Varamahalakshmi Festival : ವರಮಹಾಲಕ್ಷ್ಮಿ ಹಬ್ಬದ ದಿನ ಈ ವಸ್ತುಗಳನ್ನು ಮನೆಗೆ ತನ್ನಿ, ಸುಖ ಸಮೃದ್ಧಿ ಪಡೆಯಿರಿ

Written by Soma Shekar

Published on:

---Join Our Channel---

Varamahalakshmi Festival : ಹಿಂದೂ ಧರ್ಮದಲ್ಲಿ ಸಂಪತ್ತಿನ ಒಡತಿ, ಐಶ್ವರ್ಯದ ದೇವತೆ, ಧನ, ಧಾನ್ಯಗಳನ್ನು ಕರುಣಿಸುವ ಮಾತೆ ಎಂದು ಶ್ರೀಮಹಾಲಕ್ಷ್ಮಿಯನ್ನು ಆರಾಧನೆ (Varamahalakshmi Festival) ಮಾಡಲಾಗುತ್ತದೆ. ಇಂದು ಶುಕ್ರವಾರ (ಆಗಸ್ಟ್ 16ರಂದು) ವರಮಹಾಲಕ್ಷ್ಮಿ ವ್ರತ ಹಬ್ಬವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಗುತ್ತಿದೆ. ವರ ಮಹಾಲಕ್ಷ್ಮಿಗೆ ವಿಶೇಷ ಅಲಂಕಾರವನ್ನು ಮಾಡಿ ಸಂಭ್ರಮದಿಂದ ಹಾಗೂ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಪುಣ್ಯಪ್ರದವಾದ ದಿನದಂದು ಮಾತೆ ಮಹಾಲಕ್ಷ್ಮಿಯನ್ನು ಆರಾಧಿಸುವುದರಿಂದ ಸಕಲ ಸಂಪತ್ತನ್ನು ಆ ದೇವಿ ಕರುಣಿಸುವಳು ಎನ್ನುವುದು ನಂಬಿಕೆಯಾಗಿದೆ. ಇಂದು ದೇವಿ ಲಕ್ಷ್ಮಿಯ ಆರಾಧನೆಯ ಜೊತೆಗೆ ಮನೆಗೆ ಕೆಲವೊಂದು ವಸ್ತುಗಳನ್ನು ತರುವುದು ಸಹಾ ಮನೆಗೆ ಒಳ್ಳೆಯದಾಗುವುದು ಹಾಗೂ ಶುಭ ಫಲವನ್ನು ನೀಡುವುದು ಎನ್ನಲಾಗಿದೆ.

ವರಮಹಾಲಕ್ಷ್ಮೀ ಪೂಜೆಯ ದಿನದಂದು ಮನೆಗೆ ಒಂದು ಕಣ್ಣಿನ ತೆಂಗಿನ ಕಾಯಿಯನ್ನು ತರುವುದು ಶುಭ ಎಂದು ಹೇಳಲಾಗಿದೆ.‌ ಈ ದಿನದಂದು ಏಕಾಕ್ಷಿ ತೆಂಗಿನಕಾಯಿ ಮಾತ್ರವೇ ಅಲ್ಲದೇ ಲಕ್ಷ್ಮೀ ದೇವಿಗೆ ಇಷ್ಟವಾದ ದಕ್ಷಿಣಾವರ್ತಿ ಶಂಖವನ್ನು ಮನೆಗೆ ತಂದರೆ ಇಷ್ಟಾರ್ಥಗಳು ಫಲಿಸುವುದು ಎನ್ನುವುದು ಕೂಡಾ ಅನೇಕರ ನಂಬಿಕೆಯಾಗಿದೆ.

ವರಮಹಾಲಕ್ಷ್ಮಿ ಪೂಜೆಯಂದು ತಪ್ಪದೇ ಶ್ರೀಯಂತ್ರವನ್ನು ಮನೆಯಲ್ಲಿ ಪ್ರತಿಷ್ಠಾಪಿಸುವುದು ಹಾಗೂ ತುಪ್ಪದ ದೀಪವನ್ನು ಹಚ್ಚುವ ಮೂಲಕ, ಓಂ ಶ್ರೀಂ ಹ್ರೀಂ ಶ್ರೀಂ ನಮಃ ಮಂತ್ರವನ್ನು ಹೇಳುತ್ತಾ,108 ಬಾರಿ ಜಪಿಸುವುದರಿಂದ ಇಷ್ಟಾರ್ಥಗಳು ಪ್ರಾಪ್ತಿಸುತ್ತವೆ ಎನ್ನುವುದು ಸಹಾ ನಂಬಿಕೆಯಾಗಿದೆ. ವರಮಹಾಲಕ್ಷ್ಮೀ ಹಬ್ಭದ ದಿನ ತಪ್ಪದೇ ಇದನ್ನು ಪಾಲಿಸಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿರಿ.

Jyothi Rai: ಕೆಟ್ಟ ಮೆಸೆಜ್ ಮಾಡೋರ ಜೊತೆ ಮಾತುಕತೆ ನನಗಿಷ್ಟ ಇಲ್ಲ ಅಂತ ಜ್ಯೋತಿರೈ ಟಾಂಗ್ ಕೊಟ್ಟಿದ್ದು ಯಾರಿಗೆ? 1000 ಅಕೌಂಟ್ ಬ್ಲಾಕ್ ಮಾಡಿದ ನಟಿ

Leave a Comment