ಸೋಶಿಯಲ್ ಮೀಡಿಯಾದಿಂದ ದೂರ ಸರಿದ ಸ್ಟಾರ್ ನಟಿ: ಬಿರುಗಾಳಿ ಎಬ್ಬಿಸಿದೆ ನಟಿಯ ಕೊನೆಯ ಪೋಸ್ಟ್!

0 2

Kajol: ಬಾಲಿವುಡ್ ನ ಸ್ಟಾರ್ ನಟಿ ಕಾಜೋಲ್ ಬಹಳ ಸಮಯದಿಂದಲೂ ತಮ್ಮ ಅಂದ ಮತ್ತು ಅಭಿನಯದ ಮೂಲಕ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಮಿಂಚುತ್ತಾ, ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದ್ದಾರೆ. ಸಿನಿಮಾಗಳ ಹೊರತಾಗಿ ಹೊರಗೆ ಸಿನಿಮಾ ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಸಹಾ ನಟಿ ಕಾಜೋಲ್ ಹೆಚ್ಚಾಗಿ ನಗುವುದು ಮತ್ತು ತಮಾಷೆ ಮಾಡುತ್ತಾ ಸಮಯ ಕಳೆಯುವುದು ಕಂಡು ಬರುತ್ತದೆ. ಈ ನಟಿಯ ಜೊತೆ ಕೆಲಸ ಮಾಡಿರುವ ಸ್ಟಾರ್ ನಟರುಗಳಾದ ಶಾರುಖ್ ಖಾನ್ (Shahrukh Khan) ಮತ್ತು ಸಲ್ಮಾನ್ ಖಾನ್ ಕೂಡಾ ಮಟಿಯ ಫ್ಲರ್ಟಿಂಗ್ ಸ್ವಭಾವದ ಬಗ್ಗೆ ಕೆಲವೊಮ್ಮೆ ಮಾತನಾಡಿದ್ದಾರೆ.

ಆದರೆ ಈಗ ಕಾಜೋಲ್ ಒಂದು ಹೊಸ ವಿಚಾರವಾಗಿ ದೊಡ್ಡ ಚರ್ಚೆಯ ವಿಷಯವಾಗಿದ್ದಾರೆ. ಈ ಬಾರಿ ವಿಷಯ ಸ್ವಲ್ಪ ಗಂಭೀರವಾಗಿರುವಂತೆ ಕಂಡಿದೆ. ನಟಿ ಕಾಜೋಲ್ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ (Social Media) ವಿರಾಮ ತೆಗೆದುಕೊಂಡಿದ್ದಾರೆ. ನಟಿಯು ಈ ವಿವಾರವಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮತ್ತು ಟ್ವಿಟರ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ನಟಿಯ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ಶಾ ಕ್ ಆಗಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟನ ಮೇಲೆ ಬಹು ದೊಡ್ಡ ಆರೋಪ ಮಾಡಿದ ಆ್ಯಂಕರ್ ಅನಸೂಯ: ಸಂಚಲನಕ್ಕೆ ಕಾರಣವಾದ ಪುಷ್ಪ ನಟಿಯ ಹೇಳಿಕೆ

ಕಾಜೋಲ್ ತಮ್ಮ ಪೋಸ್ಟ್ ನಲ್ಲಿ , ನಾನು ಜೀವನದ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಇದನ್ನು ನೋಡಿದ ಅವರ ಅಭಿಮಾನಿಗಳು ಇದೇನಾಯ್ತು ಎಂದು ಆ ತಂ ಕ ಪಡುತ್ತಿದ್ದಾರೆ. ಅಲ್ಲದೇ ನಟಿಯು ಸಾಮಾಜಿಕ ಜಾಲತಾಣಗಳಿಂದ ವಿರಾಮ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕಾಜೋಲ್ ಅವರ ಈ ಪೋಸ್ಟ್ ಅವರ ಎಲ್ಲಾ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.

ಇಷ್ಟು ಮಾತ್ರವೇ ಅಲ್ಲದೇ ಇನ್ಸ್ಟಾಗ್ರಾಂ ನಲ್ಲಿ ಕಾಜೋಲ್ (Kajol Instagram) ಅವರ ಬೇರೆ ಯಾವುದೇ ಪೋಸ್ಟ್ ಸಹಾ ಕಾಣಿಸುತ್ತಿಲ್ಲ. ನಟಿ ಯಾವ ಕಷ್ಟದಲ್ಲಿ ಸಿಲುಕಿದ್ದಾರೆನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.‌ ಆದರೆ ನಟಿಯ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.‌ ಅನೇಕರು ಕಾಮೆಂಟ್ ಮಾಡಿ ಕಾಜೋಲ್ ಅವರಿಗೆ ಪ್ರೋತ್ಸಾಹ ನೀಡುವ ಪ್ರಯತ್ನವನ್ನು ಸಹಾ ಮಾಡುತ್ತಿದ್ದಾರೆ, ತಮ್ಮ ಪ್ರೀತಿ ಮತ್ತು ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಇದೇ ವೇಳೆ ಒಂದಷ್ಟು ಜನ ನೆಟ್ಟಿಗರು ಇದೆಲ್ಲಾ ಕೂಡಾ ಅವರ ಮುಂಬರಲಿರುವ ಹೊಸ ಪ್ರಾಜೆಕ್ಟ್‌ ವಿಷಯವಾಗಿ ಮಾಡುತ್ತಿರುವ ಪ್ರಚಾರ ತಂತ್ರ ಎಂದಿದ್ದಾರೆ. ನೆಟ್ಟಿಗರೊಬ್ಬರು ತಮ್ಮ ಕಾಮೆಂಟ್ ನಲ್ಲಿ, ‘ಇದು ಅವರ ಮುಂದಿನ OTT ಸರಣಿ, ದಿ ಗುಡ್ ವೈಫ್‌ (The Good Wife) ಪ್ರಚಾರದ ತಂತ್ರವಾಗಿದೆ ಅಷ್ಟೇ ಬೇರೆನೂ ಅಲ್ಲ.. ಸುಮ್ಮನೆ ಚಿಂತೆ ಮಾಡಬೇಡಿ ಎಂದಿದ್ದಾರೆ.‌ ಒಂದು ವೇಳೆ ಇದು ಪ್ರಚಾರದ ಒಂದು ಭಾಗವೇ ಆಗಿದ್ದರೆ ಇದು ಅಭಿಮಾನಿಗಳಿಗೆ ನಿಜಕ್ಕೂ ಖುಷಿ ನೀಡಿದರೂ, ಅವರ ಭಾವನೆಗಳೊಂದಿಗೆ ಹೀಗೆ ಮಾಡುವುದು ಸರಿಯಲ್ಲ ಎನ್ನುವುದು ಕೂಡಾ ವಾಸ್ತವವಾಗಿದೆ.

Leave A Reply

Your email address will not be published.