Air Hostess ನೀವು ಗಗನಸಖಿ ಆಗಬೇಕಾ? ಹಾಗಿದ್ರೆ ಇಲ್ಲಿದೆ ಫುಲ್ ಡೀಟೇಲ್ಸ್! ತಪ್ಪದೇ ಓದಿ

0 36

How to become cabin crew, air hostess: ಇಂಟರ್‌ ನ್ಯಾಶನಲ್ ಏರ್ ಟ್ರಾನ್ಸ್‌ ಪೋರ್ಟ್ ಅಸೋಸಿಯೇಷನ್‌ (international air transport association) ನೀಡಿರುವಂತಹ ವರದಿಯ ಪ್ರಕಾರ, ಭಾರತೀಯ ವಾಯುಯಾನ (Indian aviation industry) ಉದ್ಯಮವು ಇಂದು ವಿಶ್ವದ ಮೂರನೇ ಅತಿದೊಡ್ಡ ಉದ್ಯಮವಾಗಿದೆ ಎನ್ನಲಾಗಿದೆ. ಈ ವಿಷಯವನ್ನು ಕೇಳಿದಾಗ ಇದು ನಿಮಗೆ ಖಂಡಿತ ಅಚ್ಚರಿಯಾದರೂ ಸಹಾ ಇದು ಅಕ್ಷರಶಃ ಸತ್ಯವಾದ ವಿಚಾರವಾಗಿದೆ.

ಆದ್ದರಿಂದಲೇ ಇದು ಗಗನಸಖಿ/ಕ್ಯಾಬಿನ್ ಸಿಬ್ಬಂದಿ ವೃತ್ತಿಪರರ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಇಂದು ವಿಮಾನಯಾನ ಉದ್ಯಮದಲ್ಲಿ ಪ್ರಮುಖ ಭಾಗವೆಂದೇ ಪರಿಗಣಿಸಲ್ಪಟ್ಟಿರುವ ಕ್ಯಾಬಿನ್ ಸಿಬ್ಬಂದಿಯಾಗಿ ವೃತ್ತಿಜೀವನವನ್ನು ಹೇಗೆ ಮಾಡುವುದು ಮತ್ತು ಅದಕ್ಕೆ ಪ್ರತಿಯಾಗಿ ಎಷ್ಟು ವೇತನವನ್ನು ಪಡೆಯಬಹುದು ಎನ್ನುವ ವಿಷಯಗಳನ್ನು ತಿಳಿಯೋಣ ಬನ್ನಿ.

ಕ್ಯಾಬಿನ್ ಸಿಬ್ಬಂದಿ/ಆತಿಥ್ಯಕಾರಿಣಿಯ ಕೆಲಸವೆಂದರೆ, ಪ್ರಯಾಣಿಕರು ವಿಮಾನವನ್ನು ಹತ್ತುವುದರಿಂದ ಹಿಡಿದು ಅವರು ವಿಮಾನದಿಂದ ಇಳಿಯುವವರೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಪೂರೈಸುವುದು ಮತ್ತು ಅವರ ಆರೈಕೆಯನ್ನು ಮಾಡುವುದೇ ಆಗಿರುತ್ತದೆ.

ಅಂದರೆ ಇವರು ಪ್ರಯಾಣಿಕರ ಸೌಕರ್ಯಗಳು, ಅವರ ಸುರಕ್ಷತೆ ಮತ್ತು ವಿಮಾನ ಟೇಕ್ ಆಫ್ ಮಾಡುವ ಮೊದಲು ಎಲ್ಲಾ ತುರ್ತು ವ್ಯವಸ್ಥೆಗಳನ್ನು ಪರಿಶೀಲಿಸುವುದು ಇದರಲ್ಲಿ ಸೇರಿರುತ್ತದೆ. ಕ್ಯಾಬಿನ್ ಸಿಬ್ಬಂದಿ ಎಂದಾಗ ಇಲ್ಲಿ ಗಗನಸಖಿಯರು ಮತ್ತು ಫ್ಲೈಟ್ ಸ್ಟೀವರ್ಡ್‌ಗಳನ್ನು ಒಳಗೊಂಡಿರುತ್ತದೆ.

ಏರ್ ಹೋಸ್ಟೆಸ್ ಅಥವಾ ಗಗನಸಖಿಯಾಗಲು ಬೇಕಾದಂತಹ ಅರ್ಹತೆಗಳು :
ಗಗನಸಖಿಯಾಗಲು, ವಯಸ್ಸು 16 ರಿಂದ 26 ವರ್ಷಗಳ ನಡುವೆ ಇರಬೇಕು ಮತ್ತು ಎತ್ತರ 5.2 ಅಡಿಗಿಂತ ಕಡಿಮೆ ಇರಬಾರದು. ಏರ್ ಹೋಸ್ಟೆಸ್ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಮದುವೆಯಾಗಿರಬಾರದು ಅಥವಾ ಅವಿವಾಹಿತೆಯಾಗಿರಬೇಕು.

ಆಕರ್ಷಕ ವ್ಯಕ್ತಿತ್ವ ಮುಖ್ಯವಾಗಿದ್ದು ಇದರ ಜೊತೆಗೆ ವೈದ್ಯಕೀಯವಾಗಿ ಫಿಟ್ ಆಗಿರುವುದು ಅವಶ್ಯಕವಾಗಿರುತ್ತದೆ. ಶೈಕ್ಷಣಿಕ ಅರ್ಹತೆಯ ವಿಚಾರಕ್ಕೆ ಬಂದರೆ ಯಾವುದೇ ಸ್ಟ್ರೀಮ್‌ನಲ್ಲೇ ಆಗಲಿ 12 ನೇ ತೇರ್ಗಡೆ ಹೊಂದಿರಬೇಕು ಅಥವಾ ವಾಯುಯಾನದಲ್ಲಿ ಪದವಿಪೂರ್ವ ಪದವಿ ಪಡೆದಿರಬೇಕು.

