Avon E Lite: ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಹೆಚ್ಚಾಗುತ್ತಿರುವ ಕಾರಣ CNG ಹಾಗೂ ಎಲೆಕ್ಟ್ರಿಕ್ ವಾಹನಗಳ ವೇದಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್ ವಾಹನಗಳನ್ನು ಉತ್ತಮ ಶ್ರೇಣಿಯನ್ನು ನೀಡುತ್ತಿದ್ದು, ಗ್ರಾಹಕರ ಒಲವು ಇದೀಗ ಎಲೆಕ್ಟ್ರಿಕ್ ವಾಹನಗಳ ಕಡೆಗೆ ವಾಲುತ್ತಿದೆ. ಇನ್ನು ಹಲವಾರು ಕಂಪನಿಗಳು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಇನ್ನು ನೀವು ಸಹ ಅಗ್ಗದ ಬೆಲೆಯಲ್ಲಿ ಹೆಚ್ಚು ಶ್ರೇಣಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಪುಟ ನಿಮಗಾಗಿ ಬಹಳ ಉಪಯುಕ್ತವಾಗಲಿದೆ. Avon E Lite ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಅಗ್ಗದ ಬೆಲೆಯಲ್ಲಿ ಉತ್ತಮ ಶ್ರೇಣಿ ನೀಡುವ ಭಾರತದ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇನ್ನು ಈ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಳಸುವುದರಿಂದ ಪರಿಸರದ ಮೇಲೆ ಸಹ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.
Avon E Lite ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 12 Ah ಬ್ಯಾಟರಿಯನ್ನು ಒದಗಿಸಲಾಗಿದೆ. ಸುಮಾರು 6 ರಿಂದ 8 ಗಂಟೆಗಳಲ್ಲಿ ಈ ಬ್ಯಾಟರಿಯನ್ನು ನೀವು ಸಂಪೂರ್ಣ ಚಾರ್ಜ್ ಮಾಡಬಹುದು. ಹಾಗೆ ಒಮ್ಮೆ ಚಾರ್ಜ್ ಮಾಡಿದರೆ, ಸುಮಾರು 50 ರಿಂದ 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಈ ಸ್ಕೂಟರ್ ನಲ್ಲಿ 230W BLDC ಮೋಟಾರ್ ಅನ್ನು ಒದಗಿಸಲಾಗಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ 24 km/h ವೇಗವನ್ನು ತಲುಪುತ್ತದೆ.
ಇನ್ನು ಈ Avon E Lite ಸ್ಕೂಟರ್ ನ ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ಕೊರತೆ ಇಲ್ಲದ ರೀತಿ ನೋಡಿಕೊಂಡಿದೆ, ಇದರಲ್ಲಿ ನೀವು ಡ್ರಮ್ ಬ್ರೇಕ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಅಂತಹ ವೈಶಿಷ್ಟ್ಯಗಳನ್ನು ಕಾಣಬಹುದು.
ಇನ್ನು ಈ ಸ್ಕೂಟರ್ ನ ಬೆಲೆ ಬಗ್ಗೆ ಮಾತನಾಡುವುದಾದರೆ, Avon E Lite ನ ಎಕ್ಸ್ ಶೋರೂಂ ಬೆಲೆ ಸುಮಾರು 28,000 ರೂಗಳು ಆಗಿದ್ದು, ಇನ್ನು ಈ ಸ್ಕೂಟರ್ ನ ಆನ್ ರೋಡ್ ಬೆಲೆ ಸುಮಾರು 32,420 ರೂಗಳು ಆಗಿದೆ. ಇನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ನೀವು ಈ ಸ್ಕೂಟರ್ ಅನ್ನು ನಿಮ್ಮ ಮನೆಗೆ ತರಬಹುದು. ಇನ್ನು ಕಂಪನಿಯು ಈ ಸ್ಕೂಟರ್ ನ ಮೇಲೆ EMI ಆಯ್ಕೆಯನ್ನು ಸಹ ನೀಡುತ್ತಿದೆ.