Nandini Agarwal ವಿಶ್ವದ ಅತ್ಯಂತ ಕಿರಿಯ CA! ಇಷ್ಟು ಚಿಕ್ಕ ವಯಸ್ಸಿಗೆ ಎಂತ ಸಾಧನೆ! ಅದ್ಭುತ

Written by Soma Shekar

Published on:

---Join Our Channel---

Nandini Agarwal : ಶಿಕ್ಷಣದ (Education) ಮಹತ್ವ ಏನು ಎನ್ನುವುದು ಈಗ ಬಹುತೇಕ ಎಲ್ಲರಿಗೂ ಅರ್ಥವಾಗುತ್ತಿದೆ. ಆದ್ದರಿಂದಲೇ ಅನೇಕರು ತಮ್ಮ ಶೈಕ್ಷಣಿಕ ಪ್ರಗತಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ನಾವು ಈಗ ನಿಮಗೆ ಸಿಎ ಮಾಡಿರುವ ಯುವತಿಯ ಕುರಿತಾಗಿ ಹೇಳಲು ಹೊರಟಿದ್ದು, ಇವರು ಯಾವ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿದ್ದಾರೆಂದು ತಿಳಿದರೆ ಖಂಡಿತ ಶಾಕ್ ಆಗ್ತೀರಾ.‌

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನಂದಿನಿ ಅಗರ್ವಾಲ್ (Nandini Agarwal) ಅತ್ಯಂತ ಕಿರಿಯ ವಯಸ್ಸಿನ ಸಿಎ ಎನ್ನುವ ಹೆಗ್ಗಳಿಕೆಗೆ ಈಗ ಪಾತ್ರವಾಗಿದ್ದಾರೆ. ನಂದಿನಿ ಬಾಲ್ಯದಿಂದಲೂ ಸಹಾ ಓದು, ಅಧ್ಯಯನ ವಿಚಾರದಲ್ಲಿ ಸಹಾ ಬಹಳ ಚುರುಕಾಗಿದ್ದ ವಿದ್ಯಾರ್ಥಿನಿಯಾಗಿದ್ದವರು.

ನಂದಿನಿ ತಮ್ಮ 12 ನೇ ವಯಸ್ಸಿನಲ್ಲೇ 12 ನೇ ತರಗತಿಯ ಪರೀಕ್ಷೆಯನ್ನು ಉತ್ತೀರ್ಣರಾದರು. ಇವರು ಇಂಟರ್ ನಲ್ಲಿ 94.50% ಅಂಕಗಳನ್ನು ಪಡೆದುಕೊಂಡರು. ಮೊರೆನಾ (Morena) ಜಿಲ್ಲೆಯಲ್ಲೇ ಮೊದಲ ಸ್ಥಾನವನ್ನು ನಂದಿನಿ ಪಡೆದುಕೊಂಡಿದ್ದರು.

ಸಿಎ (CA) ಮಾಡುವ ಗುರಿಯನ್ನು ಹೊಂದಿದ್ದ ನಂದಿನಿ ಅದರ ಕಡೆಗೆ ಗಮನವನ್ನು ಹರಿಸಿದರು, ಅಧ್ಯಯನ ಮಾಡಿದರು ಹಾಗೂ ಪರೀಕ್ಷೆಯ ಸಿದ್ಧತೆಯನ್ನು ನಡೆಸಿದರು. ತಮ್ಮ ಶ್ರಮದ ಫಲವಾಗಿ 19 ನೇ ವಯಸ್ಸಿಗೆ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಸಿಎ ಮುಗಿಸಿದ ನಂತರ ಈಕೆಯ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ (Guineas Book of world records) ವಿಶ್ವದ ಅತ್ಯಂತ ಕಿರಿಯ ವಯಸ್ಸಿಯ ಸಿಎ ಎಂಬುದಾಗಿ ದಾಖಲಾಗಿದೆ. ಈ ಮೂಲಕ ನಂದಿನಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

Leave a Comment