಯುಪಿಐ ಬದಲಾಗಿ ಮತ್ತೆ ನಗದು ವಹಿವಾಟಿನ ಕಡೆಗೆ ಗಮನ ನೀಡಿದರೆ ಅದರಲ್ಲಿ ಖಂಡಿತ ಅಚ್ಚರಿಯೇನಿಲ್ಲ.‌ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಇದನ್ನೇ ಚರ್ಚೆ ಮಾಡಿ, ಟೀಕೆಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *