Lakshmi Nivasa : ಚೈತ್ರದ ಪ್ರೇಮಾಂಜಲಿ (Chaitrada Pramanjali) ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ಲವ್ ಸ್ಟೋರಿ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾದ ಹಾಡುಗಳು ಇಂದಿಗೂ ಸಹಾ ಜನಪ್ರಿಯತೆ ಪಡೆದಿರುವುದು ಸಿನಿಮಾ ಯಶಸ್ಸಿಗೆ ಒಂದು ಸಾಕ್ಷಿಯಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಜನರ ಮನಸ್ಸನ್ನು ಗೆದ್ದವರು ನಟಿ ಶ್ವೇತಾ (Shwetha) ಅವರು.

ನಟಿ ಶ್ವೇತಾ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಶ್ವೇತಾ ಅವರು ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಮೂಲತಃ ಚೆನ್ನೈ ನವರಾದ ಶ್ವೇತಾ ಅವರು ಮೂಲ ಹೆಸರು ಲಕ್ಷ್ಮೀ. ವಿನೋದಿನಿ ಎನ್ನುವ ಹೆಸರಿನಲ್ಲಿ ಸಿನಿಮಾ ರಂಗಕ್ಕೆ ಅಡಿಯಿಟ್ಟರು.

ಎಸ್ ನಾರಾಯಣ್ (S Narayan) ಅವರು ಇವರನ್ನು ಶ್ವೇತಾ ಹೆಸರಿನಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪರಿಚಯವನ್ನು ಮಾಡಿದರು. ಮದುವೆ ನಂತರ ಶ್ವೇತಾ ಅವರು ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಆದರೆ ಈಗ ಅವರು ಕಿರುತೆರೆಗೆ ಎಂಟ್ರಿ ನೀಡುವ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಹೌದು, ಕನ್ನಡ ಕಿರುತೆರೆಯಲ್ಲಿ ಶೀಘ್ರದಲ್ಲೇ ಪ್ರಸಾರ ಆರಂಭ ಮಾಡಲಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಮೂಲಕ ಶ್ವೇತಾ ಅವರು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಲ್ಲದೇ ವಾಹಿನಿ ಶೇರ್ ಮಾಡಿಕೊಂಡಿರುವ ಹೊಸ ಪ್ರೊಮೋ ನೋಡಿ ಅನೇಕರು ಅಚ್ಚರಿ ಪಟ್ಟಿದ್ದು, ಶ್ವೇತಾ ಅವರ ಕಮ್ ಬ್ಯಾಕ್ ನೋಡಿ ಖುಷಿ ಪಟ್ಟಿದ್ದಾರೆ.