Bhagyalakshmi Bond: ಸಾಮಾನ್ಯವಾಗಿ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಆಕೆಯ ವಿಧ್ಯಾಭ್ಯಾಸ ಹಾಗೂ ಆಕೆಯ ಮದುವೆ ವೆಚ್ಚದ ಬಗ್ಗೆ ಯೋಚಿಸಿ ಅನೇಕರು ಚಿಂತಿಸಲು ಶುರು ಮಾಡುತ್ತಾರೆ. ಸಾಮಾನ್ಯವಾಗಿ ಹೆಣ್ಣು ಮಗು ಜನಿಸಿದರೆ ಆಕೆಯ ಖರ್ಚು ವೆಚ್ಚ ಜಾಸ್ತಿ ಎನ್ನುವ ಮನೋಭಾವ ಸಾಕಷ್ಟು ಜನರಿಗಿದೆ. ಇನ್ನು ಬಡವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಹೆಣ್ಣು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸ ಹಾಗೂ ಆಕೆಯ ಮದುವೆಯ ಖರ್ಚನ್ನು ಸ್ವತಃ ಸರ್ಕಾರ ವಹಿಸಿಕೊಂಡಿದೆ.
ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ಬಗ್ಗೆ ನಿಮ್ಮರಿಗೂ ತಿಳಿದೇ ಇರುತ್ತದೆ. ಹೆಣ್ಣು ಮಗು ಹುಟ್ಟಿದ ತಕ್ಷಣ ಸರ್ಕಾರದ ಈ ಭಾಗ್ಯಲಕ್ಷ್ಮೀ ಬಾಂಡ್ ಮಾಡಿಕೊಳ್ಳುವ ಮೂಲಕ, ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯಬಹುದು. ಮಾರ್ಚ್ 31, 2006 ನಂತರ ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಗಳು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಅರ್ಗರಾಗಿರುತ್ತಾರೆ.
ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬದವರು ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಈ ಯೋಜನೆಯಲ್ಲಿ ನೊಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಯ ಸಂಪೂರ್ಣ ಲಾಭ ಪಡೆಯಬಹುದು. ಒಂದು ಮನೆಗೆ ಕೇವಲ ಇಬ್ಬರೂ ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಆರ್ಹರಾಗಿರುತ್ತಾರೆ.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ನಂತರ, ಅರ್ಜಿಯನ್ನು ಪರಿಶೀಲಿಸಿದ ನಂತರ ಸರ್ಕಾರದಿಂದ ಹೆಣ್ಣು ಮಗಳ ಬ್ಯಾಂಕ್ ಖಾತೆಗೆ 10,000 ಗಳನ್ನು ಜಮಾ ಮಾಡಲಾಗುತ್ತದೆ. ಇನ್ನು ಹೆಣ್ಣು ಮಗಳು 18 ವರ್ಷ ವಯಸ್ಸಿಗೆ ಬಂದ ನಂತರ, ನಿಮ್ಮ ಮೊತ್ತಕ್ಕೆ ಬಡ್ಡಿ ಸೇರಿಸಿ ಸುಮಾರು 1 ಲಕ್ಷದವರೆಗೂ ಹಣವನ್ನು ಪಡೆಯುತ್ತೀರಿ. ಇನ್ನು ಈ ಹಣ ಹೆಣ್ಣು ಮಗು 18 ವರ್ಷ ಪೂರೈಸಿದ ನಂತರ ಆಕೆಗೆ ದೊರೆಯಲಿದೆ.
ಈ ಯೋಜನೆಯ ಅಡಿಯಲ್ಲಿ ನೀವು ವಿಮಾ ಸೌಲಭ್ಯವನ್ನು ಸಹ ಪಡೆಯಬಹುದು, ಭಾಗ್ಯಲಕ್ಷ್ಮೀ ಬಾಂಡ್ ಹೆಣ್ಣು ಮಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ, ಆಕೆಗೆ 25000 ರೂಗಳ ವಿಮೆ ನೀಡಲಾಗುತ್ತದೆ. ಹಾಗೆ ಆ ಹೆಣ್ಣು ಮಗಳು ಸಹಜವಾಗಿ ಸಾವನ್ನಪ್ಪಿದರೆ, ಸುಮಾರು 42,500 ರೂಗಳನ್ನು ನೀಡಲಾಗುತ್ತದೆ. ಒಂದು ವೇಳೆ ಅಪಘಾತದಿಂದ ಆಕೆ ಜೀವ ಕಳೆದುಕೊಂಡರೆ, ಸುಮಾರು 1ಲಕ್ಷ ನೀಡಲಾಗುತ್ತದೆ.