ಇಲಿಯಾನ ಟು ಆ್ಯಮಿ: ಮದುವೆಗೂ ಮುನ್ನ ಗರ್ಭಿಣಿಯರಾದ ಬಾಲಿವುಡ್ ನಟಿಯರು

Written by Soma Shekar

Published on:

---Join Our Channel---

Bollywood Actresses: ಕಾಲ ಬದಲಾದ ಹಾಗೆ ಆಧುನಿಕತೆಯ ಜೀವನ ಶೈಲಿಯನ್ನು, ವಿಶೇಷವಾಗಿ ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಒಪ್ಪಿ, ಅಪ್ಪಿಕೊಳ್ಳುವ ಮಂದಿಯಲ್ಲಿ ಬಾಲಿವುಡ್ ನಟ, ನಟಿಯರು ಮುಂದಾಗಿರುತ್ತಾರೆ. ಇವರು ಬಿಂದಾಸ್ ಲೈಫ್ ಸ್ಟೈಲ್ ನಿಂದಲೇ ಆಗಾಗ ಸುದ್ದಿಗಳಾಗುತ್ತಾರೆ. ಬಾಲಿವುಡ್ ಕೆಲವು ಸ್ಟಾರ್ ನಟಿಯರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು ಎನ್ನುವ ವಿಚಾರ ಕೇಳಿದಾಗ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಇದರಲ್ಲಿ ಅಚ್ಚರಿಗಿಂತ ವಾಸ್ತವವೇ ಹೆಚ್ಚು ಎನ್ನುವುದರಲ್ಲಿ ಖಂಡಿತ ಸುಳ್ಳಂತೂ ಇಲ್ಲ. ಅಂತಹ ಕೆಲವು ನಟಿಯರ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿಯನ್ನು ತಿಳಿಯೋಣ‌.

ಶ್ರೀದೇವಿ (Sri Devi): ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ, ನಂಬರ್ ಒನ್ ನಟಿಯಾಗಿ ಮೆರೆದು, ಲೇಡಿ ಸೂಪರ್ ಸ್ಟಾರ್ ಖ್ಯಾತಿಯನ್ನು ತನ್ನದಾಗಿಸಿಕೊಂಡವರು ದಿವಂಗತ ನಟಿ ಶ್ರೀದೇವಿ ಅವರು.

ನಟಿ ಶ್ರೀದೇವಿ ಬಾಲಿವುಡ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅನ್ನು ವಿವಾಹವಾದರು. ಆದರೆ ವರದಿಗಳ ಪ್ರಕಾರ ಶ್ರೀದೇವಿ ಅವರು ಮದುವೆಯ ವೇಳೆಯಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ‌.

ನೇಹಾ ಧೂಪಿಯಾ (Neha Dhupia) : ಬಾಲಿವುಡ್ ನ ಬಿಂದಾಸ್ ಬೆಡಗಿ ನೇಹಾ ಧೂಪಿಯಾ ತಮ್ಮ ನೇರ ನಡೆ, ನುಡಿಯಿಂದಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಿಯಾಲಿಟಿ ಶೋ ಗಳ ಜಡ್ಜ್ ಆಗಿ ಪ್ರಸ್ತುತ ದಿನಗಳಲ್ಲಿ ಕಿರುತೆರೆಯಲ್ಲಿ ನಟಿ ಮಿಂಚುತ್ತಿದ್ದಾರೆ.

ನೇಹಾ ಧೂಪಿಯಾ 2018 ರಲ್ಲಿ ಅಂಗದ್ ಬೇಡಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ವರದಿಗಳ ಪ್ರಕಾರ ನಟಿಯು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ‌

ದಿಯಾ ಮಿರ್ಜಾ (Dia Mirza): ಬಾಲಿವುಡ್ ನ ಬೆಡಗಿ, ದಿಯಾ ಮಿರ್ಜಾ ಸಿನಿಮಾಗಳನ್ನು ಮಾಡಿರುವುದು ಕಡಿಮೆಯಾದರೂ ಕೂಡಾ, ಮಾಡಿದ ಸಿನಿಮಾಗಳ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ.

ದಿಯಾ ಮಿರ್ಜಾ ಉದ್ಯಮಿ ವೈಭವ್ ರೇಖಿಯೊಡನೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟವರು. ಆದರೆ ವರದಿಗಳ ಪ್ರಕಾರ ನಟಿಯು ಮದುವೆಯ ನಂತರ ನಾಲ್ಕು ತಿಂಗಳಿಗೆ ಅವರು ಮಗುವಿಗೆ ಜನ್ಮ ನೀಡಿದ್ದರು.

ಇಲಿಯಾನಾ ಡ್ರಿಕ್ರೂಜ್ (Iliyana D’cruz): ದಕ್ಷಿಣ ಸಿನಿಮಾಗಳಲ್ಲಿ ಒಂದು ಸಂಚಲನ ಸೃಷ್ಟಿಸಿ, ಬಾಲಿವುಡ್ ಗೆ ಹಾರಿದ ನಟಿ ಇಲಿಯಾನಾಗೆ ಬಾಲಿವುಡ್ ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ ಎನ್ನುವುದು ಸತ್ಯ..

ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಇಲಿಯಾನಾ ತಾನು ತಾಯಿಯಾಗುತ್ತಿದ್ದೇನೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ ನಟಿ ಇಲಿಯಾನಾ ಇನ್ನೂ ಮದುವೆ ಆಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ನೀನಾ ಗುಪ್ತಾ (Nina Gupta): ಬಾಲಿವುಡ್ ನ ಹಿರಿಯ ನಟಿ ನೀನಾ ಗುಪ್ತಾ ಬಾಲಿವುಡ್ ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದಿರುವ ನಟಿಯಾಗಿದ್ದು, ವಿಶೇಷ ಪಾತ್ರಗಳ ಮೂಲಕವೇ ಸದ್ದು ಮಾಡಿದ ನಟಿ ಇವರು‌.

ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ನಡುವಿನ ಸಂಬಂಧ ದೀರ್ಘ ಕಾಲದ ವರೆಗೂ ನಡೆದಿತ್ತು. ನಟಿಯು ಮದುವೆಯಾಗದೇ ಮಸಾಬಾ ಹೆಸರಿನ ಮಗಳಿಗೆ ಜನ್ಮ ನೀಡಿದರು.

ಆ್ಯಮಿ ಜಾಕ್ಸನ್ (Amy Jackson) : ಬಾಲಿವುಡ್ ನಲ್ಲಿ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೂ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ ಆ್ಯಮಿ ಅಲ್ಪ ಸಮಯದಲ್ಲೇ ಸಾಕಷ್ಟು ದೊಡ್ಡ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡ‌ ನಟಿ.

ಆ್ಯಮಿ ಜಾಕ್ಸನ್ ಕೂಡಾ ಮದುವೆಯಾಗದೇ ಮಗುವಿಗೆ ಜನ್ಮ‌ ನೀಡಿದ್ದರು. ಆ್ಯಮಿ ಮತ್ತು ಅವರ ಬಾಯ್ ಫ್ರೆಂಡ್ ಜಾರ್ಜ್ ಪನಾಯೊಟೌ ಮದುವೆಯಾಗದೇ ಒಂದು ಮಗುವಿನ ಪೋಷಕರಾಗಿದ್ದಾರೆ.

Leave a Comment