Ather Energy EV: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚಾಗುತ್ತಿದೆ. Ola, TVS, Bajaj ನಂತಹ ಕಂಪನಿಗಳಿಗೆ ಇದೀಗ ಕಠಿಣ ಸ್ಪರ್ಧೆ ನೀಡುವ ಅಥರ್ (Ather) ಕಂಪನಿಯು ತನ್ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಗ್ರಾಹಕರ ಸಂಪೂರ್ಣ ಗಮನ ಇದೀಗ ಈ ಎಲೆಕ್ಟ್ರಿಕ್ ಸ್ಕೂಟರ್ ನ ಮೇಲಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಇದೆ ವೇಳೆ ಕಂಪನಿಯು ತಮ್ಮ ಗ್ರಾಹಕರಿಗಾಗಿ ವಿಶೇಷ ಆಫರ್ ಅನ್ನು ನೀಡಲು ಮುಂದಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ Ather ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಸಹ ಒಂದಾಗಿದೆ. ಇನ್ನು ಇದೀಗ ಕಂಪನಿಯ ಬೇಸ್ ಮಾಡೆಲ್ 450S ಹಾಗೂ ಟಾಪ್ ಎಂಡ್ ಮಾಡಲ್ 450X ಅನ್ನು ನೀವು ಕೇವಲ 25000 ಡೌನ್ ಪೇಮೆಂಟ್ ಪಾವತಿಸಿ, ಖರೀದಿ ಮಾಡುವ ಅವಕಾಶವನ್ನು ಇದೀಗ ಕಂಪನಿ ನೀಡಿದೆ.
ನೀವು Ather 450X ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದರ ಎಕ್ಸ್ ಶೋರೂಂ ಬೆಲೆ ಸುಮಾರು 1.29 ಲಕ್ಷ ಇದ್ದು, ಇದರ ಆನ್ ರೋಡ್ ಬೆಲೆ ಸುಮಾರು ₹1,34,240 ರೂಗಳು ಇದೆ. ನೀವು ಕೇವಲ 25000 ಡೌನ್ ಪೇಮೆಂಟ್ ಪಾವತಿಸಿ, ಈ ಸ್ಕೂಟರ್ ಅನ್ನು ನಿಮ್ಮ ಮನೆಗೆ ತರಬಹುದು. ಇನ್ನು ಮಿಕ್ಕ ₹1,09,290 ಹಣಕ್ಕೆ 9% ಬಡ್ಡಿ ಜೊತೆಗೆ ನೀವು ಪ್ರತಿ ತಿಂಗಳು ₹3,475 ರೂಗಳನ್ನು ಸುಮಾರು 3 ವರ್ಷಗಳಿಗೆ EMI ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಇನ್ನು Ather 450S ನ ಎಕ್ಸ್ ಶೋರೂಂ ಬೆಲೆ ಸುಮಾರು 1.18 ಲಕ್ಷ ರೂಗಳು ಇದ್ದು, ಇದರ ಆನ್ ರೋಡ್ ಬೆಲೆ ಸುಮಾರು 1,22,920 ರೂಗಳು ಇದೆ. ಇನ್ನು ಈ ಮಾದರಿಯನ್ನು ನೀವು 25000 ಡೌನ್ ಪೇಮೆಂಟ್ ಪಾವತಿಸಿ ಖರೀದಿ ಮಾಡಬಹುದು. ಇನ್ನು ಮಿಕ್ಕ 97,920 ರೂಗಳನ್ನು 9% ಬಡ್ಡಿ ಜೊತೆಗೆ ಸುಮಾರು ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು ₹3,114 ರೂಗಳನ್ನು EMI ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಇನ್ನು ನೀವು ಸಹ ಇದೀಗ Ather ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಹತ್ತಿರದ ಶೋರೂಂ ಗೆ ಭೇಟಿ ನೀಡುವ ಮೂಲಕ ನೀವು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.