ಗಗನಸಖಿಯಾಗಲು ಬಯಸುವವರಿಗಾಗಿಯೇ ಹಲವಾರು ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಪದವಿ ಮಟ್ಟದ ಕೋರ್ಸ್‌ಗಳನ್ನು ಸಹಾ ನಡೆಸಲಾಗುತ್ತದೆ. ಅದರ ಶುಲ್ಕ ಸರಾಸರಿ ರೂ.50 ಸಾವಿರದಿಂದ ರೂ.1.5 ಲಕ್ಷದವರೆಗೆ ಇರುತ್ತದೆ. ಆಸಕ್ತಿಯಿರುವವರು ಈ ಕೋರ್ಸ್ ಗಳಿಗೆ ದಾಖಲಾಗಿ ತರಬೇತಿ ಪಡೆಯಬಹುದಾಗಿರುತ್ತದೆ.

ಏರ್ ಹೋಸ್ಟೆಸ್ ಆಯ್ಕೆ
ಗಗನಸಖಿಯಾಗಲು ಅಗತ್ಯವಿರುವ ಸೂಕ್ತ ತರಬೇತಿಯನ್ನು ಪಡೆಯಲು ನೀವು ತರಬೇತಿ ಸಂಸ್ಥೆಗಳು ಅಥವಾ ವಿಮಾನಯಾನ ಸಂಸ್ಥೆಗಳಲ್ಲಿ ನಿಗಧಿತ ಅವಧಿಯಲಿ ಅರ್ಜಿ ಸಲ್ಲಿಸಬೇಕು. ಅದಾದ ನಂತರ ಅಭ್ಯರ್ಥಿಗಳ ಪರೀಕ್ಷೆಯು ನಡೆಯುವುದು. ಈ ಪರೀಕ್ಷೆಯಲ್ಲಿ ಆಯ್ಕೆಯಾದವರು ನಂತರ ಏರ್‌ಲೈನ್ಸ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಅದರಲ್ಲಿ ಅರ್ಹತೆ ಪಡೆದವರನ್ನು ಅಂತಿಮ ಸ್ಕ್ರೀನಿಂಗ್‌ ಗೆ ಆಹ್ವಾನಿಸಲಾಗುವುದು. ಇದರಲ್ಲಿ ಧ್ವನಿ, ಭಾಷಾ ನಿರರ್ಗಳತೆ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಪರೀಕ್ಷಿಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರು ತಿಂಗಳ ಗಗನಸಖಿ ತರಬೇತಿಯನ್ನು ನೀಡಲಾಗುವುದು.

ಇದರಲ್ಲಿ ನೆಲದ ಸೇವೆ (Ground Service), ವಾಯುಯಾನ ಸರಕು ನಿರ್ವಹಣೆ (Aviation cargo handling), ಆತಿಥ್ಯ (hospitality) ಮತ್ತು ಗ್ರಾಹಕ ಸೇವೆಗಾಗಿ (customer service) ತರಬೇತಿಗಳು ಸಹಾ ಸೇರಿರುತ್ತವೆ.

ಭಾರತದ ಉನ್ನತ ಏರ್ ಹೋಸ್ಟೆಸ್ ತರಬೇತಿ ಸಂಸ್ಥೆಗಳ ಹೆಸರುಗಳು ಹೀಗಿವೆ.

  • ಫ್ರಾಂಕ್‌ಫಿನ್ ಇನ್‌ಸ್ಟಿಟ್ಯೂಟ್ ಆಫ್ ಏರ್ ಹೋಸ್ಟೆಸ್ ಟ್ರೈನಿಂಗ್, ದೆಹಲಿ
  • ವಿಂಗ್ಸ್ ಏರ್ ಹೋಸ್ಟೆಸ್ ಮತ್ತು ಹಾಸ್ಪಿಟಾಲಿಟಿ ತರಬೇತಿ, ಗುಜರಾತ್
  • ಯೂನಿವರ್ಸಲ್ ಏವಿಯೇಷನ್ ​​ಅಕಾಡೆಮಿ, ಚೆನ್ನೈ
  • ಜೆಟ್ ಏರ್ವೇಸ್ ಟ್ರೈನಿಂಗ್ ಅಕಾಡೆಮಿ, ಮುಂಬೈ
  • ಬಾಂಬೆ ಫ್ಲೈಯಿಂಗ್ ಕ್ಲಬ್ ಕಾಲೇಜ್ ಆಫ್ ಏವಿಯೇಷನ್, ಮುಂಬೈ

ಏರ್ ಹೋಸ್ಟೆಸ್ ಅಥವಾ ಗಗನಸಖಿಯ ಸಂಬಳ
ಭಾರತದಲ್ಲಿ ಗಗನಸಖಿಯರ ಸರಾಸರಿ ಆರಂಭಿಕ ವೇತನವು ವಾರ್ಷಿಕ ರೂ.4 ರಿಂದ 5 ಲಕ್ಷ ರೂಪಾಯಿಗಳಾಗಿರುತ್ತದೆ. ಇದೇ ವೇಳೆ ಅನುಭವಿ ಗಗನಸಖಿಯರು 8 ರಿಂದ 9 ಲಕ್ಷ ರೂಗಳ ವರೆಗೆ ಇರುತ್ತದೆ ಎನ್ನಲಾಗಿದೆ.

Leave A Reply

Your email address will not be published.